Advertisement

ಉದ್ದೀಪನ ಸೇವನೆ: ಏಶ್ಯಾಡ್‌ನಿಂದ ನವೀನ್‌ ಹೊರಕ್ಕೆ ?

11:17 AM Aug 03, 2018 | |

ಹೊಸದಿಲ್ಲಿ: ಏಶ್ಯನ್‌ ಗೇಮ್ಸ್‌ ಆರಂಭಕ್ಕೂ ಮೊದಲೇ ಭಾರತಕ್ಕೆ ಉದ್ದೀಪನ ಬರೆ ಬಿದ್ದಿದೆ. ಏಶ್ಯಾಡ್‌ನ‌ಲ್ಲಿ ಪಾಲ್ಗೊಳ್ಳಬೇಕಿದ್ದ ಸ್ಟೀಪಲ್‌ಚೇಸ್‌ ರನ್ನರ್‌ ನವೀನ್‌ ಕುಮಾರ್‌ ದಾಗರ್‌ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇದರಿಂದಾಗಿ ಕೂಟದಿಂದ ಹೊರಬೀಳುವ ಆತಂಕಕ್ಕೆ ಸಿಲುಕಿದ್ದಾರೆ. ಗುವಾಹಟಿಯಲ್ಲಿ ನಡೆದಿದ್ದ ಅಂತರ್‌ ರಾಜ್ಯ ಆ್ಯತ್ಲೆಟಿಕ್ಸ್‌ ಕೂಟದ ವೇಳೆ ನವೀನ್‌ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರು ನಿಷೇಧಿತ ಮೆಲ್ಡೋನಿಯಂ ಮದ್ದನ್ನು ಸೇವನೆ ಮಾಡಿರುವುದು ಪರೀಕ್ಷೆಯಿಂದ ಬೆಳಕಿಗೆ ಬಂದಿದೆ. ಮುಂದೆ “ಬಿ’ ಸ್ಯಾಂಪಲ್‌ ಪರೀಕ್ಷೆ ನಡೆಯಲಿದ್ದು ಅಲ್ಲಿಯೂ ದೃಢಪಟ್ಟರೆ ಅವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next