Advertisement

ಉಕ್ರೇನಿನಿಂದ ಹುಟ್ಟಿದೂರಿಗೆ ಮರಳಿದ ನವೀನ್ ಕುಮಾರ್ : ಮನೆಗೆ ಶಾಸಕ ,ತಹಸೀಲ್ದಾರ್ ಭೇಟಿ

11:51 AM Mar 08, 2022 | Team Udayavani |

ಕುರುಗೋಡು: ಉಕ್ರೇನ್ ಲ್ಲಿ ಇದ್ದಾಗ ಬಾಂಬ್ ಸ್ಫೋಟದ ಸದ್ದು,ಕೇಳಿ ಆತಂಕ ಉಂಟಾಗುತಿತ್ತು, ಬಂಕರ್ ನಲ್ಲಿ ಕಾಲ ಕಳೆಯುತ್ತಿರುವುದರಿಂದ ಸರಿಯಾಗಿ ಊಟ ಮಾಡುತಿದ್ದೀಲ್ಲ.ಭಾರತ ಪ್ರದೇಶಕ್ಕೆ ಬಂದ ನಂತರ ತುಂಬಾ ಊಟ ಮಾಡಿದೆ.

Advertisement

ಇದು ಕುರುಗೋಡು ತಾಲೂಕಿನ ನವೀನ್ ಕುಮಾರ್ ಅವರ ಮಾತುಗಳಿವು,

ಇವರ ತಂದೆ ಜಗದೀಶ್ ಕಿರಾಣಿ ಸ್ಟೋರ್ ನಡೆಸುತ್ತಾರೆ. ತಾಯಿ ಸೈಲಾಜ್ ಮನೆಯ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಮಗ ಓದಿ ವೈದ್ಯನಾಗಬೇಕೆಂಬ ಕನಸಿನೊಂದಿದೆ ಪೋಷಕರು ಉಕ್ರೇನಿಗೆ ಕಳಿಸಿದ್ದರು.

ಉಕ್ರೇನಿನ ಯೂನಿವರ್ಸಟಿ ಆಪ್ ಝುಕರೂಜಿಯದಲ್ಲಿ ಎಂಬಿಬಿಎಸ್ ಮೊದಲನೇ ವರ್ಷ ಓದುತ್ತಿದ್ದ, ಮೂರೂವರಿ ತಿಂಗಳು ಉಕ್ರೇನಿ ನಲ್ಲಿ ಇದ್ದ ಅವರು ಯುದ್ಧಗ್ರಸ್ಥ ಉಕ್ರೆನಿನಿಂದ ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ.

ನವೀನ್ ಕುಮಾರ್ ಮನೆಗೆ ಬಂದ ವಿಷಯ ಕೇಳಿ ತಹಸೀಲ್ದಾರ್ ರಾಘವೇಂದ್ರ ರಾವ್, ಶಾಸಕ ಗಣೇಶ್, ಸಂಬಂದಿಕರು ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.

Advertisement

ನಾವು ಓದುತಿದ್ದ ಕಾಲೇಜು ನಿಂದ ಸ್ವಲ್ಪ ದೂರದಲ್ಲಿ ಬಾಂಬ್ ಸ್ಫೋಟದ ಸದ್ದು ಕೇಳಿ ಆತಂಕವಾಗಿತ್ತು, ಅಲ್ಲಿಂದ ನಮ್ಮನ್ನು ಹಾಸ್ಟೆಲ್ ಗೆ ಶಿಫ್ಟ್ ಮಾಡಿದರು. ಬಳಿಕ ಸ್ವಯಂ ಸೇವಕರುಬಂದು ಆಹಾರ, ನೀರು ಒದಗಿಸುತಿದ್ದರು.ಆದಷ್ಟು ಕಡಿಮೆ ತಿಂದು ರೇಷನ್ ಉಳಿಸಿಕೊಳ್ಳಬೇಕು ಎಂದು ಹೇಳುತ್ತಿದ್ದರು ಹೀಗಾಗಿ ಹೊಟ್ಟೆ ತುಂಬಾ ಊಟ ಮಾಡಲು ಆಗುತ್ತಿರಲಿಲ್ಲ ಎಂದು ವಿದ್ಯಾರ್ಥಿ ನವೀನ್ ಕುಮಾರ್ ತಿಳಿಸಿದರು.

ರಾಜ್ಯದ ವಿದ್ಯಾರ್ಥಿನಿ ನವೀನ್ ಸಾವನ್ನಪ್ಪಿರುವ ವಿಷಯ ಗೊತ್ತಾದಾಗ ನಾವು ಭಾರತದ ಕಡೆಗೆ ಬರುತ್ತಿದೆವು.ವಿಷಯ ತಿಳಿದು ಬಹಳ ದುಖ್ಖ ವಾಯಿತು.ನಾವು ಸುರಕ್ಷಿತವಾಗಿ ತಲಪುವ ಭರವಸೆ ಇದ್ದರು ನಮ್ಮ ಪೋಷಕರು ಆತಂಕದಲ್ಲಿದ್ದರು.ಮಗನನ್ನು ಕಳೆದುಕೊಂಡಿರುವ ಅವರ ಪೋಷಕರಿಗೆ ಎಷ್ಟು ದುಃಖ್ಖ ಆಗಿರಬಹುದು. ಹಾರ್ಕಿವ್ ನಲ್ಲಿ ತುಂಬಾ ಯುದ್ಧ ನಡೆಯುತ್ತಿತ್ತು.ನವೀನ್ ಹೊರಗೆ ಬರಬಾರದಿತ್ತು, ಆಹಾರ ಕೊರತೆ ಇತ್ತು ಆದರೂ ತಾಳ್ಮೆ ವಹಿಸಬೇಕಿತ್ತು.ನಾವು ಭಾರತಕ್ಕೆ ಸುರಕ್ಷಿತವಾಗಿ ಮರಳಿ ಬರಬೇಕಾದರೆ ಜಿಲ್ಲಾಡಳಿತ ಹಾಗೂ ಮೀಡಿಯಾ ಪಾತ್ರ ಬಹಳ ಇದೆ ಎಂದು ಸ್ಮರಿಸಿದರು.

ನಮ್ಮ ದೇಶದಲ್ಲಿ ಎಂಬಿಬಿಎಸ್ ಓದಬೇಕಾದರೆ ಕೋಟಿ ಗಟ್ಟಲೆ ಶುಲ್ಕ ಇದೆ ಅಷ್ಟೊಂದು ಶುಲ್ಕ ಇದ್ದಾರೆ ಬಡ, ಮಧ್ಯಮ ವರ್ಗದವರ ಮಕ್ಕಳು ಓದುವುದಾದರು ಹೇಗೆ ಎಂದು ನವೀನ್ ಕುಮಾರ್ ಪ್ರೆಶ್ನೆಸಿದರು.

ನಿಟ್ ಪರೀಕ್ಷೆ ಬರೆದರೂ ಸೀಟು ಸಿಗುತ್ತಿಲ್ಲ. ಸ್ಪರ್ಧೆ ಜಾಸ್ತಿ ಆಗಿದೆ.ಮ್ಯಾನೇಜ್ ಮೆಂಟ್ ಕೋಟಾದಲ್ಲಿ ಶುಲ್ಕ ಕಡಿತಗೊಳಿಸಿ, ಓದಲು ಅವಕಾಶ ಕಲ್ಪಿಸಬೇಕು. ನಮ್ಮ ದೇಶದಲ್ಲಿ ಕಡಿಮೆ ಶುಲ್ಕ ದಲ್ಲಿ ಶಿಕ್ಷಣ ಕೊಟ್ಟರೆ ಯಾರು ಕೂಡ ಹೊರ ದೇಶಗಳಿಗೆ ಹೋಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next