Advertisement

ನವಯುಗ ಕಂಪೆನಿ ಕಚೇರಿಗೆ ಪಡುಬಿದ್ರಿ ಗ್ರಾ. ಪಂ. ಸದಸ್ಯರ ಮುತ್ತಿಗೆ

07:31 PM Jun 10, 2019 | Sriram |

ಪಡುಬಿದ್ರಿ: ಕಳೆದ 5 ವರ್ಷಗಳಿಂದ ಪಡುಬಿದ್ರಿ ಗ್ರಾ. ಪಂ. ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಯನ್ನುಪೂರ್ಣಗೊಳಿಸದ ನವಯುಗ ಕಂಪೆನಿಯ ಸ್ಥಳೀಯ ಕಚೇರಿಗೆ ಮುತ್ತಿಗೆ ಹಾಕಿದ ಪಡುಬಿದ್ರಿ ಗ್ರಾ. ಪಂ. ಸದಸ್ಯರು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿದರು.

Advertisement

ಪಡುಬಿದ್ರಿ ಗ್ರಾಪಂ ಸದಸ್ಯರು ಕಳೆದ ಮೂರು ತಿಂಗಳ ಚುನಾವಣಾ ನೀತಿ ಸಂಹಿತೆಯ ಬಳಿಕ ಸೋಮವಾರ ಕರೆಯಲಾಗಿದ್ದ ಪಡುಬಿದ್ರಿ ಗ್ರಾ. ಪಂ. ನ ಸಾಮಾನ್ಯ ಸಭೆಯಲ್ಲಿ ಗ್ರಾಮದಲ್ಲಿನ ಚರಂಡಿಗಳ ಸಮಸ್ಯೆ ಸೇರಿದಂತೆ ಹೆದ್ದಾರಿ ಅಪೂರ್ಣ ಕಾಮಗಾರಿಯ ಬಗ್ಗೆ ಸಾರ್ವಜನಿಕರಿಂದ ಬಂದಿದ್ದ ಹಲವಾರು ಅರ್ಜಿಗಳ ಕುರಿತಾಗಿ ನಡೆದಿದ್ದ ಕಾವೇರಿದ ಚರ್ಚೆ ಬಳಿಕ ಈ ಕ್ರಮ ಕೈಗೊಂಡಿತ್ತು.

ಮಳೆಗಾಲದಲ್ಲಿ ಅನಾಹುತ ಸಂಭವಿಸುವ ಹಿನ್ನಲೆಯಲ್ಲಿ ಎಚ್ಚೆತ್ತ ಗ್ರಾ. ಪಂ. ಅಧ್ಯಕ್ಷೆ ದಮಯಂತಿ ಅಮೀನ್‌, ಉಪಾಧ್ಯಕ್ಷ ವೈ. ಸುಕುಮಾರ್‌ ಸಹಿತ ಸದಸ್ಯೆರೆಲ್ಲರೂ ಪಡುಬಿದ್ರಿ ಪಂಪ್‌ಹೌಸ್‌ ಬಳಿಯಿರುವ ಕಂಪೆನಿ ಕಚೇರಿಗೆ ನೇರವಾಗಿ ಆಗಮಿಸಿ ಹೆದ್ದಾರಿ ಕಾಮಗಾರಿಯ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದರು. ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಕಾಮಗಾರಿಗೆ ಸಂಬಂಧಿಸಿದ ಸಿಬಂದಿಯನ್ನು ಸ್ಥಳಕ್ಕೆ ಆಗಮಿಸುವಂತೆ ತಾಕೀತು ಮಾಡಿದರು. ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿಯೂ ಕೆಲ ಸದಸ್ಯರು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಆಗಮಿಸಿದ ಸೈಟ್‌ ಎಂಜಿನಿಯರ್‌ ದುರ್ಗಾ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ ಸದಸ್ಯರು. ಬಾಕಿಯಿರುವ ಕಾಮಗಾರಿಗಳಾದ ಎರ್ಮಾಳು ಕಲ್ಸಂಕ ಬಳಿ ಸೇತುವೆಗೆ ಅಡ್ಡಲಾಗಿ ಮಣು ಹಾಕಿ ನಿರ್ಮಿಸಿದ ತಾತ್ಕಾಲಿಕ ರಸ್ತೆ ತೆರವು, ನಡಾÕಲು ಗ್ರಾಮದ ಕೆಳಗಿನ ಪೇಟೆಯ ಮಳೆ ನೀರು ಹರಿಯುವ ಚರಂಡಿ, ಪೇಟೆಯಲ್ಲಿನ ಇಕ್ಕೆಲಗಳ ಸರ್ವೀಸ್‌ ರಸ್ತೆ ಹಾಗೂ ಅರ್ಧಕ್ಕೆ ನಿಲ್ಲಿಸಿರುವ ಒಳಚರಂಡಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿದರು. ಅಪೂರ್ಣವಾಗಿರುವ ಚರಂಡಿ ಕಾಮಗಾರಿಯನ್ನು ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ನವಯುಗ ಸಿಬಂದಿ ಈ ಸಂದರ್ಭದಲ್ಲಿ ತಿಳಿಸಿದರು.

ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ ಸಹಿತ ಗ್ರಾ. ಪಂ. ಸದಸ್ಯರೆಲ್ಲರೂ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next