ಕಾಪು: ತುಳುನಾಡಿನ ನಾಗಾರಾಧನೆ ಮತ್ತು ಭೂತಾರಾಧನೆಗಳು ಅವಿಭಕ್ತ ಕುಟುಂಬಗಳ ನಡುವಿನ ಭಾಂಧವ್ಯ ವೃದ್ಧಿಗೆ ಸಹಕಾರಿ ಯಾಗುತ್ತವೆ. ಸಮಷ್ಟಿಯ ಅಭಿವೃದ್ಧಿಗಾಗಿ ನಿರಂತರ ಧಾರ್ಮಿಕ ಆರಾಧನೆಗಳು ನಡೆಯುತ್ತಿರಬೇಕು. ಮಜೂರು ದೊಡ್ಡಮನೆ ಕುಟುಂಬಸ್ಥರು ನಡೆಸುವ ಕಾರ್ಯಕ್ರಮಗಳ ಮೂಲಕ ಕೌಟುಂಬಿಕ ಒಗ್ಗೂಡುವಿಕೆ ಆಗುತ್ತಿರುವುದು ಶ್ಲಾಘನೀಯ ಎಂದು ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ಮಜೂರು ದೊಡ್ಡಮನೆ ಫ್ಯಾಮಿಲಿ ಅಸೋಸಿಯೇಶನ್ ವತಿಯಿಂದ ನಡೆದ 6ನೇ ವಾರ್ಷಿಕ ಧಾರ್ಮಿಕ ಕಾರ್ಯಕ್ರಮ ಮತ್ತು ನಾಗಬ್ರಹ್ಮಮಂಡಲೋತ್ಸವದ ಪ್ರಯುಕ್ತ ಮೇ 1ರಂದು ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶ್ರೀಕಾಂತ್ ಶೆಟ್ಟಿ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡಿದರು. ಆಧುನಿಕ ಕಾಲಘಟ್ಟದಲ್ಲಿ ಅವಿಭಕ್ತ ಕುಟುಂಬ ಪದ್ಧತಿ ಮರೆಯಾಗುತ್ತಿದೆ. ಇದಕ್ಕೆ ನಾವೇ ಕಾರಣರಾಗುತ್ತಿದ್ದೇವೆ. ತುಳುನಾಡಿನ ಸಂಸ್ಕೃತಿ, ಸಂಸ್ಕಾರ ಮತ್ತು ಪದ್ಧತಿಗಳನ್ನು ಮಕ್ಕಳಿಗೆ ತಿಳಿಸಿ ಹೇಳುವುದು ಮಾತೆಯರ ಕರ್ತವ್ಯ ಎಂದರು.
ಪುಣೆಯ ಸಮಾಜ ಸೇವಕ ಕಟ್ಟಿಂಗೇರಿಮನೆ – ತಾಕxಬೈಲು ವಿಶ್ವನಾಥ ಡಿ. ಶೆಟ್ಟಿ ಮತ್ತು ದುಬಾೖಯಲ್ಲಿ ಜರಗಿದ ಅಂತಾರಾಷ್ಟ್ರೀಯ ನೃತ್ಯ ಸ್ಪರ್ಧೆಯ ಚಾಂಪಿಯನ್ ಪ್ರಶಸ್ತಿ ವಿಜೇತ ಮುಕ್ಕ ಐಂಗಳಮನೆ ಮಾ| ಹರ್ಷಲ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಮುಖ್ಯ ಅತಿಥಿ ಲೀಲಾಧರ ಶೆಟ್ಟಿ ಕರಂದಾಡಿ ಶುಭಾಶಂಸನೆಗೈದರು. ಮಜೂರು ದೊಡ್ಡಮನೆ ಫ್ಯಾಮಿಲಿ ವೆಲ್ಫೆàರ್ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಡಾ| ಎನ್. ನಾರಾಯಣ ಶೆಟ್ಟಿ ಅಡ್ವೆ ಚೀಂಕ್ರಿಗುತ್ತು, ಕೋಶಾಧಿ ಕಾರಿ ಸುಕೇಶ್ ಎಸ್. ಶೆಟ್ಟಿ ಬೋಳ ಕರಂಡೆಮನೆ, ಸಮಿತಿಯ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಜೂರು ದೊಡ್ಡಮನೆ ಫ್ಯಾಮಿಲಿ ವೆಲ್ಫೆàರ್ ಅಸೋಸಿಯೇಶನ್‌ನ ಅಧ್ಯಕ್ಷ ಸುಭಾಶ್ಚಂದ್ರ ಎಸ್. ಹೆಗ್ಡೆ ಕಟ್ಟಿಂಗೇರಿಮನೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಸುಧಾ ಹೆಗ್ಡೆ ಶಿರ್ವ, ಸತೀಶ್ ಶೆಟ್ಟಿ ಗುಡ್ಡೆಚ್ಚಿ ಸಮ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಭಾಸ್ಕರ ಡಿ. ಶೆಟ್ಟಿ ಪಡುಬೆಳ್ಳೆ ಬೈಲುಮನೆ ವಂದಿಸಿದರು. ಪ್ರೊ| ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.