Advertisement
ಮಗಳ ವರಾತ. ಇದು ಮುಂಬಯಿಯಲ್ಲಿ ನವರಾತ್ರಿಯ ನವರಂಗಿನ ಉಡುಪಿನ ಹುಡುಕಾಟದಲ್ಲಿರುವ ಮನೆಮನೆಗಳ ಕತೆ. ಬೆಂಗಳೂರು ಮತ್ತು ಇತರ ನಗರಗಳಿಗೆ ಇನ್ನಷ್ಟೇ ಹಬ್ಬಬಹುದಾದ ಸಾಂಕ್ರಾಮಿಕ ಸಂಭ್ರಮ. ಮುಂಬೈಯಲ್ಲಿ ನವರಾತ್ರಿಗೆ ಬರೋಬ್ಬರಿ ಒಂದು ತಿಂಗಳು ಇರುವಾಗಲೇ ಮನೆಯಲ್ಲಿ ಬಣ್ಣದುಡುಗೆಗಳ ಲೆಕ್ಕ ಪಕ್ಕ ಮಾಡೋಕೆ ಶುರುವಾಗುತ್ತದೆ.
Related Articles
ಮುಂಬಯಿಯ ಎಲ್ಲೆಡೆ ಲಲನೆಯರಿಗೆ ನವರಾತ್ರಿಯ ಸಂಭ್ರಮ ಪ್ರತಿದಿನವೂ ರಂಗುರಂಗಿನ ಸೀರೆಯುಡುವುದರಲ್ಲಿ ಮುಗಿದು ಬಿಡುವಂಥದ್ದಲ್ಲ. ದಿನವೂ ಟ್ರೆçನಿನಲ್ಲಿ ಪ್ರಯಾಣಿಸುವಾಗ, ಆಫೀಸಿನಲ್ಲಿ ತನ್ನ ಬಳಗದವರ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಫೇಸ್‌ಬುಕ್, ವಾಟ್ಸಾಪ್‌ಗ್ಳಿಗೆ ಅಪ್ಲೋಡ್ ಮಾಡಿ ಯಾರ ಉಡುಗೆ ಚಂದ, ಎಷ್ಟು ಲೈಕ್ ಬಂತು? ಕಮೆಂಟ್ ಯಾರ ಕುರಿತಾಗಿದೆ? ನಾಳೆ ಎಲ್ಲರಿಗಿಂತಲೂ ನಾನೇ ಸೂಪರ್ ಆಗಿ ಕಾಣಿಸ್ಬೇಕು ಎಂದು ತಮ್ಮ ತಮ್ಮಲ್ಲೇ ಚರ್ಚೆ ನಡೆಯುತ್ತಿರುತ್ತದೆ.
Advertisement
ತಮ್ಮ ಮೆಚ್ಚಿನ ಬಣ್ಣದ ದಿನ ಬಂದಾಗ, “”ವಾಹ್ ಆಜ್ ಮೇರಾ ಫೇವರೇಟ್ ಕಲ್ಲರ್ ಹೈ” ಎಂದು ತಮ್ಮ ನೆಚ್ಚಿನುಡುಗೆಯಲ್ಲಿ ಇನ್ನಷ್ಟು ಖುಷಿ ಪಡುವುದುಂಟು.
ಪುರುಷರೇನು ಕಡಿಮೆಯೇ? ಲೈಟ್ ಕಲ್ಲರಾದ್ರೂ ಪರ್ವಾಗಿಲ್ಲ ಅಂತ, ಆ ದಿನ ದೇವಿ ಯಾವ ರೂಪಿನಲ್ಲಿ ತೋರುವಳ್ಳೋ, ಅದಕ್ಕೆ ಸನಿಹವಾಗಿರೋ ಕಲ್ಲರಿನ ಶರ್ಟ್ ಅಥವಾ ಟೀಶರ್ಟ್ ಪ್ಯಾಂಟ್ ಧರಿಸುವುದನ್ನು ಮರೆಯುವುದಿಲ್ಲ. ಆದರೆ ಡ್ರೆಸ್‌ಕೋಡ್ ಬಗ್ಗೆ ಹೆಚ್ಚು ಆಸಕ್ತರು ಮಹಿಳೆಯರೇ ಹೊರತು ಪುರುಷರಲ್ಲ. ಅವರ ಸಂಖ್ಯೆ ಕಡಿಮೆಯೇ. ದೇವರ ಮೂರ್ತಿಗೂ ಅದೇ ಬಣ್ಣದ ಸೀರೆಯನ್ನು ಉಡಿಸುತ್ತಾರೆ.
ಮಕ್ಕಳಿಂದ ಹಿಡಿದು ಇಳಿವಯಸ್ಸಿನವರೆಗೂ ಬಣ್ಣಗಳ ನಿಯಮ ಪಾಲನೆ ಮಾಡುವ ಜನರನ್ನು ನೋಡಿದಾಗ, ಸೋಜಿಗವೆನಿಸದಿರದು.
“”ಅರೆ ಬಾಬೀಜಿ ಆಜ್ ಆಪ್ನೆ ಲಾಲ್ ರಂಗ್ ಕೆ ಸಾಡಿ ನಹಿ ಪೆಹನಾ ಕ್ಯಾ” ಕೇಳಿದ್ರೆ ತಕ್ಷಣ, “”ದೆಕೋನಾ ಇಸೆ¾ ಲಾಲ್ ರಂಗ್ ಕಾ ಬೋರ್ಡರ್ ಹೈನಾ, ಯೆ ಬೀ ಚಲ್ತಾ ಹೈ” ಅಂತ ಉತ್ತರಿಸುತ್ತಾರೆ.
ಮುಂಬಯಿಗರು ಪ್ರತಿಯೊಂದು ಸಂಗತಿಗೆ ಸ್ವಯಂಪ್ರೇರಿತರಾಗಿ ಬದ್ಧರಾಗಿರುವ ರೀತಿ ನನಗಿಷ್ಟ .
ನವರಂಗಿನ ಲೆಕ್ಕಾಚಾರಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಈ ನವರಾತ್ರಿಯ ಬಣ್ಣದುಡುಗೆಗಳ ಸಂಭ್ರಮ ದೊಡ್ಡಮಟ್ಟದಲ್ಲಿ ಬೆಳೆಯುತ್ತಿದೆ. ಇದರ ಹಿಂದೆ ವ್ಯಾಪಾರೀ ಉದ್ದೇಶ ಖಂಡಿತವಾಗಿಯೂ ಇದೆ. ಹಿಂದೆ ಯಾರೂ ಕೇಳದಿದ್ದ ಅಕ್ಷಯ ತೃತೀಯ ಇಂದು ಚಿನ್ನದಂಗಡಿಗಳಿಗೆ ವಾರ್ಷಿಕ ಕ್ಲಿಯರೆನ್ಸ್ ಸೇಲ್ ಸಂಭ್ರಮವಾಗಿಬಿಟ್ಟಿರುವ ಹಾಗೆ ! ನವರಾತ್ರಿಯಲ್ಲಿ ನವದುರ್ಗೆಯರನ್ನು ಪೂಜಿಸುವ ಪದ್ಧತಿ ದೇಶದೆÇÉೆಡೆ ಇದೆ. ಗುಜರಾತ್ ಮಹಾರಾಷ್ಟ್ರಗಳ ಸಂಪ್ರದಾಯದಲ್ಲಿ ಈ ನವದುರ್ಗೆಯರು ಮತ್ತು ಅವರಿಗೆ ಇಷ್ಟವಾದ ಬಣ್ಣಗಳು ಹೀಗಿವೆ: ಪ್ರಥಮ: ಭುವನೇಶ್ವರಿ (ಆಕಾಶ ನೀಲಿ), ದ್ವಿತೀಯ: ಭೈರವಿ (ಬೂದು), ತೃತೀಯ: ಚಿನ್ನಮಸ್ತ (ಪಿಂಕ್), ಚತುರ್ಥಿ: ಜಗದಂಬ (ಹಸಿರು), ಪಂಚಮಿ: ನಾರಾಯಣಿ (ಕಡುನೀಲಿ), ಷಷ್ಠಿ: ಅಂಬಾ (ಗಿಳಿಹಸಿರು), ಸಪ್ತಮಿ: ತಾರಾ ಅಥವಾ ಚಾಮುಂಡಾ (ಕಿತ್ತಳೆ), ಅಷ್ಟಮಿ: ರೇಣುಕಾದೇವಿ ಅಥವಾ ಮಾತಂಗಿ (ರಾಯಲ್ ಬ್ಲೂ), ನವಮಿ: ದುರ್ಗಾ (ಕೆಂಪು). ಹಾಗಾದರೆ, “ಇದೇ ರೀತಿ ಪ್ರತಿವರ್ಷವೂ ಧರಿಸುತ್ತಾರಾ’ ಎಂದು ಕೇಳಿದರೆ, “ಊಂಹೂ. ಇಲ್ಲ!’
ಇದಕ್ಕೆ ಕಾರಣವೇನೆಂದರೆ ಈ ದೇವಿಯರಿಗೆ ಇಷ್ಟವಾದ ವಾರವೂ ಇದೆ. ವಾರಕ್ಕೂ ಈ ಬಣ್ಣ ಹೊಂದಾಣಿಕೆ ಆಗಬೇಕು. ಹಾಗಾಗಿ, ಯಾವ ವಾರ ನವರಾತ್ರಿ ಪ್ರಾರಂಭವಾಗುತ್ತದೆಯೋ ಅದರ ಆಧಾರದಲ್ಲಿ ಬಣ್ಣಗಳನ್ನು ನಿರ್ಧರಿಸುತ್ತಾರೆ.
ಆದರೆ, ಇಲ್ಲಿ ಇನ್ನೂ ಒಂದು ಸಮಸ್ಯೆ ಇದೆ. ಶನಿವಾರಕ್ಕೆ ಬೂದು ಬಣ್ಣ ಅಂತ ಆದರೆ ನವರಾತ್ರಿಯಲ್ಲಿ ಬರುವ ಎರಡನೆಯ ಶನಿವಾರದ ಕತೆ ಏನು? ಅದನ್ನು ಈ ರೀತಿ ಬಗೆಹರಿಸಿ¨ªಾರೆ. ಒಂದು ವಾರ ಎರಡನೆಯ ಬಾರಿ ಬಂದಾಗ ಆ ವಾರ ಪಿಂಕ್ ಅನ್ನೇ ಧರಿಸತಕ್ಕದ್ದು. (ಅಂದರೆ ಎರಡನೆಯ ಬಾರಿ ಶನಿವಾರ ಬಂದಾಗ ಪಿಂಕ್). ಒಂಬತ್ತನೆಯ ದಿನ ನೇರಳೆ ಅಥವಾ ಆಕಾಶನೀಲಿ ಪರ್ಯಾಯ ವ್ಯವಸ್ಥೆಯಲ್ಲಿ ಬರುತ್ತದಂತೆ. ಆದರೆ, ಇದನ್ನು ಒಂದು ನಿಯಮ ಎಂದು ಭಾವಿಸುವಂತಿಲ್ಲ. ಯಾಕೆಂದರೆ, ಈ ವರ್ಷದ ಪಟ್ಟಿಯನ್ನೇ ನೋಡಿದರೆ ಈ ನಿಯಮದಂತಿಲ್ಲ ಎನ್ನುವುದು ಗೊತ್ತಾಗುತ್ತದೆ. ಹಾಗಾದರೆ, ಈ ಡ್ರೆಸ್ ಕೋಡ್ ನಿರ್ಧಾರದ ಹಿಂದೆ ಬಟ್ಟೆ ವ್ಯಾಪಾರಿಗಳಿ¨ªಾರಾ? ಗೊತ್ತಿಲ್ಲ. ಅಥವಾ ಹತ್ತು ದಿನಗಳ ನವರಾತ್ರಿ ಬಂದಿರುವ ಕಾರಣ ಒಂದು ಹೆಚ್ಚುವರಿ ಬಣ್ಣವನ್ನು ಬಳಸಬೇಕಾಯಿತು ಎಂದು ಊಹಿಸಬಹುದು. ಜ್ಯೋತಿಷಿಗಳ ಸಹಾಯವಂತೂ ಈ ಬಣ್ಣ ನಿರ್ಧಾರಕ್ಕೆ ಬೇಕೇ ಬೇಕಾಗುತ್ತದೆ. ಯಾಕೆಂದರೆ, ಸೋಮವಾರ ಚಂದ್ರನ ದಿನವಾಗಿದ್ದು, ಆ ಗ್ರಹಕ್ಕೆ ಜ್ಯೋತಿಷ್ಯದಲ್ಲಿ ಹೇಳಿದ ಬಣ್ಣ ಬಿಳಿ. ಮಂಗಳನಿಗೆ ಕೆಂಪು ಹೀಗೆ. ಮುಂಬೈ ನಗರದಲ್ಲಿ ಪ್ರತಿ 100 ಮೀಟರ್ ಅಂತರದಲ್ಲಿ ಅಂದರೆ, ರಸ್ತೆಯ ಒಂದೊಂದು ತಿರುವಿನಲ್ಲೂ ಅಲ್ಲಿನ ಆಟೋ ಚಾಲಕರ ಗುಂಪು ಅಥವಾ ಒಂದೇ ಕಾಂಪ್ಲೆಕ್ಸ್‌ನಲ್ಲಿ ವಾಸಿಸುವ ಜನರ ಒಗ್ಗೂಡುವಿಕೆಯಲ್ಲಿ, ಸಂಘಟನೆಯ ಸದಸ್ಯರೆಲ್ಲ ಒಟ್ಟು ಸೇರಿ ನವರಾತ್ರಿಗೆ ಹದಿನೈದು ದಿನಗಳಿರುವಾಗಲೇ ತಯಾರಿಯಲ್ಲಿ ತೊಡಗುತ್ತಾರೆ. ಆದಿಶಕ್ತಿಯ ನೆಲೆ ಬೆಟ್ಟಗಳ ಮೇಲೆ
9ನೇ ದಿನದಂದು ದುರ್ಗೆ ನಾಸಿಕ್ ಸಮೀಪದ ವನಿ ಗ್ರಾಮದಲ್ಲಿರುವ ಸಪ್ತಶೃಂಗಿ ಬೆಟ್ಟದಲ್ಲಿ, ಮಹಿಷಾಸುರನನ್ನು ವಧಿಸಿ ಅವನನ್ನು ಮೆಟ್ಟಿ ನಿಂತು ರುಂಡವನ್ನು ಕೈಯಲ್ಲಿ ಹಿಡಿದ ಅದೇ ಘೋರ ರೂಪದಲ್ಲಿ ಅÇÉೇ ನೆಲೆಯಾದಳೆಂದು ಹೇಳುತ್ತಾರೆ. ಆದ್ದರಿಂದ ಅಲ್ಲಿನವರು ವನಿ ದೇವಿಯೆಂದು ಕರೆಯುತ್ತಾರೆ. ಉಗ್ರ ರೂಪದಲ್ಲಿ ನಿಂತಿರುವಂತಹ ಮಹಿಷಾಸುರ ಮರ್ಧಿನಿಯನ್ನು ನೋಡುವಾಗ ಮೈಮನಸ್ಸು ರೋಮಾಂಚನಗೊಳ್ಳುವುದು. ಯುದ್ಧ ಮಾಡುವಾಗ ರಾಕ್ಷಸರು ಆಕಾಶದೆತ್ತರಕ್ಕೆ ಹಾರುತ್ತಿ¨ªಾಗ ದೇವಿಯು ಎತ್ತರಕ್ಕೇರಿ ಅವರ ರುಂಡಗಳನ್ನು ಚೆಂಡಾಡುತ್ತಿದ್ದಳು. ಆದ್ದರಿಂದಲೇ ಹಲವಾರು ಕಡೆ ದೇವಿಯ ನೆಲೆ ಎತ್ತರದ ಬೆಟ್ಟದ ಮೇಲೆಯೇ ಇರುವುದರ ಹಿನ್ನೆಲೆಯಾಗಿದೆ. ಉದಾಹರಣೆಗೆ ಸಪ್ತಶೃಂಗಿಯ ವನಿ ದೇವಿ, ಖಂಡಾಲದ ಎಕ್ವೀರಾ ದೇವಿ, ವಜ್ರೆàಶ್ವರಿ, ಕಲ್ಯಾಣ್ ನಗರದ ದುರ್ಗಾ ದೇವಿ, ಕೋಲಾಪುರದ ಅಂಬಾ ಭವಾನಿ, ತುಲ್ಜಾಪುರದ ತುಲ್ಜಾ ಭವಾನಿ, ವಿರಾರ್ ಸಮೀಪದ ಜೀವ್‌ದಾನಿ ಎÇÉಾ ದೇವಿಯರ ಮಂದಿರಗಳು ಎತ್ತರದ ಬೆಟ್ಟದ ಮೇಲೆಯೇ ಇವೆ. – ಅನಿತಾ ಪಿ. ತಾಕೊಡೆ