Advertisement

3 ಸಾವಿರ ಕೋಟಿ ಮೌಲ್ಯದ ಡ್ರಗ್ಸ್‌ ವಶ : ಕೇರಳದ ಅರಬ್ಬೀ ಕಡಲಲ್ಲಿ ನೌಕಾಪಡೆ ಕಾರ್ಯಾಚರಣೆ

11:16 PM Apr 19, 2021 | Team Udayavani |

ಕೊಚ್ಚಿ: ವಿದೇಶಿ ಮೂಲದ ಹಡಗೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 3 ಸಾವಿರ ಕೋಟಿ ರೂ. ಮೌಲ್ಯದ ಭಾರೀ ಮಾದಕದ್ರವ್ಯಗಳನ್ನು ನೌಕಾಪಡೆ ವಶಪಡಿಸಿಕೊಂಡಿದೆ.

Advertisement

ಭಾರತೀಯ ನೌಕಾಪಡೆಯ “ಸುವರ್ಣ’ ಹಡಗು, ಕೇರಳ ತೀರದ ಅರಬ್ಬೀ ಸಮುದ್ರಲ್ಲಿ ಪಹರೆ ನಡೆಸುತ್ತಿದ್ದಾಗ, ಕೊಚ್ಚಿ ಬಂದರಿನ ಸಮೀಪ ಈ ಹಡಗನ್ನು ಪತ್ತೆಹಚ್ಚಿದೆ. ಒಟ್ಟು 300 ಕಿಲೋ ತಂಬಾಕು ಉತ್ಪನ್ನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ, ಇದು ಯಾವ ದೇಶದ ಹಡಗೆಂದು ಇನ್ನೂ ಬಹಿರಂಗವಾಗಿಲ್ಲ.

“ಇದು ಇತ್ತೀಚಿನ ದಿನಗಳಲ್ಲೇ ಭಾರೀ ದೊಡ್ಡ ಡ್ರಗ್ಸ್‌ ಸೆರೆ. ಮಕ್ರಾನ್‌ ವಲಯದಲ್ಲಿ ಮಾದಕವಸ್ತು ಸಾಗಾಟದ ಕಳ್ಳಮಾರ್ಗ ಈ ಮೂಲಕ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಈ ಮಾರ್ಗದಲ್ಲಿ ಮಾಲ್ಡೀವ್ಸ್‌, ಶ್ರೀಲಂಕಾ ಕಡೆಯಿಂದ ಹಡಗುಗಳು ಸಂಚರಿಸುತ್ತವೆ’ ಎಂದು ರಕ್ಷಣಾ ವಕ್ತಾರ ಮಾಹಿತಿ ನೀಡಿದ್ದಾರೆ. ವಶಪಡಿಸಿಕೊಂಡ ಹಡಗನ್ನು ಹೆಚ್ಚಿನ ವಿಚಾರಣೆಗೆ ಗುರಿಪಡಿಸಲಾಗಿದೆ.

ಇದನ್ನೂ ಓದಿ :ಅಂಬಾನಿ ನಿವಾಸ ಸಮೀಪ ಸ್ಫೋಟಕ ಪತ್ತೆ ಪ್ರಕರಣ : ಹಿರನ್‌ ಮನೆಗೆ ಎನ್‌ಐಎ ಭೇಟಿ

Advertisement

Udayavani is now on Telegram. Click here to join our channel and stay updated with the latest news.

Next