Advertisement

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

03:56 PM Nov 16, 2024 | Team Udayavani |

ಚೆನ್ನೈ: ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರ (Nayanthara) ಹಾಗೂ ಧನುಷ್‌ (Dhanush) ಅವರಿಗೆ ಸಿನಿಮಾರಂಗದಲ್ಲಿ ತಮ್ಮದೇ ಆದ ಅಪಾರ ಅಭಿಮಾನಿಗಳಿದ್ದಾರೆ. ತಮ್ಮ ಮನರಂಜನಾ ಕ್ಷೇತ್ರದ ಸಾಧನೆಯಿಂದ ಇಂದು ಸೌತ್‌ ಫಿಲ್ಮ್‌ ಇಂಡಸ್ಟಿಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಆದರೆ ಆ ಒಂದು ವಿಚಾರ ಇಬ್ಬರ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದೆ.

Advertisement

ಇತ್ತೀಚೆಗೆ ನೆಟ್‌ ಫ್ಲಿಕ್ಸ್‌ನಲ್ಲಿ ನಯನತಾರ ಜೀವನದ ಬಗ್ಗೆ ʼನಯನತಾರ:ಬಿಯಾಂಡ್‌ ದಿ ಫೇರಿಟೇಲ್‌ʼ (‘Nayanthara: Beyond the Fairytale’) ಡಾಕ್ಯೂಮೆಂಟರಿಯ ಟ್ರೇಲರ್ ರಿಲೀಸ್ ಆಗಿದೆ. ಇದೇ ವಿಚಾರವಾಗಿ ಧನುಷ್ ಅವರು ಕಾಪಿ ರೈಟ್ಸ್‌ ನೋಟಿಸ್‌ ಕಳುಹಿಸಿ 10 ಕೋಟಿ ರೂ.ಪರಿಹಾರ ಕೇಳಿದ್ದಾರೆ ಎಂದು ನಯನತಾರ ಅವರೇ ಪತ್ರದ ಮೂಲಕ ಬಹಿರಂಗಪಡಿಸಿದ್ದಾರೆ.

ಏನಿದು ವಿಚಾರ?: 2015ರಲ್ಲಿ ನಯನತಾರಾ – ವಿಜಯ್‌ ಸೇತುಪತಿ ಅವರು ʼನಾನೂಮ್‌ ರೌಡಿಧಾನ್ʼ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ನಯನತಾರಾ ಪತಿ ವಿಘ್ನೇಶ್‌ ಶಿವನ್‌ ನಿರ್ದೇಶನ ಮಾಡಿದ್ದರು. ನಟ ಧನುಷ್‌ ನಿರ್ಮಾಣ ಮಾಡಿದ್ದರು. ಇದೇ ಸಿನಿಮಾದ ಕೆಲ ದೃಶ್ಯಗಳನ್ನು ತಮ್ಮ ಸಾಕ್ಷ್ಯ ಚಿತ್ರಕ್ಕೆ ಬಳಸಿಕೊಳ್ಳುವುದಾಗಿ ನಯನತಾರಾ ಅವರ ತಂಡ ಧನುಷ್‌ ಅವರಲ್ಲಿ ಕೇಳಿತ್ತು. ಆದರೆ ಧನುಷ್‌ ಇದನ್ನು ಒಪ್ಪಿರಲಿಲ್ಲ. ಇದರಿಂದಾಗಿ ಸಾಕ್ಷ್ಯ ಚಿತ್ರದ ತಂಡದವರು ʼನಾನೂಮ್‌ ರೌಡಿಧಾನ್ʼ ಚಿತ್ರದ ತೆರೆಮರೆಯ ದೃಶ್ಯಗಳನ್ನು ಸಾಕ್ಷ್ಯಚಿತ್ರದ‌ ಟ್ರೇಲರ್‌ನಲ್ಲಿ ಬಳಸಿಕೊಳ್ಳಲಾಗಿದೆ. ಕೇವಲ 3 ಸೆಕೆಂಡ್‌ಗಳ ದೃಶ್ಯವನ್ನು ಬಳಸಿದ್ದಕ್ಕಾಗಿ ಧನುಷ್‌ ಅವರು ನಯನತಾರಾ ಅವರ ತಂಡಕ್ಕೆ 10 ಕೋಟಿ ರೂ. ಪರಿಹಾರ ಕೇಳಿ ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ.

ಈ ವಿಚಾರದಿಂದ ನೊಂದಿರುವ ನಯನತಾರಾ ಬಹಿರಂಗವಾಗಿಯೇ ಪತ್ರವೊಂದನ್ನು ಬರೆದು ಧನುಷ್‌ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ನೀವು ಚಿತ್ರರಂಗದಲ್ಲಿ ತಂದೆ, ಕುಟುಂಬದ ಬೆಂಬಲದಿಂದ ಬೆಳೆದು ಬಂದಿದ್ದೀರಿ. ನಾನು ಸ್ವಪ್ರಯತ್ನಪಟ್ಟು ಯಾವ ಗಾಡ್‌ ಫಾದರ್‌ ಇಲ್ಲದೆ. ಪರಿಶ್ರಮಪಟ್ಟು ಬೆಳೆದು ಬಂದಿದ್ದೇನೆ. ಇದು ನನ್ನ ಚಿತ್ರರಂಗದ ಸಾಧನೆ ಬಗ್ಗೆ ಅಭಿಮಾನಿಗಳಿಗೆ ತಿಳಿದಿದೆ. ನಾನು ಹೇಗೆ ನನ್ನ ಸಾಕ್ಷ್ಯಚಿತ್ರಕ್ಕಾಗಿ ಕಾಯುತ್ತಿದ್ದೇನೆವೋ ಹಾಗೆಯೇ ನನ್ನ ಅಪಾರ ಅಭಿಮಾನಿಗಳು ಇದಕ್ಕಾಗಿ ಕಾಯುತ್ತಿದ್ದಾರೆ.

ಈ ಸಾಕ್ಷ್ಯ ಚಿತ್ರದಲ್ಲಿ ನನ್ನ ಜೀವನದ ಸುಂದರ ಕ್ಷಣಗಳನ್ನು ಸೇರಿಸಲಾಗಿದೆ. ಇದಕ್ಕಾಗಿ ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ಆದರೆ ನಿಮ್ಮ ಈ ವರ್ತನೆ ನಮಗೆ ನೋವು ತಂದಿದೆ. ನನ್ನ ಈ ಸಾಕ್ಷ್ಯಚಿತ್ರಕ್ಕೆ ನಿಮ್ಮ ಚಿತ್ರದ ಕೆಲವು ಕ್ಲಿಪ್ಸ್ ಬಳಸಿಕೊಳ್ಳುತ್ತೇವೆ ಎಂದು 2 ವರ್ಷಗಳ ಹಿಂದೆಯೇ NOC (ನಿರಪೇಕ್ಷಣಾ ಪತ್ರ) ಕೂಡ ಕೇಳಿದ್ದೇವು. NOC ಕೊಡದ ನೀವು ಇದೀಗ ಟ್ರೈಲರ್ ರಿಲೀಸ್ ಆದ್ಮೇಲೆ ಲೀಗಲ್ ನೋಟಿಸ್ ಕಳಿಸೋದು ಎಷ್ಟು ಸರಿ ಹೇಳಿ? ಇದೊಂದು ರೀತಿ ವೈಯಕ್ತಿಕ ದ್ವೇಷದಂತೆ ಇದೆ. ಒಬ್ಬ ನಿರ್ಮಾಪಕನಾಗಿ ನೀವು ಕಲಾವಿದನೊಬ್ಬ ವೈಯಕ್ತಿಕ ಜೀವನ ಹಾಗೂ ಸ್ವಾತಂತ್ರ್ಯವನ್ನು ನಿಯಂತ್ರಿಸಬಹುದೇ. ಈ ಸಂಬಂಧ ಯಾವುದೇ ರೀತಿಯ ಕ್ರಮವನ್ನು ಎದುರಿಸಲು ನಾವು ಸಿದ್ದರಿದ್ದೇವೆ ಎಂದು ಧನುಷ್‌ಗೆ ನಯನತಾರ ಪತ್ರದ ಮೂಲಕ ಹೇಳಿದ್ದಾರೆ.

3 ಸೆಕೆಂಡ್‌ಗಳ ದೃಶ್ಯ ಬಳಸಿದ್ದಕ್ಕೆ ನೀವು ಕಾಪಿ ರೈಟ್ಸ್‌ ನೋಟಿಸ್‌ ಕಳುಹಿಸಿದ್ದೀರಿ. ಇದು ನಿಮ್ಮ ವ್ಯಕ್ತಿತ್ವದ ಏನು ಎನ್ನುವುದನ್ನು ತೋರಿಸುತ್ತದೆ ಎಂದು ನಯನತಾರಾ ಹೇಳಿದ್ದಾರೆ.

ನಿಮ್ಮ ಬಗ್ಗೆ ನಿಮ್ಮನ್ನು ನಂಬಿಕೊಂಡಿರುವ ಅಭಿಮಾನಿಗಳಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಆದರೆ ಅವರು ತಿಳಿದುಕೊಂಡಿರುವಷ್ಟು ನೀವು ರಿಯಲ್‌ ಆಗಿ ಇಲ್ಲವೆಂದು ನಟಿ ಹೇಳಿದ್ದಾರೆ.

ಸದ್ಯ ಲೇಡಿ ಸೂಪರ್‌ ಸ್ಟಾರ್‌ ಅವರ ಈ ಪತ್ರ ಕಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next