Advertisement

Navratri: ಮಾತೃಶಕ್ತಿ ಆರಾಧನೆಯ ನವರಾತ್ರಿ

10:43 PM Oct 04, 2024 | Team Udayavani |

ನವರಾತ್ರಿಗಳಲ್ಲೆಲ್ಲ ಶ್ರೇಷ್ಟ, ಶರದೀಯ ನವರಾತ್ರಿ. ಅದು ಮಹಾನವರಾತ್ರಿ! ಶರದೃತು ಆಶ್ವ ಯುಜ ಮಾಸದಲ್ಲಿ ಬರುವ ಪರ್ವ ಆದುದರಿಂದ ಶರದೀಯ ನವರಾತ್ರಿ. ನವದಿನಗಳಲ್ಲೂ, ಶಕ್ತಿದೇ ವತೆಯ ನವ ರೂಪಗಳ ಆರಾಧನೆ. ನವ ದಿನೋ ತ್ಸವದ ಸಮಾಪನ ದಸರಾ, ವಿಜಯದಶಮಿ. ದೇವಿ ಯನ್ನು ಮಾತೃ ಸ್ವರೂಪಿ ಎಂದು ಪೂಜಿಸುವುದು ಸನಾತನ ಸಂಸ್ಕೃತಿಯ ವೈಶಿಷ್ಟ್ಯ. ಅಂತೆಯೇ ಯಾ ದೇವೀ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ ಎಂದು ದೇವಿಯ ಸ್ತುತಿ. ಅವಳು ಶಕ್ತಿ ಸ್ವರೂಪಿಯೂ ಹೌದು… ಶಕ್ತಿ ರೂಪೇಣ ಸಂಸ್ಥಿತಾ… ನವರಾತ್ರಿ ಪೂಜೆಯು ಮಾತೃ ಪೂಜೆ ಯೇ. ಅವಳು ಆದಿಮಾತೆ, ಪರಾಶಕ್ತಿ, ಆದಿಶಕ್ತಿ, ಧಾತ್ರಿ. ಅವಳು ವಿಶ್ವಮಾತೆ. ಮಹಾಮಾತೆ. ನವ ರಾತ್ರಿಯಲ್ಲಿ ಮಾತೃಶಕ್ತಿಯ ಆರಾಧನೆಗೆ ಪ್ರಾಶಸ್ತ್ಯ.

Advertisement

ಸ್ತ್ರೀಪಂಥದ ಒಂದು ವಿಶಿಷ್ಟ ಪರಂಪರೆ
ವಿಶೇಷವಾಗಿ ದೇವಿಯ ವರ್ಣನೆಯು ನಮಗೆ ಕಾಣಸಿಗುವುದು ಬ್ರಹ್ಮಾಂಡ ಪುರಾಣ ಮತ್ತು ಮಾರ್ಕೇಂಡೇಯ ಪುರಾಣಗಳಲ್ಲಿ. ಲಲಿತ ಸಹಸ್ರ ನಾಮದ ಉಲ್ಲೇಖವಿರುವುದು ಬ್ರಹ್ಮಾಂಡ ಪುರಾಣದಲ್ಲಿ. ಶಾಕ್ತ ಮತ್ತು ದೇವೀಮಹಾತ್ಮೆಯ ವಿವರಣೆ ನಮಗೆ ಮಾರ್ಕಂಡೇಯ ಪುರಾಣದಲ್ಲಿ ಸಿಗುತ್ತದೆ. ನಾರದ ಪುರಾಣ ಅಥವಾ ನಾರದೀಯ ಪುರಾಣದಲ್ಲೂ ವಿಷ್ಣು, ಶಿವ, ಕೃಷ್ಣ, ರಾಮ, ಲಕ್ಷ್ಮೀ ಜತೆ ದೇವಿಯ ವರ್ಣನೆಯೂ ದೊರಕುತ್ತದೆ. ವರಾಹ ಪುರಾಣದಲ್ಲೂ ವಿಷ್ಣು, ಶಿವನೊಂದಿಗೆ ದುರ್ಗೆಯ ಉಲ್ಲೇಖವಿದೆ. ಮುಖ್ಯವಾಗಿ ಮಾರ್ಕಂಡೇಯ ಪುರಾಣ, ಶಿವ ಪುರಾಣ, ಲಿಂಗ ಪುರಾಣ, ಬ್ರಹ್ಮವೈವರ್ತ ಪುರಾಣ, ಅಗ್ನಿಪುರಾಣ ಮತ್ತು ಪದ್ಮ ಪುರಾಣವು ದೇವಿ ಮತ್ತು ತಂತ್ರದ ವಿವರಗಳನ್ನು ಒಳಗೊಂಡಿದೆ. ಹದಿನೆಂಟು ಪುರಾಣಗಳನ್ನು ಸತ್ವ, ರಜ ಮತ್ತು ತಮೋ ಗುಣಗಳನ್ವಯ ವರ್ಗೀಕರಿ ಸಲಾಗಿದೆ. ದೇವಿ ಪುರಾಣಗಳು ರಾಜಸ ವರ್ಗಕ್ಕೆ ಸೇರಿವೆ. ಪುರಾಣಗಳ ಕಾಲದಲ್ಲಿ ದೇವಿಯು ಒಂದು ಮಹಾಶಕ್ತಿಯಾಗಿ ಗೋಚರಿಸಿದಳು.

ದೇವಿ ಉಪಾಸನೆಯನ್ನು ಕ್ರಮೇಣ ಶೈವರಿಂದ ವೈಷ್ಣವರು ಗಿಟ್ಟಿಸಿಕೊಂಡರು. ದೇವೀಭಾಗವತ ಪುರಾಣವು ದೇವಿಮಹಾತ್ಮೆಯನ್ನು ಇನ್ನಷ್ಟು ದೀರ್ಘ‌ ವಾಗಿ, ವಿವರಗಳೊಂದಿಗೆ ಮರುಸೃಷ್ಟಿ ಗೊಳಿಸಿತು. ಅದರಲ್ಲಿ ಶಾಕ್ತ ತತ್ವಶಾಸ್ತ್ರದ ಪ್ರತಿ ಫ‌ಲನವನ್ನು ಕಾಣ ಬಹುದು. ದೇವಿಭಾಗವತ ಪುರಾಣವು ಪುರುಷ ದೇವತೆಗಳಿಗಿಂತ ದೇವಿಯ ಶ್ರೇಷ್ಠತೆಯನ್ನು ತೋರಿ ಸುವ ಉದ್ದೇಶವನ್ನು ಹೊಂದಿದೆ. ದೇವೀ ಭಾಗವತ ಪುರಾಣದಲ್ಲಿ ದೇವಿಯು ಹೆಚ್ಚಾಗಿ ತನ್ನ ಭಕ್ತರನ್ನು ಸಲಹು ವವಳಂತೆ ಕಾಣಿಸಿಕೊಳ್ಳುತ್ತಾಳೆ. ವೀರೆ, ಕಲಿ, ಯೋಧೆಯಂತಾಗಿ ಕಾಣುವುದು ಕಡಿಮೆ. ಜ್ಞಾನಬೋಧಕಳಾಗಿಯೂ ಕಾಣುತ್ತಾಳೆ. ದೇವಿ ಮಹಾತೆ¾ಯು ಸ್ವತಂತ್ರಶಾಕ್ತದ ಹುಟ್ಟನ್ನು ಘೋಷಿ ಸುತ್ತದೆ. ಸ್ತ್ರೀ ಪಂಥದ ಒಂದು ವಿಶಿಷ್ಟ ತತ್ವಜ್ಞಾನದ ಪರಂಪರೆಯನ್ನು ಅದು ಆರಂಭಿಸಿತು.

ದೇವಿಯ ಗುಣತ್ರಯದ ಮೂರು ಶಕ್ತಿರೂಪಗಳು
ದೇವೀಭಾಗವತದ ಪ್ರಥಮ ಸ್ಕಂದವು ಮಹಾ ಲಕ್ಷ್ಮೀ, ಸರಸ್ವತಿ, ಮಹಾಕಾಳೀ ಈ ಮೂವರು ದೇವಿಯ ಗುಣತ್ರಯದ ಮೂರು ಶಕ್ತಿರೂಪಗಳು – ಬ್ರಹ್ಮ, ವಿಷ್ಣು, ರುದ್ರ ಎಂಬ ತ್ರಿಮೂರ್ತಿಗಳು ಸಹ ಈ ಶಕ್ತಿಯಿಂದಲೇ ಜನಿಸಿದರು ಎಂಬಿತ್ಯಾದಿ ದೇವೀ ಮಹಾತ್ಮೆಯನ್ನು ತಿಳಿಸುತ್ತದೆ. ಹನ್ನೆರಡನೇ ಸ್ಕಂದದಲ್ಲಿ ಗಾಯತ್ರಿಸ್ವರೂಪ, ಮಹಿಮೆ, ಕೇನೋಪ ನಿಷತ್ತಿನಲ್ಲಿ ಬರುವ ದೇವಿಯ ಕಥೆ ಇತ್ಯಾದಿ ವರ್ಣ ನೆಗಳು ಬಂದಿವೆ. ದೇವೀ ಭಾಗವತದಲ್ಲಿ ಪರಬ್ರಹ್ಮದ ಒಂದು ಅನಿರ್ವಾ ಚ್ಯವಾದ ಮಾಯಶಕ್ತಿಯನ್ನೇ ದೇವಿ ಯೆಂದು ಚಿತ್ರಿಸಲಾಗಿದೆ. ತ್ರಿಮೂರ್ತಿಗಳೂ ಈ ದೇವಿಯ ಅಂಶದಿಂದ ಜನಿಸದವರು. ಸರಸ್ವತಿ, ಲಕ್ಷ್ಮೀ, ದುರ್ಗಾ ಇವರೂ ಶಕ್ತಿಯ ಒಂದಂಶಗಳು. ದೇವಿ ಯು ಒಂದು ದೃಷ್ಟಿಯಿಂದ ತ್ರಿಮೂರ್ತಿಗಳ ಜನನಿ. ಇನ್ನೊಂದು ದೃಷ್ಟಿಯಿಂದ ಪತ್ನಿ. ಅವಳು ಪರ ಬ್ರಹ್ಮಸ್ವರೂಪಿಣಿಯೂ ಹೌದು, ಪರಬ್ರಹ್ಮದ ಶಕ್ತಿಯೂ ಹೌದು.

ಬ್ರಹ್ಮವಿದ್ಯೆ ಮತ್ತು ಶ್ರೀವಿದ್ಯೆ
ಬ್ರಹ್ಮವಿದ್ಯೆಯು ಬ್ರಹ್ಮಜ್ಞಾನ. ಶ್ರೀವಿದ್ಯೆಯು ದೇವಿಯ ಜ್ಞಾನ. ಎರಡೂ ಒಂದೇ. ಬ್ರಹ್ಮವಿದ್ಯೆಯಲ್ಲಿ ಪ್ರಣವ ಓಂಕಾರ ಮಂತ್ರವಿದ್ದರೆ, ಶ್ರೀವಿದ್ಯೆಯಲ್ಲಿ ಬೀಜಮಂತ್ರ ಹ್ರೀಂ. ಬೀಜಮಂತ್ರ ಹ್ರೀಂ, ಮಾಯಾ ಬೀಜ ಅಥವಾ ಭುವನೇಶ್ವರಿ ಬೀಜವೆಂದು ಕರೆಯ ಲ್ಪಡುತ್ತದೆ. ಮರ, ಹೂ ಮತ್ತು ಹಣ್ಣು ಬೀಜದಿಂದ ಉತ್ಪನ್ನಗೊಂಡಂತೆ ದೇವಿಯ ವಿವಿಧ ಮುಖಗಳು, (ಮಹಾಕಾಳಿ, ಲಕ್ಷ್ಮೀ, ಸರಸ್ವತಿ) ಹ್ರೀಂ ಮಂತ್ರದಿಂದ ನಿಷ್ಪತ್ತಿ ಯಾಗುತ್ತದೆ. ದೇವೀ ಮಹಾತ್ಮೆಯನ್ನು ಆಂತ ರಿಕ ತೀರ್ಥಯಾತ್ರೆ ಎಂದೂ ಭಾವಿಸಬಹುದು. ಸತ್ವ, ತಮ, ರಜೋಗುಣದ ಪ್ರತಿರೂಪವೇ ಮಹಾ ಸರಸ್ವತಿ(ಸತ್ವ) ಮಹಾಲಕ್ಷ್ಮೀ (ರಜಸ್‌) ಮಹಾಕಾಳಿ(ತಮಸ್‌).

Advertisement

ದುರ್ಗೆಯ ವಿಗ್ರಹ ಏನಿದರ ಸಂಕೇತ?
ದೇವತಾ ವಿಗ್ರಹವು ನಮ್ಮೊಳಗಿರುವ ಪರಮಾ ತ್ಮನನ್ನು ತಿಳಿಸುತ್ತದೆ. ದುರ್ಗೆಯ ಆಯುಧ ತ್ರಿಶೂಲ, ತ್ರಿ ಗುಣಗಳನ್ನು ಸೂಚಿಸುತ್ತದೆ. ನಾಲ್ಕು ಕರಗಳು ಸತ್ವ, ರಜ, ತಮ ಮತ್ತು ಅಹಂಕಾರ. ಶಂಖವು ನಿಗೂಢ ಅಂಶಗಳನ್ನು ಪ್ರತಿನಿಧಿಸುತ್ತದೆ. ಅದು ರಜೋಗುಣದ ಸಂಕೇತವೂ ಹೌದು. ಚಕ್ರವು ಮನಸಿನ ಪ್ರತಿನಿಧಿ. ಬಾಣ ಸಾತ್ವಿಕ ಮಾಯೆಯ ಸಂಕೇತ. ಗಧೆ ಅಜ್ಞಾನವನ್ನು ಹೋಗಲಾಡಿಸುವ ಚಿಹ್ನೆ. ಕೈಯಲ್ಲಿನ ತಾವರೆ ಹೂವು ವಿಶ್ವದ 24 ತತ್ವಗಳ ಸಂಕೇತ.

ದೇವಿಯ ವಿವಿಧ ರೂಪಗಳು, ವಿಶಿಷ್ಟ ಪಾತ್ರಗಳಲ್ಲಿ, ವಿವಿಧ ಉದ್ದೇಶಗಳಿಗಾಗಿ ನಮ್ಮನ್ನು ಕಾಡುತ್ತಿರುವ ಒಂದು ಕುತೂಹಲಕಾರಿ ಪ್ರಶ್ನೆ   ದೇವರು ಹೆಣ್ಣೋ ಗಂಡೋ? ಪರಬ್ರಹ್ಮನು ನಿರ್ಗುಣನೂ ಹೌದು, ಸಗುಣನೂ ಹೌದು. ನಿರ್ಗುಣ ಎಂದರೆ ಅವನು ಲಿಂಗಾತೀತ. ಸಗುಣ ಎಂದರೆ ಅವನು ಸ್ತ್ರೀ ಆಗಿರಬಹುದು, ಪುರುಷನೂ ಆಗಬಹುದು. ಶಾಕ್ತಗ್ರಂಥವಾದ್ದರಿಂದ ದೇವಿ ಮಹಾತ್ಮೆಯು ಸ್ತ್ರೀಯನ್ನು ಅಂತಿಮ ಸತ್ಯ ಎಂದು ಹೇಳುತ್ತದೆ. ಇಲ್ಲಿ ಪರಬ್ರಹ್ಮನ ಬದಲಿಗೆ ಆದಿಶಕ್ತಿಯ ಆರಾಧನೆ. ಸಮಸ್ತ ಸೃಷ್ಟಿಯ ಮಾತೆ. ದೇವಿಯ ವಿವಿಧ ರೂಪಗಳು, ವಿಶಿಷ್ಟ ಪಾತ್ರಗಳಲ್ಲಿ, ವಿವಿಧ ಉದ್ದೇಶಗಳಿಗಾಗಿ ತಾಳಿವೆ. ದುರ್ಗಾ, ಚಂಡಿ, ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ಇತ್ಯಾದಿ. ಎಲ್ಲ ಪವಿತ್ರ ಪುರಾಣಗಳಂತೆ, ದೇವಿ ಮಹಾತೆ¾ಯಲ್ಲಿಯೂ ವಿವಿಧ ಹಂತದ ಸತ್ಯವಿದೆ. ಮೊದಲನೆಯದು ಬಾಹ್ಯ ವಿಶ್ವದ ಹಂತ. ಆಂತರಿಕ ಮಾನಸಿಕ ಹಂತ ಎರಡನೆಯದು. ಮೂರನೆಯದು ಅಲೌಕಿಕ ಹಂತ. ಈ ಮೂರೂ ಹಂತಗಳನ್ನು ಜತೆಗೂಡಿಸುವ ಹಂತ ನಾಲ್ಕ ನೆಯದು.

ಒಂದು ಹಂತದಲ್ಲಿ ದೇವಿಮಹಾತ್ಮೆಯು ದೇವಿ ಮತ್ತು ಅಸುರರ ನಡುವಿನ ಯುದ್ಧವನ್ನು ದಾಖ ಲಿಸಿದ ಚರಿತ್ರೆಯಂತೆ ಕಾಣುತ್ತದೆ. ಇನ್ನೊಂದು ಹಂತದಲ್ಲಿ ಬದುಕಿನ ಯದ್ಧದಂತೆ ಕಾಣುತ್ತದೆ. ಇನ್ನೊಂದು ಹಂತದಲ್ಲಿ ಮನುಷ್ಯನ ಆಂತರಿಕ ಮನಸ್ಸಿನಲ್ಲಿ ದೇವ ಮತ್ತು ಅಸುರರೊಳಗೆ ನಡೆಯುವ ಯುದ್ಧದಂತೆಯೂ, ಧನಾತ್ಮಕ, ಋಣಾತ್ಮಕದ ಯುದ್ಧದಂತೆ ಕಾಣುತ್ತದೆ. ಮನುಷ್ಯ ಪ್ರಜ್ಞೆಯೇ ಯುದ್ಧರಂಗ! ಅಲ್ಲಿ ನಡೆಯುವ ಘಟನೆಗಳು ನಮ್ಮ ಅನುಭವಗಳನ್ನೇ ಹೇಳುತ್ತದೆ. ದೇವಿಯು, ಏಕಕಾಲದಲ್ಲಿ ಪರಮೋಚ್ಚ ದೇವಿ ಮತ್ತಿತರ ದೇವತೆಗಳ ಒಂದು ಮೂರ್ತರೂಪ. ಅಹಂಕಾರ ಅಥವಾ ಸ್ವಪ್ರತಿಷ್ಠೆಗೆ ಕ ಾರಣವಾದ ಅಧಿಕ ತಾಮಸ ಮತ್ತು ರಾಜಸಗುಣಗಳೆಂಬ ರಾಕ್ಷಸ ರನ್ನು ಎದುರಿಸುವವಳು. ಈ ಗುಣಗಳು ಜಿಪು ಣತನ, ಸಿಟ್ಟು, ಮತ್ತು ಅಹಂಕಾರ ಮುಂತಾದ ಚಿತ್ತವೃತ್ತಿಯ ಮೇಲೆ ಪ್ರಭಾವ ಬೀರುತ್ತದೆ. ದೇವಿ ಮಹಾತ್ಮೆಯು ಸಾಂಖ್ಯ – ಯೋಗದ ಕುರಿತಾಗಿಯೂ ಹೇಳುತ್ತದೆ.

– ಜಲಂಚಾರು ರಘುಪತಿ ತಂತ್ರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next