Advertisement

ಬಾಂಗ್ಲಾ ಅಂತಾರಾಷ್ಟ್ರೀಯ ನೌಕಾ ಕವಾಯತಿಗೆ ಎಡ್ಮಿರಲ್‌ ಲಾಂಬಾ

04:55 PM Nov 25, 2017 | Team Udayavani |

ಹೊಸದಿಲ್ಲಿ : ಭಾರತೀಯ ನೌಕಾ ಪಡೆಯ ಮುಖ್ಯಸ್ಥ ಎಡ್ಮಿರಲ್‌ ಸುನೀಲ್‌ ಲಾಂಬಾ ನಾಳೆ ಭಾನುವಾರದಿಂದ 3 ದಿನಗಳ ಬಾಂಗ್ಲಾದೇಶ ಭೇಟಿ ಕೈಗೊಳ್ಳಲಿದ್ದಾರೆ.

Advertisement

ಭಾರತದ ಮುತುವರ್ಜಿಯಲ್ಲಿ ಈಚೆಗೆ ರೂಪಿಸಲಾಗಿರುವ ಪ್ರಾದೇಶಿಕ ಸಾಗರಿಕ ವೇದಿಕೆಯಡಿ ಏರ್ಪಡಿಸಲಾಗಿರುವ ಬಹುಸ್ತರಗಳ ಅಂತಾರಾಷ್ಟ್ರೀಯ ನೌಕಾ ಕವಾಯತುಗಳಲ್ಲಿ ಲಾಂಬಾ ಅವರು ಭಾಗವಹಿಸಲಿದ್ದಾರೆ. 

ಬಾಂಗ್ಲಾದೇಶದೊಡನೆ ದ್ವಿಪಕ್ಷೀಯ ನೌಕಾ ಸಂಬಂಧಗಳನ್ನು ಸದೃಢಗೊಳಿಸುವುದು ಮತ್ತು ಉಭಯ ದೇಶಗಳ ನಡುವಿನ ಸಾಗರಿಕ ಸಹಕಾರದಲ್ಲಿ ಹೊಸ ಆಯಾಮಗಳನ್ನು ಶೋಧಿಸುವುದು ಲಾಂಬಾ ಅವರ 3 ದಿನಗಳ ಬಾಂಗ್ಲಾ ಭೇಟಿಯ ಉದ್ದೇಶವೆಂದು ವರದಿಗಳು ತಿಳಿಸಿವೆ. 

ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರು ಸೋಮವಾರ ಬಂದರು ನಗರವಾಗಿರುವ ಕೋಕ್ಸ್‌ ಬಜಾರ್‌ನಲ್ಲಿ ಉದ್ಘಾಟಿಸುವ ಅಂತಾರಾಷ್ಟ್ರೀಯ ಬಹುಸ್ತರಗಳ ಸಾಗರಿಕ ಶೋಧನೆ ಮತ್ತು ರಕ್ಷಣಾ ಕವಾಯತುಗಳಲ್ಲಿ ಭಾರತೀಯ ನೌಕಾಪಡೆಯ ರಣವೀರ್‌, ಸಹ್ಯಾದ್ರಿ, ಘರಿಯಾಲ್‌ ಮತ್ತು ಸುಖನ್ಯಾ ಸಮರ ನೌಕೆಗಳು ಮಾತ್ರವಲ್ಲದೆ ಪಿ-8ಐ ಸಾಗರಿಕ ವಿಚಕ್ಷಣ ವಿಮಾನ ಕೂಡ ಪಾಲ್ಗೊಳ್ಳಲಿವೆ ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next