Advertisement

Navratri 2023: ವಿಜೃಂಭಣೆಯಿಂದ ನಡೆದ ದಾವಣಗೆರೆ ವಿಜಯದಶಮಿ ಮಹೋತ್ಸವ

02:43 PM Oct 24, 2023 | Team Udayavani |

ದಾವಣಗೆರೆ: ವಿಶ್ವ ಹಿಂದೂ ಪರಿಷದ್ ಮತ್ತು ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಆಶ್ರಯದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಬೃಹತ್ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು.

Advertisement

ಮಂಗಳವಾರ ನಗರದ ಶ್ರೀ ವೆಂಕಟೇಶ್ವರ ವೃತ್ತದಿಂದ ಪ್ರಾರಂಭವಾದ ಬೃಹತ್ ಶೋಭಾಯಾತ್ರೆಗೆ ಶ್ರೀ ಜಡೆಸಿದ್ದೇಶ್ವರ ಶಿವಯೋಗೀಶ್ವರ ಮಠದ‌ ಶ್ರೀ ಶಿವಾನಂದ ಮಹಾಸ್ವಾಮಿಗಳು ಚಾಲನೆ ನೀಡಿದರು.

ಶೋಭಾಯಾತ್ರೆಯು ಬಂಬೂಬಜಾರ್, ಚೌಕಿಪೇಟೆ, ದುರ್ಗಾಂಬಿಕಾ ದೇವಸ್ಥಾನ ರಸ್ತೆ ಮುಂತಾದೆಡೆ ಸಾಗಿಬಂದಿತು. ಸಾವಿರಾರು ಜನರು ಸಂಭ್ರಮದ ಶೋಭಾ ಯಾತ್ರೆಗೆ ಸಾಕ್ಷಿಯಾದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ,‌ ಮಾಜಿ ಶಾಸಕರಾದ ಎಸ್.ಎ. ರವೀಂದ್ರ ನಾಥ್, ಡಾ. ಎ.ಎಚ್. ಶಿವಯೋಗಿಸ್ವಾಮಿ, ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ಮಾಜಿ ಮೇಯರ್ ಗಳಾದ ಬಿ.ಜೆ ಅಜಯ್ ಕುಮಾರ್, ಎಸ್ ಟಿ. ವೀರೇಶ್, ರಾಜನಹಳ್ಳಿ ಶಿವಕುಮಾರ್, ನಗರ ಸಂಚಾಲಕ ಕೆ.ಆರ್. ಮಲ್ಲಿ ಕಾರ್ಜುನ್, ಎನ್.ರಾಜಶೇಖರ್, ಧನುಷ್, ‌ಶ್ರೀನಿವಾಸ್ ದಾಸಕರಿಯಪ್ಪ, ರಾಕೇಶ್, ಕೆ.ಬಿ. ಶಂಕರನಾರಾಯಣ, ವೈ. ಮಲ್ಲೇಶ್ ಇತರರು ಇದ್ದರು.

ಭಾರತಮಾತೆ, ಶ್ರೀ ಚಾಮುಂಡೇಶ್ವರಿ, ಶ್ರೀ ದುರ್ಗಾಂಬಿಕಾದೇವಿ, ವಿವೇಕಾನಂದ, ಛತ್ರಪತಿ ಶಿವಾಜಿ ಇತರರ ಭಾವಚಿತ್ರ,‌ ಸ್ತಬ್ಧ ಚಿತ್ರಗಳು, ನಂದಿಕೋಲು, ಡೊಳ್ಳು, ಚಂಡೆ ಮದ್ದಳೆ, ಗೊಂಬೆ ಕುಣಿತ, ಸಮ್ಮಾಳ ಇತರೆ ಜಾನಪದ ತಂಡಗಳಿದ್ದವು.

Advertisement

ಮುಸ್ಲಿಂ ಸಮುದಾಯದ ಮುಖಂಡರಾದ ದಾದುಸೇಠ್, ಕೆ. ಚಮನ್ ಸಾಬ್ ಇತರರು ಮಾಜಿ ಶಾಸಕರಾದ ರವೀಂದ್ರನಾಥ್, ಡಾ. ಶಿವಯೋಗಿ ಸ್ವಾಮಿ, ಹಿಂದೂ ಸಮಾಜದ ಇತರ ಮುಖಂಡರಿಗೆ ಸನ್ಮಾನಿಸಿ,‌ಸಿಹಿ ವಿತರಿಸುವ ಮೂಲಕ ಭಾವೈಕ್ಯತೆಗೆ ಸಾಕ್ಷಿ ಯಾದರು.

Advertisement

Udayavani is now on Telegram. Click here to join our channel and stay updated with the latest news.

Next