Advertisement
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಸಡಗರ ಆರಂಭವಾಗಿದ್ದು, ಮೊದಲ ದಿನವಾದ ರವಿವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರಗಳಿಗೆ ಆಗಮಿಸಿದರು.
“ಮಂಗಳೂರು ದಸರಾ’ ಖ್ಯಾತಿಯ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಬೋಳಾರ ಶ್ರೀ ಮಾರಿಯಮ್ಮ ಮಹಿಷಾಮರ್ದಿನಿ, ಉರ್ವಾ ಶ್ರೀ ಮಾರಿಯಮ್ಮ, ಕೊಡಿಯಾಲ್‌ಬೈಲ್‌ನ ಕುದ್ರೋಳಿ ಶ್ರೀ ಭಗವತೀ ದೇವಸ್ಥಾನ, ಉಡುಪಿ ನಗರದ ಸುತ್ತಮುತ್ತಲಿನ ಬೈಲೂರು, ಇಂದ್ರಾಣಿ, ಕಡಿಯಾಳಿ, ಕನ್ನರ್ಪಾಡಿ, ಪುತ್ತೂರು, ಅಂಬಲಪಾಡಿಯ ದೇವಿ ದೇವಸ್ಥಾನಗಳ ಸಹಿತ ನಾಡಿನ ಪ್ರಸಿದ್ಧ ಕ್ಷೇತ್ರಗಳು ಹಾಗೂ ಪ್ರಮುಖ ದೇವಿ ಕ್ಷೇತ್ರಗಳಲ್ಲಿ ನವರಾತ್ರಿ ಸಡಗರ ಆರಂಭವಾಗಿದೆ. ಶ್ರೀಕೃಷ್ಣ ಮಠದಲ್ಲಿ ಎಲ್ಲ 9 ದಿನಗಳಲ್ಲಿ ಶ್ರೀಕೃಷ್ಣನಿಗೆ ದೇವಿಯ ಅಲಂಕಾರ ಮಾಡಿ ಪರ್ಯಾಯ ಶ್ರೀಪಾದರು ಪೂಜೆ ಸಲ್ಲಿಸುತ್ತಾರೆ. ವಿವಿಧ ದೇವಸ್ಥಾನಗಳಲ್ಲಿ ಚಂಡಿಕಾ ಹೋಮಗಳು, ಚಂಡಿಕಾ ಪಾರಾಯಣ, ದುರ್ಗಾ ನಮಸ್ಕಾರಗಳು ನಡೆಯಲಿವೆ. ಬಹುತೇಕ ಎಲ್ಲ ದೇವಾಲಯಗಳಲ್ಲಿ ಭೋಜನ ಪ್ರಸಾದ ನೀಡಲಾಗುತ್ತಿದೆ.