ರಾಯ್ಪುರ: ಸರ್ವರಿಗೂ ಸಮಾನ ವ್ಯವಸ್ಥೆ ಎಂದು ಪ್ರತಿಪಾದಿಸುವ ನಕ್ಸಲರು ತಮ್ಮ ಗುಂಪಿನ ಸದಸ್ಯೆಗೆ ಕೋವಿಡ್ ಸೋಂಕು ಇದೆ ಎಂಬ ಕಾರಣದಿಂದ ಆಕೆಯನ್ನು ಹೊರಹಾಕಿದ್ದಾರೆ.
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಪೆದ್ದಕವಾಲಿ ಎಂಬಲ್ಲಿ ಸಂಶಯಾಸ್ಪದವಾಗಿ ಮಹಿಳೆ ಸಂಚರಿಸುತ್ತಿದ್ದಾಳೆ ಎಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಪೊಲೀಸ್ ಪಡೆಗಳನ್ನು ರವಾನಿಸಲಾಗಿತ್ತು.
ಆ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿದಾಗ ಸುಮಿತ್ರಾ ಚೇಪಾ ಎಂಬ ನಕ್ಸಲ್ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದರು. ಪ್ರಾಥಮಿಕವಾಗಿ ಆಕೆಯನ್ನು ವಿಚಾರಣೆ ನಡೆಸಿದಾಗ ಕೋವಿಡ್ ತಗುಲಿದೆ ಎಂಬ ಕಾರಣಕ್ಕೆ ನಕ್ಸಲರು ಗುಂಪಿನಿಂದ ಹೊರ ಹಾಕಿದ್ದಾರೆ ಎಂಬ ಅಂಶ ದೃಢ ಪಟ್ಟಿತು.
ಹೀಗಾಗಿ, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಬಸ್ತಾರ್ ವಲಯದ ಐಜಿಪಿ ಸುಂದರ್‌ರಾಜ್ ಪಿ. ತಿಳಿಸಿದ್ದಾರೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಲಾಗಿದ್ದು, ಸೋಂಕು ಇದೆ ಎಂಬ ಕಾರಣಕ್ಕಾಗಿ ಗುಂಪಿನಿಂದ ಹೊರ ಹಾಕಲ್ಪಟ್ಟ ನಕ್ಸಲರ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಎಚ್ಚರಿಕೆ ನೀಡಲಾಗಿದೆ.