ರಾಯಚೂರು: ನಕ್ಸಲ್ ಗುಂಪು ಸೇರಿ ಸುಮಾರು ಮೂರೂ ದಶಕಗಳ ಬಳಿಕ ಶರಣಾಗುತ್ತಿರುವ ನಕ್ಸಲ್ ಮಾರೆಪ್ಪ ಅರೋಳಿ ಅವರ ಕುಟುಂಬದಲ್ಲಿ ಖುಷಿ ಮನೆ ಮಾಡಿದೆ.
ರಾಯಚೂರಿನ ಮಾನ್ವಿ ತಾಲೂಕಿನ ಅರೋಳಿ ಗ್ರಾಮದ ನಿವಾಸಿಯಾಗಿರುವ ಮಾರೆಪ್ಪ ಅರೋಳಿ ಇದೀಗ ಶರಣಾಗತಿ ಮೂಲಕ ಮುಖ್ಯವಾಹಿನಿಗೆ ಬರುತ್ತಿರುವ ಮಗನ ಆಗಮನಕ್ಕೆ ಅರೋಳಿ ಕುಟುಂಬ ಕಾಯುತ್ತಿದ್ದು ಮೂರೂ ದಶಗಳ ಬಳಿಕ ತನ್ನ ಮಗನನ್ನು ನೋಡುವ ತವಕದಲ್ಲಿ 80 ವರ್ಷದ ತಾಯಿ ಗೌರಮ್ಮ ಇದ್ದಾರೆ ಹಾಗೆಯೆ ಸಹೋದರ ದೇವೇಂದ್ರಪ್ಪ ಕೂಡ ತನ್ನ ತಮ್ಮನ ಆಗಮನದ ಹಾದಿಯನ್ನು ನೋಡುತ್ತಿದ್ದಾರೆ.
ನಕ್ಸಲ್ ಚಟುವಟಿಕೆಗೆ ಸೇರಿದಾಗಿನಿಂದ ಎರಡು ಬಾರಿ ಮನೆಗೆ ಬಂದು ಹೋಗಿದ್ದ ಮಾರೆಪ್ಪ ಉರುಫ್ ಜಯಣ್ಣ, ಅನಾನುಕೂಲ ಕಾರಣದಿಂದ ಕುಟುಂಬ ಚಿಕ್ಕಮಗಳೂರಿಗೆ ಹೋಗಲು ಆಗದೆ ಅರೋಳಿಯಲ್ಲೇ ಕಾಯುತ್ತಿದೆ.
ಸರ್ಕಾರವೇ ಮಾರೆಪ್ಪಗೆ ಒಂದು ದಾರಿ ಮಾಡಿಕೊಡಬೇಕು ಎಂದು ತಾಯಿ ಹಾಗೂ ಸಹೋದರನ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಶರಣಾಗತಿ ಬಗ್ಗೆ ವಿಡಿಯೋ ಹರಿಬಿಟ್ಟಿದ್ದ ಮಾರೆಪ್ಪ ಪುನರ್ವಸತಿ ಪ್ಯಾಕೇಜ್ ನ ಅರ್ಧ ಭಾಗವನ್ನು ಹುಟ್ಟೂರಿನ ಶಾಲಾಭಿವದ್ಧಿಗೆ ನೀಡುವಂತೆ ಕೋರಿದ್ದಾನೆ.
ಇದನ್ನೂ ಓದಿ: ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್