Advertisement

ನವಾಜ್‌ ಷರೀಫ್ ಜೈಲು ಶಿಕ್ಷೆ ತೀರ್ಪಿನ ವಿರುದ್ಧ ಮನವಿ: ವಕೀಲ

04:08 PM Jul 14, 2018 | udayavani editorial |

ಇಸ್ಲಾಮಾಬಾದ್‌ : ಭ್ರಷ್ಟಾಚಾರ ಹಗರಣದಲ್ಲಿ ಬಂಧನಕ್ಕೆ ಗುರಿಯಾಗಿ ಪ್ರಕೃತ ಇಸ್ಲಾಮಾಬಾದ್‌ ಸಮೀಪದ ಅದಿಯಾಲಾ ಸೆಂಟ್ರಲ್‌ ಜೈಲಿನಲ್ಲಿರುವ ಪಾಕಿಸ್ಥಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್ ಮತ್ತು ಅವರ ಪುತ್ರಿ ಮರಿಯಾಮ್‌ ನವಾಜ್‌ ಅವರ ವಕೀಲರ ತಂಡ, ‘ಏವನ್‌ ಫೀಲ್ಡ್‌ ರೆಫ‌ರೆನ್ಸ್‌ ಕೇಸಿಗೆ ಸಂಬಂಧಪಟ್ಟು ಷರೀಫ್ ಜೈಲು ಶಿಕ್ಷೆಯನ್ನು ಪಾಕ್‌ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು’ ಎಂದು ಹೇಳಿದೆ.

Advertisement

ನವಾಜ್‌ ಷರೀಫ್ ಅವರ ವಕೀಲ, ಖ್ವಾಜಾ ಹ್ಯಾರಿಸ್‌ ಅವರು ಸೋಮವಾರ ರಾಷ್ಟ್ರೀಯ ಉತ್ತರದಾಯಿ ವಿಭಾಗದ (ನ್ಯಾಬ್‌) ಕೋರ್ಟಿನಲ್ಲಿ ಷರೀಫ್ ಜೈಲು ಶಿಕ್ಷೆಯ ತೀರ್ಪನ್ನು ಪ್ರಶ್ನಿಸಿ ಮನವಿ ಸಲ್ಲಿಸಲಿದ್ದಾರೆ ಎಂದು ವಕ್‌¤ ನ್ಯೂಸ್‌ ಹೇಳಿದೆ. 

ಅದಿಯಾಲಾ ಸೆಂಟ್ರಲ್‌ ಜೈಲಿನಲ್ಲಿ ಬಂಧಿಯಾಗಿರುವ ಷರೀಫ್ ಮತ್ತು ಅವರ ಪುತ್ರಿಗೆ ಅವರ ಸಾಮಾಜಿಕ ಸ್ಥಾನಮಾನ, ಘನತೆಯನ್ನು ಪರಿಗಣಿಸಿ  ಬಿ ಕ್ಲಾಸ್‌ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next