Advertisement

ನೀರವ್‌ಗೆ ಜಾಮೀನುರಹಿತ ವಾರಂಟ್‌

10:40 AM Apr 09, 2018 | Team Udayavani |

ಹೊಸದಿಲ್ಲಿ : ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಗೆ 12,600 ಕೋಟಿ ರೂ. ಮೋಸ ಮಾಡಿ ತಲೆಮರೆಸಿಕೊಂಡಿರುವ ವಜ್ರ ಉದ್ಯಮಿ ನೀರವ್‌ ಮೋದಿ ಹಾಗೂ ಮೆಹುಲ್‌ ಚೋಕ್ಸಿ ವಿರುದ್ಧ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯ ಜಾಮೀನು ರಹಿತ ವಾರಂಟ್‌ ಹೊರಡಿಸಿದೆ. ಹಲವು ಬಾರಿ ನೋಟಿಸ್‌ ಕಳುಹಿಸಿದರೂ ವಿಚಾರಣೆಗೆ ಹಾಜರಾಗದ ಕಾರಣ ವಾರಂಟ್‌ ಜಾರಿ ಮಾಡಲಾಗಿದೆ. ಇದರಿಂದಾಗಿ ಇಬ್ಬರ ವಿರುದ್ಧವೂ ಇಂಟರ್‌ಪೋಲ್‌ ಮೂಲಕ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲು ನೆರವಾಗಲಿದೆ. ಇನ್ನೊಂದೆಡೆ ಹಾಂಕಾಂಗ್‌ನಲ್ಲಿ ನೀರವ್‌ ಇರುವುದು ಸಿಬಿಐಗೆ ತಿಳಿದುಬಂದಿದ್ದು, ಬಂಧನಕ್ಕಾಗಿ ಹಾಂಕಾಂಗ್‌ಗೆ ಮನವಿ ಮಾಡಲಾಗಿತ್ತು. ಮುಂಬಯಿಯಲ್ಲಿ  ಪಿಎನ್‌ಬಿ ಶಾಖೆಯಲ್ಲಿ ವಿತರಿಸಲಾದ ಲೆಟರ್‌ ಆಫ್ ಅಂಡರ್‌ಸ್ಟಾಂಡಿಂಗ್‌ ಆಧಾರದಲ್ಲಿ ಸಾಲ ನೀಡಿದ ಭಾರತದ ವಿದೇಶಿ ಬ್ಯಾಂಕ್‌ ಶಾಖೆಗಳ ಅಧಿಕಾರಿಗಳನ್ನೂ ಸಿಬಿಐ ಪ್ರಶ್ನಿಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next