Advertisement

ಆಗಸ್ಟ್ 18ಕ್ಕೆ ತೆರೆಗೆ ಬರುತ್ತಿದೆ ನವೀನ್ ಶಂಕರ್ ನಟನೆಯ ‘ಕ್ಷೇತ್ರಪತಿ’

05:19 PM Jul 06, 2023 | Team Udayavani |

“ಗುಲ್ಟು’ ಸಿನಿಮಾದ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ ನಟ ನವೀನ್‌ ಶಂಕರ್‌, ಈಗ “ಕ್ಷೇತ್ರಪತಿ’ ಸಿನಿಮಾದದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಇತ್ತೀಚೆಗೆ ಈ ಸಿನಿಮಾದ ಫ‌ಸ್ಟ್‌ಲುಕ್‌, ಟೀಸರ್‌ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ಈಗ ಈ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಆಗಸ್ಟ್‌ 18ರಂದು ಬಿಡುಗಡೆಯಾಗುತ್ತಿದೆ.

Advertisement

ಯುವ ಪ್ರತಿಭೆ ಶ್ರೀಕಾಂತ್‌ ಕಟಗಿ ಈ ಸಿನಿಮಾದ ಮೂಲಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಶ್ರೀಕಾಂತ್‌ ಕಟಗಿ, “ರೈತನಿಗೆ ಸಂಸðತದಲ್ಲಿ 21 ಹೆಸರುಗಳಿದೆ. ಅದರಲ್ಲಿ “ಕ್ಷೇತ್ರಪತಿ’ ಸಹ ಒಂದು. ರೈತನನ್ನು “ಕ್ಷೇತ್ರಪತಿ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಜೊತೆಗೆ ಇದೊಂದು ಅಪ್ಪ-ಮಗನ ಬಾಂಧವ್ಯ ಸಾರುವ ಸಿನಿಮಾವೂ ಹೌದು. ಗದಗಿನ ತಿಮ್ಮಾಪುರ ಎಂಬ ಊರಿನಲ್ಲೇ ಸಿನಿಮಾದ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ’ ಎಂದು ವಿವರಣೆ ನೀಡಿದರು.

ಚಿತ್ರದ ಪಾತ್ರದ ಬಗ್ಗೆ ಮಾತನಾಡಿದ ನವೀನ್‌ ಶಂಕರ್‌, “ಇದರಲ್ಲಿ ನಾನು ಬಸವ ಎಂಬ ಇಂಜಿನಿಯರಿಂಗ್‌ ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ತನ್ನಿಷ್ಟಕ್ಕೆ ತಾನು ಇರುವಂತಹ ಬಸವನ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಯೊಂದರ ಮೂಲಕ ಆತ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಈ ಬಸವ ನನ್ನೊಳಗೆ, ನಿಮ್ಮೊಳಗೆ ಇದ್ದಾನೆ. ಕೆಲವರಿಗೆ ಅವನು ಜೀವಂತ. ಇನ್ನೂ ಕೆಲವರಿಗೆ ಆತ ಇಲ್ಲ. ಸಿನಿಮಾ ನೋಡಿದ ಮೇಲೆ ಅದರ ಬಗ್ಗೆ ತಿಳಿಯುತ್ತದೆ’ ಎನ್ನುತ್ತಾರೆ.

“ಕ್ಷೇತ್ರಪತಿ’ ಸಿನಿಮಾದ ಹಾಡುಗಳಿಗೆ ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ. ಸದ್ಯ ಫ‌ಸ್ಟ್‌ಲುಕ್‌ ಪೋಸ್ಟರ್‌, ಟೀಸರ್‌ ಮೂಲಕ ಗಮನ ಸೆಳೆದಿರುವ ಈ ಚಿತ್ರದ ಮೇಲೆ ಸ್ಯಾಂಡಲ್‌ವುಡ್‌ ಒಂದು ಕಣ್ಣಿಟ್ಟಿರೋದು ಸುಳ್ಳಲ್ಲ.

Advertisement

Udayavani is now on Telegram. Click here to join our channel and stay updated with the latest news.

Next