Advertisement

ಮಾದಕ ಜಾಲ ಮತ್ತಷ್ಟು ವಿಶಾಲ

12:02 PM Nov 13, 2020 | Suhan S |

ಬೆಂಗಳೂರು: ಮಾದಕ ವಸ್ತು ಹಾಶೀಶ್‌ ಆಯಿಲ್‌ನನ್ನು ನೆರೆರಾಷ್ಟ್ರಗಳು ಹಾಗೂ ಅಂತರ್‌ ರಾಜ್ಯಗಳಿಗೆ ಸರಬರಾಜುಮಾಡುತ್ತಿದ್ದ ತಂಡವೊಂದನ್ನು ನಗರದ ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ ಘಟಕ (ಎನ್‌ಸಿಬಿ) ಬಂಧಿಸಿದೆ.

Advertisement

ಆಂಧ್ರದ ವಿಶಾಖಪಟ್ಟಣದಿಂದ ನಗರಕ್ಕೆ ಹಾಶೀಶ್‌ ಆಯಿಲ್‌ ತರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ದೇವನಹಳ್ಳಿ ಟೋಲ್‌ ಗೇಟ್‌ ಬಳಿ ಕಾರ್ಯಾಚರಣೆ ನಡೆಸಿರುವ ಎನ್‌ಸಿಬಿ ಅಧಿಕಾರಿಗಳು ಕೇರಳ ಮೂಲದ ಮೂವರನ್ನು ಬಂಧಿಸಿದ್ದಾರೆ. ರೆಂಜಿತ್‌ ಆರ್‌.ಎಸ್‌, ಸಾರಂಗ್‌ ಕೆ.ಕೆ, ಅನೀಶ್‌ ಪಿ.ಡಿ ಬಂಧಿತರು.ಆರೋಪಿಗಳುತಂದಿದ್ದಸುಮಾರು25 ಲಕ್ಷ ರೂ. ಮೌಲ್ಯದ ಮೂರು ಕೆ.ಜಿ

ಹಾಶೀಶ್‌ ಆಯಿಲ್‌ನ್ನು ಜಪ್ತಿ ಮಾಡಲಾಗಿದೆ.ಆರೋಪಿಗಳು ಕಾರು ಚಾಲಕನ ಸೀಟಿನ ತಳದಲ್ಲಿ ಕವರ್‌ನಲ್ಲಿ ಸುತ್ತಿಟ್ಟು ಹಾಶೀಶ್‌ ಆಯಿಲ್‌ನಗರಕ್ಕೆತಂದಿದ್ದರು.ಆರೋಪಿಗಳನ್ನುಹೆಚ್ಚಿನ ವಿಚಾರಣೆ ನಡೆಸಿದಾಗ ವಿಶಾಖಪಟ್ಟಣ ದಿಂದ ಹಾಶೀಶ್‌ ಆಯಿಲ್‌ ತಂದಿದ್ದು ಬೆಂಗಳೂರು ಹಾಗೂ ಕೇರಳಕ್ಕೆ ಸರಬರಾಜು ಮಾಡಲು ತರಲಾಗಿತ್ತು. ಜತೆಗೆ ಸ್ವಂತ ಬಳಕೆಗೂ ಉದ್ದೇಶಿಸಲಾಗಿತ್ತು ಎಂದು ಆರೋಪಿ ರೆಂಜಿತ್‌ ತಿಳಿಸಿದ್ದಾನೆ.

ಆರೋಪಿಗಳ ತಂಡ ಹಾಶೀಶ್‌, ಹಾಶೀಶ್‌ ಆಯಿಲ್‌ನನ್ನು ಪೂರ್ವಾತ್ಯ ರಾಷ್ಟ್ರಗಳು, ಶ್ರೀಲಂಕಾ, ಮಾಲ್ಡೀವ್ಸ್‌ ದೇಶಗಳಿಗೆ ರಫ್ತು ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಡ್ರಗ್ಸ್‌ ದಂಧೆಗೆ ನೆರವು: ಅಮಾನತು :  ಡ್ರಗ್ಸ್‌ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳು ತಪ್ಪಿಸಿಕೊಳ್ಳುವಂತೆ ಮಾಹಿತಿ ನೀಡಿದ್ದ ಹೆಡ್‌ಕಾನ್ಸ್‌ಟೇಬಲ್‌ ಒಬ್ಬರನ್ನು ಅಮಾನತು ಮಾಡಲಾಗಿದೆ. ಸದಾಶಿವನಗರ ಠಾಣೆಯ ಪ್ರಭಾಕರ್‌ ಅಮಾನತುಗೊಂಡ ಪೇದೆ. ಡ್ರಗ್ಸ್‌ ದಂಧೆ ಕೇಸ್‌ನಲ್ಲಿ ಇತ್ತೀಚೆಗೆ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ರುದ್ರಪ್ಪ ಲಮಾಣಿಪುತ್ರ ದರ್ಶನ್‌ ಲಮಾಣಿಅವರ ಸ್ನೇಹಿತರು ಪೊಲೀಸರಿಗೆ ಸಿಗದೆ ತಪ್ಪಿಸಿಕೊಳ್ಳಲು ಎಚ್‌ಸಿ ಪ್ರಭಾಕರ್‌ ನೆರವಾಗಿದ್ದರು. ತನಿಖೆಯಲ್ಲಿ ಈ ಮಾಹಿತಿ ಹೊರಬೀಳುತ್ತಿದ್ದಂತೆ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್‌ ಅನುಚೇತ್‌ ಎಚ್‌ಸಿ ಪ್ರಭಾಕರ್‌ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Advertisement

ಡ್ರಗ್ಸ್‌ ದಂಧೆಯಲ್ಲಿ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿಸಿರುವ ಸಿಸಿಬಿ ಪೊಲೀಸರು ನ.4ರಂದು ಕೆಂಪೇಗೌಡ ಠಾಣಾ ವ್ಯಾಪ್ತಿಯಲ್ಲಿ ಸುಜಯ್‌ ಎಂಬಾತನನ್ನು ಬಂಧಿಸಿ ಆತನಿಂದ 500 ಗ್ರಾಂ ಹೈಡ್ರೋಪೊನಿಕ್‌ ಗಾಂಜಾ ಜಪ್ತಿ ಮಾಡಿದ್ದರು. ಸುಜಯ್‌ ಸ್ನೇಹಿತರಾದ ಸದಾಶಿವನಗರದಲ್ಲಿ ವಾಸವಿದ್ದ ಹೇಮಂತ್‌, ಸುನೀಶ್‌ ಹೆಗ್ಡೆ, ಸಂಪರ್ಕವಿತ್ತು. ಎಲ್ಲರೂ ಡ್ರಗ್ಸ್‌ ದಂಧೆಯಲ್ಲಿ ಪಾಲ್ಗೊಂಡು, ಡಾರ್ಕ್‌ನೆಟ್‌ ನಿಂದ ಡ್ರಗ್ಸ್‌ತರಿಸಿಕೊಂಡು ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ಸುದ್ದಿ ತಿಳಿದ ತನಿಖಾ ತಂಡ ಕಾರ್ಯಾಚರಣೆಗೆ ಸಿದ್ಧತೆ ನಡೆಸಿತ್ತು. ಈ ಮಾಹಿತಿ ಪಡೆದ ಎಚ್‌ಸಿ ಪ್ರಭಾಕರ್ , ಸ್ನೇಹಿತ‌ರಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೇಳಿದ್ದರು. ಇದರಿಂದ ಹೇಮಂತ್‌ ಸೇರಿದಂತೆ ಆರೋಪಿಗಳು ಊರು ಬಿಟ್ಟಿದ್ದರು. ತನಿಖಾ ತಂಡ ಆರೋಪಿಗಳ ಬೆನ್ನತ್ತಿ ಹೇಮಂತ್‌, ದರ್ಶನ್‌, ಸುನೀಶ್‌ನನ್ನು ಬಂಧಿಸಿದೆ ಎಂದು ಸಿಸಿಬಿ ತಿಳಿಸಿದೆ.

ಮಸಾಜ್‌ ಯಂತ್ರದಲ್ಲಿ ಡ್ರಗ್ಸ್‌ :

ಬೆಂಗಳೂರು: ನಗರದ ವಿದೇಶಿ ಅಂಚೆ ಕಚೇರಿಗೆ ಬಂದಿದ್ದ ಪಾರ್ಸೆಲ್‌ ವೊಂದರಲ್ಲಿದ್ದ 1.25ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಬೆಂಗಳೂರು ನಗರ ಕಸ್ಟಮ್ಸ್‌ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ನ.11ರಂದು ವಿದೇಶಿ ಅಂಚೆ ಕಚೇರಿಗೆ ಫ್ರಾನ್ಸ್‌ನಿಂದ ಪಾರ್ಸೆಲ್‌ವೊಂದು ಬಂದಿತ್ತು. ಅದರಲ್ಲಿ ಫ‌ುಟ್‌ಮಸಾಜ್‌ಮೆಷಿನ್‌ ಇತ್ತು.ಆದರೆ, ಪಾರ್ಸೆಲ್‌ನ ಗಾತ್ರ ಹಾಗೂ ತೂಕದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಅಂಚೆ ಕಚೇರಿಯ ಅಧಿಕಾರಿಗಳುಕಸ್ಟಮ್ಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇಕಚೇರಿಗೆ ಬಂದ ಅಧಿಕಾರಿಗಳು, ಪಾರ್ಸೆಲ್‌ ತೆರೆದು ನೋಡಿದಾಗ ಮಸಾಜ್‌ ಮೆಷಿನ್‌ ಪಕ್ಕದಲ್ಲಿ ಮೂರು ಸಣ್ಣ-ಸಣ್ಣ ಪ್ಯಾಕೆಟ್‌ಗಳು ಇದ್ದವು. ಅವುಗಳನ್ನು ತೆರೆದಾಗ ಬಣ್ಣ-ಬಣ್ಣದ ಮಾತ್ರೆಗಳುಕಂಡು ಬಂದಿದ್ದು, ಅವುಗಳನ್ನು ಪರೀಕ್ಷಿಸಿದಾಗ ಎಂಡಿ ಎಂಎ ಎಂಬುದು ಗೊತ್ತಾಗಿದೆ. ಅಧಿಕಾರಿಗಳು ಆರೋಪಿಯ ವಿಳಾಸ ಪಡೆದು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next