ನವದೆಹಲಿ: ನೌಕಾಪಡೆಯ ಕಿಲೋ ದರ್ಜೆಯ ಜಲಾಂತರ್ಗಾಮಿ ನೌಕೆಗಳ ಮೇಲ್ದರ್ಜೆಗೇರಿಸುವ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಸಿಬಿಐ ಇಬ್ಬರು ನಿವೃತ್ತ ಹಾಗೂ ಓರ್ವ ನೌಕಾಪಡೆಯ ಹಾಲಿ ಅಧಿಕಾರಿಯನ್ನು ಬಂಧಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಆಪರೇಷನ್ ಕಮಲಕ್ಕೆ ಸಹಕರಿಸಲು ಸಿದ್ದು ದುಡ್ಡು ಪಡೆದಿದ್ದರು : ಎಚ್ ಡಿಕೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಬಂಧನವಾಗುವ ಸಾಧ್ಯತೆ ಇದೆ. ಆದರೆ ಮಾಹಿತಿ ಸೋರಿಕೆ ವಿಚಾರದಲ್ಲಿ ವಿದೇಶಿ ಗುಪ್ತಚರ ಇಲಾಖೆಗಳ ಕೈವಾಡ ಇದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ವರದಿ ತಿಳಿಸಿದೆ.
ಕೆಲವು ಅನಧಿಕೃತ ಸಿಬಂದಿಯೊಂದಿಗೆ ಆಡಳಿತಾತ್ಮಕ ಮತ್ತು ವಾಣಿಜ್ಯ ಸ್ವರೂಪದ ಮಾಹಿತಿ ಸೋರಿಕೆಗೆ ಸಂಬಂಧಿಸಿದ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಬಗ್ಗೆ ನಾವು ಸೂಕ್ತ ಸರ್ಕಾರಿ ಏಜೆನ್ಸಿಯಿಂದ ತನಿಖೆ ನಡೆಸುವುದಾಗಿ ನೌಕಾಪಡೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಿದೆ.
ತನಿಖಾ ಸಂಸ್ಥೆಗೆ ಭಾರತೀಯ ನೌಕಾಪಡೆ ಸಂಪೂರ್ಣ ಸಹಕಾರ ನೀಡಲಿದೆ. ಅಷ್ಟೇ ಅಲ್ಲ ನೌಕಾಪಡೆಯ ಆಂತರಿಕ ತನಿಖೆ ಕೂಡಾ ಪ್ರಗತಿಯ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.