Advertisement

ಮಹಿಳೆ ಮೇಲೆ ರೇಪ್‌: 8 ಬಾರಿಯ ಮಿ|ಇಂಡಿಯಾ, ನೌಕಾಧಿಕಾರಿ ಅರೆಸ್ಟ್‌

04:40 PM Sep 03, 2018 | Team Udayavani |

ಮುಂಬಯಿ : ಕೇರಳದಲ್ಲಿ  ಇಪ್ಪತ್ತರ ಹರೆಯದ ಮಹಿಳೆಯನ್ನು ರೇಪ್‌ ಮಾಡಿದ ಆರೋಪದ ಮೇಲೆ ಪೊಲೀಸರು, ಮುಂಬಯಿ ನೌಕಾ ಪಡೆಯಲ್ಲಿ ಅಧಿಕಾರಿ, ಎರಡು ಬಾರಿಯ ಮಿಸ್ಟರ್‌ ಏಶ್ಯ ಮತ್ತು ಎಂಟು ಬಾರಿಯ ಮಿಸ್ಟರ್‌ ಇಂಡಿಯಾ ಆಗಿರುವ, 38ರ ಹರೆಯದ ಮುರಳಿ ಕುಮಾರ್‌ ರನ್ನು ಬಂಧಿಸಿದ್ದು ನ್ಯಾಯಾಲಯ ಆತನನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ. 

Advertisement

“ನನ್ನ ಮಗಳನ್ನು ಮದುವೆಯಾಗಿ ನಂಬಿಸಿ ಮುರಳಿ ಕುಮಾರ್‌ ರೇಪ್‌ ಎಸಗಿದ್ದಾನೆ” ಎಂದು ಮಹಿಳೆಯ ತಂದೆ ನೀಡಿದ ದೂರಿನ ಪ್ರಕಾರ ಆರೋಪಿಯನ್ನು ಬಂಧಿಸಲಾಗಿದೆ. 

ಆರೋಪಿ ಮುರಳಿ ಕುಮಾರ್‌ ಮುಂಬಯಿ ನೌಕಾಪಡೆಯಲ್ಲಿ ಚೀಫ್ ಪೆಟ್ಟಿ ಆಫೀಸರ್‌ ಆಗಿದ್ದಾರೆ. ಇವರ ವಿರುದ್ಧ ಪೊಲೀಸರು ಎಸ್‌/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಯಡಿಯೂ ಕೇಸು ದಾಖಲಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next