ನಾಗ್ಪುರ : ತಮ್ಮ ಇಬ್ಬರು ಮಹಿಳಾ ಸಹವರ್ತಿಗಳನ್ನು ಕಳೆದ ತಿಂಗಳಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾದುದನ್ನು ಪ್ರತಿಭಟಿಸಿ ನಕ್ಸಲರ್ ಇದೇ ಮೇ 19ರ ಭಾನುವಾರದಂದು ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ “ಬಂದ್’ ಗೆ ಕರೆನೀಡಿದ್ದಾರೆ.
ಮೊನ್ನೆ ಬುಧವಾರ ರಾತ್ರಿ ಗಡ್‌ಚಿರೋಲಿಯ ಏತಪಳ್ಳಿ ತೆಹಶೀಲ್‌ನ ಕೆಲವು ಹಳ್ಳಿಗಳಲ್ಲಿ ನಕ್ಸಲರು ಬಂದ್ ಕರೆಯ ಪೋಸ್ಟರ್ ಹಚ್ಚಿರುವುದು ಕಂಡು ಬಂದಿದೆ ಎಂದು ಪೊಲೀಸ್ ಸುಪರಿಂಟೆಂಡೆಂಟ್ ತಿಳಿಸಿದ್ದಾರೆ.
ಬಂದ್ ಕರೆಯ ಪೋಸ್ಟರ್ ನಲ್ಲಿ ನಕ್ಸಲರು ತಮ್ಮ ಸಹವರ್ತಿಗಳಾದ ರಾಮ್‌ಕೊ ಅಲಿಯಾಸ್ ಕಮಲಾ ನರೋಟೆ ಮತ್ತು ಶಿಲ್ಪಾ ದುರ್ವಾ ಅವರನ್ನು ಕಳೆದ ಎ.27ರಂದು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಗೈದಿರುವ ಕೃತ್ಯವು ಅವರ (ಮೃತರ) ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಆದುದರಿಂದ ಈ ಹತ್ಯೆಗಳ ಪ್ರತಿಭಟನಾರ್ಥ ಮೇ 19ರಂದು ಗಡ್‌ಚಿರೋಲಿಯಲ್ಲಿ ಬಂದ್ ನಡೆಸಬೇಕು ಎಂದು ನಕ್ಸಲ್ ಉಗ್ರರು ಕರೆ ನೀಡಿದ್ದಾರೆ.
ಗಡ್‌ಚಿರೋಲಿಯ ಗಂದರ್‌ವಾಹಿ ಅರಣ್ಯದಲ್ಲಿ ಸಿ-60 ಕಮಾಂಡೋಗಳು ನಕ್ಸಲ್ ಶೋಧ ಕಾರ್ಯ ನಡೆಸುತ್ತಿದ್ದಾಗ ಏರ್ಪಟ್ಟ ಎನ್‌ಕೌಂಟರ್‌ನಲ್ಲಿ ಹತರಾಗಿದ್ದ ಇಬ್ಬರು ಮಹಿಳಾ ನಕ್ಸಲರಾದ ರಾಮ್‌ಕೊ ಮತ್ತು ದುರ್ವಾ ತಮ್ಮ ತಲೆಗೆ ಅನುಕ್ರಮವಾಗಿ 16 ಲಕ್ಷ ಮತ್ತು 4 ಲಕ್ಷ ರೂ.ಇನಾಮು ಹೊಂದಿದ್ದರೆಂದು ಪೊಲೀಸರು ಹೇಳಿದ್ದಾರೆ.