Advertisement

Indian Navy ಪಡೆ ಯೋಧರಿಗೆ ಹೊಸ ಸಮವಸ್ತ್ರ

10:14 PM Sep 04, 2023 | Team Udayavani |

ನವದೆಹಲಿ: ಭಾರತೀಯ ನೌಕಾ ಪಡೆಯ ಯೋಧರು ಶೀಘ್ರದಲ್ಲೇ ನೂತನ ಸಮಸವಸ್ತ್ರ ಹೊಂದಲಿದ್ದಾರೆ. ಅದನ್ನು ಹೆಚ್ಚು ಆರಾಮದಾಯಕ, ನೈರ್ಮಲ್ಯ ಮತ್ತು ಕಾರ್ಯಶೀಲತೆಗೆ ಅನುಕೂಲವಾಗುವಂತೆ ಹಾಗೂ ಎಲ್ಲಾ ಹವಾಗುಣಕ್ಕೂ ಹೊಂದುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

Advertisement

ಸಮವಸ್ತ್ರದ ಜತೆಗೆ ವಿಶೇಷ ವಿನ್ಯಾಸದ ಜಾಕೆಟ್‌, ಟಿ-ಶರ್ಟ್‌, ಬೂಟುಗಳು, ಟೋಪಿಗಳನ್ನು ಸಹ ನೀಡಲಾಗುತ್ತದೆ ಎಂದು ಭಾರತೀಯ ನೌಕಾ ಪಡೆ ತಿಳಿಸಿದೆ.

ನವದೆಹಲಿಯಲ್ಲಿ ನಡೆದ ನೌಕಾ ಪಡೆ ಕಮಾಂಡರ್‌ಗಳ ಸಮಾವೇಶದಲ್ಲಿ ನೂತನ ಸಮವಸ್ತ್ರ ಸೇರಿದಂತೆ ವಿಶೇಷ ವಿನ್ಯಾಸದ ವಸ್ತುಗಳನ್ನು ಪ್ರದರ್ಶಿಸಲಾಯಿತು.

ಭಾರತೀಯ ನೌಕಾ ಪಡೆಯ ಮುಖ್ಯಸ್ಥ ಅಡ್ಮಿರಲ್‌ ಆರ್‌.ಹರಿಕುಮಾರ್‌ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಸಮಾವೇಶ ಬುಧವಾರದವರೆಗೆ ನಡೆಯಲಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next