Advertisement
1988 ರ ರಸ್ತೆಯಲ್ಲಿ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ನ ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್ ಮತ್ತು ಸಂಜಯ್ ಕಿಶನ್ ಕೌಲ್ ಅವರ ದ್ವಿ ಸದಸ್ಯ ಪೀಠವು ಆದೇಶವನ್ನು ನೀಡಿದೆ. ಇದಕ್ಕೂ ಮುನ್ನ ನವಜೋತ್ ಸಿಂಗ್ ಸಿಧು ವಿರುದ್ಧದ ಹಲ್ಲೆ ಪ್ರಕರಣದಲ್ಲಿ ನೋಟಿಸ್ ವ್ಯಾಪ್ತಿಯನ್ನು ವಿಸ್ತರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿತ್ತು.
Related Articles
Advertisement
ಪ್ರಾಸಿಕ್ಯೂಷನ್ ಪ್ರಕರಣದ ಪ್ರಕಾರ, ಡಿಸೆಂಬರ್ 27, 1988 ರಂದು ಪಟಿಯಾಲಾದ ಶೆರನ್‌ವಾಲಾ ಗೇಟ್ ಕ್ರಾಸಿಂಗ್ ಬಳಿ ಗುರ್ನಾಮ್ ಸಿಂಗ್, ಜಸ್ವಿಂದರ್ ಸಿಂಗ್ ಮತ್ತು ಇನ್ನೊಬ್ಬ ವ್ಯಕ್ತಿ ಮದುವೆಗೆ ಹಣವನ್ನು ಪಡೆಯಲು ಬ್ಯಾಂಕ್‌ಗೆ ಹೋಗುತ್ತಿದ್ದಾಗ ನಿಲ್ಲಿಸಿದ್ದ ಜಿಪ್ಸಿಯಲ್ಲಿ ಸಿಧು ಮತ್ತು ಸಂಧು ಹಾಜರಿದ್ದರು.ಅವರು ಕ್ರಾಸಿಂಗ್‌ಗೆ ತಲುಪಿದಾಗ, ಮಾರುತಿ ಕಾರನ್ನು ಚಲಾಯಿಸುತ್ತಿದ್ದ ಗುರ್ನಾಮ್ ಸಿಂಗ್, ನಡುರಸ್ತೆಯಲ್ಲಿ ಜಿಪ್ಸಿಯನ್ನು ಕಂಡು ಅದರಲ್ಲಿದ್ದ ಸಿಧು ಮತ್ತು ಸಂಧು ಅವರನ್ನು ತಮ್ಮ ದಾರಿಗಾಗಿ ವಾಹನವನ್ನು ತೆಗೆಯಲು ಕೇಳಿದರು ಎಂದು ಆರೋಪಿಸಲಾಗಿದೆ. ಇದು ತೀವ್ರ ವಾಗ್ವಾದಕ್ಕೆ ಕಾರಣವಾಗಿ ಸಿಧು, ಸಿಂಗ್ ಅವರನ್ನು ಥಳಿಸಿ ನಂತರ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿತ್ತು.