Advertisement

Nawanagar: ಶ್ರೀಮಂತ ರಾಜಮನೆತನದ ಉತ್ತರಾಧಿಕಾರಿಯಾದ ಟೀಂ ಇಂಡಿಯಾ ಮಾಜಿ ಆಟಗಾರ

05:51 PM Oct 12, 2024 | Team Udayavani |

ಬರೋಡಾ: ಟೀಂ ಇಂಡಿಯಾ ಪರ ಇನ್ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯವಾಡಿದ್ದ ಆಟಗಾರ ಇದೀಗ ಐತಿಹಾಸಿಕ ರಾಜಮನೆತನದ ಉತ್ತರಾಧಿಕಾರಿಯಾಗಿದ್ದಾರೆ.

Advertisement

ಹೌದು, ಮಾಜಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಅಜಯ್ ಜಡೇಜಾ (Ajay Jadeja) ಅವರನ್ನು ನವನಗರ (ಜಾಮ್‌ನಗರ) ದ ಮುಂದಿನ ಜಾಮ್ ಸಾಹೇಬ್ (Jam Saheb of Nawanagar) ಎಂದು ಘೋಷಿಸಲಾಗಿದೆ. ಇದು ಗುಜರಾತ್‌ನ ಗಲ್ಫ್ ಆಫ್ ಕಚ್‌ನ ದಕ್ಷಿಣ ತೀರದಲ್ಲಿರುವ ಐತಿಹಾಸಿಕ ಹಲಾರ್ ಪ್ರದೇಶದ ರಾಜಪ್ರಭುತ್ವದ ರಾಜ್ಯವಾಗಿದೆ. ಅಧಿಕೃತ ಹೇಳಿಕೆಯಲ್ಲಿ, ಈ ಘೋಷಣೆಯನ್ನು ನವನಗರದ ಮಹಾರಾಜ ಜಾಮ್ ಸಾಹೇಬ್ ಖಚಿತಪಡಿಸಿದ್ದಾರೆ.

ಜಡೇಜಾ ಅವರು 1992 ರಿಂದ 2000 ರ ನಡುವೆ ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದರು. ಅವರು 15 ಟೆಸ್ಟ್ ಮತ್ತು 196 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದರು. ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡ ಪತ್ರದಲ್ಲಿ, ಶತ್ರುಸಲ್ಯಸಿಂಹಜಿ ದಿಗ್ವಿಜಯ್‌ ಸಿಂಹಜಿ ಜಡೇಜಾ ಅವರು ಅಜಯ್ ಅವರ ಉತ್ತರಾಧಿಕಾರಿಯಾಗಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಅಜಯ್‌ ಜಡೇಜಾ ಅವರು ರಣಜಿ ಟ್ರೋಫಿ ಮತ್ತು ದುಲೀಪ್ ಟ್ರೋಫಿ ಹೆಸರಿಗೆ ಕಾರಣವಾದ ಕೆ ರಣಜಿತ್‌ಸಿಂಗ್‌ ಜಿ ಮತ್ತು ಕೆಎಸ್ ದುಲೀಪ್‌ ಸಿಂಗ್‌ ಜಿ ಅವರ ಸಂಬಧಿಕರು.

Advertisement

196 ಏಕದಿನ ಪಂದ್ಯವಾಡಿರುವ ಅಜಯ್‌ ಜಡೇಜಾ 5,359 ರನ್‌ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟರ್‌ ಆಗಿದ್ದ ಜಡೇಜಾ ಆರು ಶತಕ ಮತ್ತು 30 ಅರ್ಧ ಶತಕ ಬಾರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next