ಮುಂಬಯಿ: ಬಾಲಿವುಡ್ ನಟಿ ಅನನ್ಯ ಪಾಂಡೆ ನಿವಾಸದ ಮೇಲೆ ಗುರುವಾರ(ಅಕ್ಟೋಬರ್ 21) ದಾಳಿ ನಡೆಸಿದ ಎನ್ ಸಿಬಿ(ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಶೋಧ ಕಾರ್ಯಾಚರಣೆ ನಡೆಸಿತು. ಅಧಿಕಾರಿಗಳು ಚುಂಕಿ ಪಾಂಡೆ ನಿವಾಸಕ್ಕೆ ದಾಳಿ ನಡೆಸಿದ ವೇಳೆ ಅವರ ಮಗಳನ್ನು ಕೂಡಾ ವಿಚಾರಣೆಗೆ ಕರೆಸಲಾಯಿತು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಹಿಂದೂಗಳಾಗಿ ಹುಟ್ಟಿ ನಾವು ನೋವು ತಿನ್ನುತ್ತಿದ್ದೇವೆ: ಅಳಲು ತೋಡಿಕೊಂಡ ಗೂಳಿಹಟ್ಟಿ ಶೇಖರ್
ಬಾಂದ್ರಾ ಪಾಲಿ ಹಿಲ್ ನಲ್ಲಿರುವ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಮಾದಕ ದ್ರವ್ಯ ನಿಗ್ರಹ ಏಜೆನ್ಸಿ ಇಂದು ಮಧ್ಯಾಹ್ನ 2ಗಂಟೆಗೆ ಅನನ್ಯ ಪಾಂಡೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿರುವುದಾಗಿ ವರದಿ ಹೇಳಿದೆ.
ಎನ್ ಸಿಬಿ ಅಧಿಕಾರಿಗಳು ಅನನ್ಯ ಪಾಂಡೆ ನಿವಾಸದ ಮೇಲಿನ ದಾಳಿ ವೇಳೆ ಕೆಲವು ಪೋನ್ ಗಳು, ಲ್ಯಾಪ್ ಟಾಪ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಕ್ಕೆ ಪಡೆದಿರುವುದಾಗಿ ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಎನ್ ಸಿಬಿ ಅಧಿಕಾರಿಗಳು ಶಾರುಖ್ ಖಾನ್ ನಿವಾಸ ಮನ್ನತ್ ಗೂ ಆಗಮಿಸಿ, ಕೆಲವು ದಾಖಲೆಗಳ ಕೆಲಸ ಪೂರ್ಣಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಪುತ್ರ ಆರ್ಯನ್ ಖಾನ್ ಮುಂಬೈನ ಅರ್ಥೂರ್ ರೋಡ್ ಜೈಲಿನಲ್ಲಿದ್ದು, ಇಂದು ಶಾರುಖ್ ಖಾನ್ ಭೇಟಿ ನೀಡಿ ಮಾತುಕತೆ ನಡೆಸಿರುವುದಾಗಿ ವರದಿ ಹೇಳಿದೆ. ಬಾಂಬೆ ಹೈಕೋರ್ಟ್ ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 26ಕ್ಕೆ ಮುಂದೂಡಿದೆ.