Advertisement

ನಕ್ಸಲ್‌ ದಾಳಿ: 15 ಪೊಲೀಸರ ಸಾವು

03:20 AM May 02, 2019 | sudhir |

ಮುಂಬಯಿ: ಮಹಾರಾಷ್ಟ್ರದ 59ನೇ ರಾಜ್ಯೋತ್ಸವದ ದಿನವಾದ ಬುಧವಾರ ನಕ್ಸಲರು 15 ಪೊಲೀಸರನ್ನು ಹತ್ಯೆಗೈದಿದ್ದಾರೆ.

Advertisement

ನಾಗ್ಪುರದಿಂದ 250 ಕಿ.ಮೀ. ದೂರವಿರುವ ಗಡಿcರೋಲಿ ಜಿಲ್ಲೆಯ ಕುಖೇìಡ ತಾಲೂಕಿನ ದಾದಾಪುರ್‌ ಎಂಬ ಹಳ್ಳಿಯ ಪಕ್ಕದಲ್ಲೇ ಸಾಗುವ ರಾ.ಹೆ. 136ರಲ್ಲಿ ನಕ್ಸಲರು ಸುಧಾರಿತ ನೆಲಬಾಂಬ್‌ ಸ್ಫೋಟಿಸಿದ್ದು, ಮಾವೋವಾದಿ ನಿಗ್ರಹ ದಳದ (ಕ್ವಿಕ್‌ ರೆಸ್ಪಾನ್ಸ್‌ ಟೀಮ್‌) 15 ಸಿಬಂದಿ ಸಾವಿಗೀಡಾಗಿದ್ದಾರೆ. ಈ ವಾಹನಗಳನ್ನು ಚಲಾಯಿಸುತ್ತಿದ್ದ ಇಬ್ಬರು ಡ್ರೈವರ್‌ಗಳ ಪೈಕಿ ಓರ್ವ ಅಸುನೀಗಿದ್ದಾರೆ.

ಮೃತಪಟ್ಟವರೆಲ್ಲರೂ ಗಡಿcರೋಲಿ ಜಿಲ್ಲಾ ಪೊಲೀಸ್‌ ಅಡಿ ಸೇವೆ ಸಲ್ಲಿಸುತ್ತಿದ್ದ ಸಿ-60 ತುಕಡಿಯ ಸಿಬಂದಿ. ಸ್ಫೋಟದ ರಭಸಕ್ಕೆ ಪೊಲೀಸರು ಪ್ರಯಾಣಿಸುತ್ತಿದ್ದ ಎರಡೂ ವಾಹನಗಳು ಚಿಂದಿಯಾಗಿವೆ. ಗಾಯಾಳು ಸಿಬಂದಿಯನ್ನು ಗಡಿcರೋಲಿಯ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.

ದಾದಾಪುರ್‌ ಹಳ್ಳಿಯಲ್ಲಿ ರಾ.ಹೆ. ದುರಸ್ತಿ ಕಾರ್ಯ ನಡೆಯುತ್ತಿದ್ದು, ಆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಕೂಲಿಗಳಿಗೆ ಭದ್ರತೆ ಒದಗಿಸಲು ಹಾಗೂ ಅವರ ಕಾರ್ಯಕ್ಕೆ ಸಹಾಯ ಮಾಡುವ ಸಲುವಾಗಿ ಈ ಭದ್ರತಾ ಸಿಬಂದಿ ಸಾಗುತ್ತಿದ್ದರು. ಭದ್ರತಾ ಸಿಬಂದಿ ಇದ್ದ ವಾಹನಗಳು ಆಗಮಿಸಿದ ಕೂಡಲೇ ಹತ್ತಿರದಲ್ಲೇ ಅಡಗಿದ್ದ ನಕ್ಸಲರು ಟ್ರಿಗರ್‌ ಒತ್ತುವ ಮೂಲಕ ಬಾಂಬ್‌ ಸ್ಫೋಟಿಸಿದ್ದಾರೆ.

ಪ್ರತೀಕಾರದ ಹೆಜ್ಜೆ ?
ಗಡಿcರೋಲಿ ಜಿಲ್ಲೆಯ ಎಟಾಪಲ್ಲಿ ತಾಲೂಕಿನ ಕಾನ್ಸಾಪುರ ಎಂಬ ಹಳ್ಳಿಯ ಬಳಿ ಕಳೆದ ವರ್ಷ ಎ. 22, 23ರಂದು ಸುಮಾರು 40 ಕೆಂಪು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಇದರ ವರ್ಷಾಚರಣೆ ಹಿನ್ನೆಲೆಯಲ್ಲಿ ಎ. 23ರಿಂದ ಏಳು ದಿನಗಳ ಕಾಲ ಶೋಕ ಸಪ್ತಾಹವನ್ನಾಗಿ ಆಚರಿಸಿದ್ದ ಮಾವೋವಾದಿಗಳು, ಅದಾದ ಮರುದಿನವೇ ಈ ದುಷ್ಕೃತ್ಯ ನಡೆಸಿದ್ದಾರೆ. ನೆಲಬಾಂಬ್‌ ಸ್ಫೋಟಿಸು ವುದಕ್ಕೂ ಮುನ್ನ ರಸ್ತೆ ಕಂಟ್ರಾಕ್ಟರ್‌ಗಳಿಗೆ ಸೇರಿದ 36ಕ್ಕೂ ಹೆಚ್ಚು ವಾಹನಗಳನ್ನು ಸುಟ್ಟು ಹಾಕಿದ್ದರು.

Advertisement

ನಕ್ಸಲರ ಈ ಹೇಯ ಕೃತ್ಯವನ್ನು ನಾನು ಖಂಡಿಸುತ್ತೇನೆ. ಹುತಾತ್ಮ ಭದ್ರತಾ ಸಿಬಂದಿಗೆ ನನ್ನ ಪ್ರಣಾಮಗಳು ಸಲ್ಲುತ್ತವೆ. ಅವರ ಕುಟುಂಬಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಈ ಘಟನೆಯ ಹಿಂದಿರುವವರಿಗೆ ತಕ್ಕ ಶಾಸ್ತಿ ಆಗೇ ಆಗುತ್ತದೆ.
– ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next