ಜಗತ್ತಿನ ಉದ್ಧಾರಕ್ಕಾಗಿ ನವರೂಪಗಳನ್ನು ಎತ್ತಿ, ದುಷ್ಟರನ್ನು ಸಂಹರಿಸಿ ನವದುರ್ಗೆ ಎನಿಸಿಕೊಂಡವಳು ಆ ಜಗನ್ಮಾತೆ. ದುರ್ಗಾ ಮಾತೆಯ ಒಂಭತ್ತನೇ ಅವತಾರವಾದ ಸಿದ್ಧಿ ಧಾತ್ರಿ ದೇವಿ, ನವರಾತ್ರಿಯ ಒಂಭತ್ತನೇ ದಿನ ಪೂಜಿಸಲ್ಪಡುತ್ತಾಳೆ. ಎಲ್ಲಾ ರೀತಿಯ ಶಕ್ತಿ, ವೈಭವ ಮತ್ತು ಮಹಿಮೆಯ ಮೂಲ ಸಿದ್ಧಿ ಧಾತ್ರಿ.
ಬಂಗಾರದಿಂದ ಅಲಂಕಾರಗೊಂಡಿರುವ ಹದಿನೆಂಟು ಭುಜಗಳಿರುವ ಈಕೆ ಬರುವ ಮಾರ್ಗದ ತುಂಬ ಬಿರಿದು ಭಾವನೆಗಳಿಂದ ಗಧೆ, ತ್ರಿಶೂಲ ,ಕತ್ತಿ , ಶಂಕ, ಅಭಯ ಹಸ್ತ, ಪಾಷ, ಕೇಟ, ಶರಾಸನ ಪಾತ್ರ, ಕಮಂಡಲಗಳನ್ನು ಧರಿಸಿರುವ ದೇವಿ ಸಿದ್ಧಿ ಧಾತ್ರಿ. ಮೂರು ಕಣ್ಣುಗಳಿಂದ ಕೂಡಿರುವ, ಕಿರೀಟದ ಮುಕುಟುದಲ್ಲಿ ಚಂದ್ರನನ್ನು ಧರಿಸಿ ಶೋಭಿಸುತ್ತಿರುವ ಈಕೆ, ಕೋಟಿ ಸೂರ್ಯನ ತೇಜಸ್ಸಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿ ಬೆಳಗುತ್ತಾಳೆ.
ಸಿಂಹವಾಹಿನಿಯಾಗಿರುವ ಸಿದ್ಧಿಧಾತ್ರಿ ಮಹಾಕಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ಆದಿಯಾಗಿ ಮಹಾದುರ್ಗೆಯ ರೂಪದಲ್ಲಿರುವ, ಮೂರು ಲೋಕಗಳಲ್ಲೂ ಶೋಭಿಸುತ್ತಿರುವ ಮಹಾದೇವಿ ಸಿದ್ಧಧಾತ್ರಿ.
ಕಮಲದ ಮೇಲೆ ಕುಳಿತಿರುವ ಈಕೆ ಶಸ್ತ್ರಗಳನ್ನು ಹಿಡಿದು ಸದಾ ಸಿದ್ಧವಿರುವ, ನಾಲ್ಕು ಕೈಗಳನ್ನು ಧರಿಸಿರುವ ಯಶಸ್ವಿನಿ. ಬಂಗಾರದ ವರ್ಣದಿಂದ ಕೂಡಿರುವ ತಾಯಿ, ನಿರ್ವಾಣ ಚಕ್ರ ಸ್ಥಿತಿಯಲ್ಲಿರುವ ದೇವಿ. ಶುಂಭಾಸುರನೆಂಬ ರಾಕ್ಷಸನ ಸಂಹರಿಸದವಳು ಈಕೆ ಎಂಬ ವರ್ಣನೆಗಳು ಇವಳದ್ದು.
ಇನ್ನು ಪಂಚಭಕ್ಷ, ಅತ್ತಿರಸ ಪಾಯಸ, ಕಜ್ಜಾಯವನ್ನು ಸಿದ್ಧಿಧಾತ್ರಿ ದೇವಿಗೆ ನೈವೇದ್ಯವಾಗಿ ನೀಡುವುದು ಅತಿ ಶ್ರೇಷ್ಠ ಎಂದು ಹೇಳಲಾಗುತ್ತದೆ.
-ಪ್ರಕಾಶ್ ಭಟ್, ಕುಲಪುರೋಹಿತರು, ಆಯನೂರು
ದೇವಿ: ಸಿದ್ಧಿ ಧಾತ್ರಿ
ಬಣ್ಣ : ಸ್ವರ್ಣ ವರ್ಣ
ದಿನಾಂಕ : 04/10/2022, ಮಂಗಳವಾರ