Advertisement

ಜೈಲಲ್ಲಿ ಷರೀಫ್ ಗೆ ಎದೆನೋವು; ಲಾಹೋರ್‌ ಆಸ್ಪತ್ರೆಯಲ್ಲಿ ಪರೀಕ್ಷೆ

10:32 AM Jan 22, 2019 | Team Udayavani |

ಲಾಹೋರ್‌ : ಭ್ರಷ್ಟಾಚಾರ ಎಸಗಿದ ಅಪರಾಧಕ್ಕಾಗಿ ಪ್ರಕೃತ ಲಾಹೋರ್‌ ಜೈಲಿನಲ್ಲಿ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಪಾಕಿಸ್ಥಾನದ ಮಾಜಿ ಪ್ರದಾನಿ ನವಾಜ್‌ ಷರೀಫ್ ಅವರು ಇಂದು ಮಂಗಳವಾರ ಎದೆ ನೋವೆಂದು ಹೇಳಿಕೊಂಡ ಕಾರಣ ಅವರನ್ನು ಒಡನೆಯೇ ಆಸ್ಪತ್ರೆಗೆ ಒಯ್ಯಲಾಯಿತು. 

Advertisement

69ರ ಹರೆಯದ ಷರೀಫ್ ಅವರನ್ನು  ಲಾಹೋರ್‌ನ ಬಿಗಿ ಭದ್ರತೆಯ ಕೋಟ್‌ ಲಾಖಪತ್‌ ಜೈಲಿನಿಂದ ಇಂದು ಮಂಗಳವಾರ ಲಾಹೋರ್‌ನ ಪಂಜಾಬ್‌ ಇನ್‌ಸ್ಟಿಟ್ಯೂಟ್‌ ಆಫ್ ಕಾರ್ಡಿಯಾಲಜಿ (ಪಿಐಸಿ) ಗೆ ಒಯ್ಯಲಾಯಿತೆಂದು ವರದಿ ತಿಳಿಸಿದೆ. 

ವೈದ್ಯರು ಷರೀಫ್ ಗೆ ಟಿಆರ್‌ಓಪಿ-1, ಎಕೋ ಕಾರ್ಡಿಯೋಗ್ರಫಿ ಮತ್ತು ಸ್ಟ್ರೆಸ್‌ ಥ್ಯಾಲಿಯಂ ಸ್ಕ್ಯಾನ್‌ ಸೇರಿದಂತೆ ಹಲವಾರು ಪರೀಕ್ಷೆಗಳು ನಡೆಸಿದರು. 

Advertisement

Udayavani is now on Telegram. Click here to join our channel and stay updated with the latest news.

Next