Advertisement

ದ್ವಿತೀಯ/ಬಿದಿಗೆ ನವರಾತ್ರಿ ಎರಡನೇ ದಿನ: ಬ್ರಹ್ಮಚಾರಿಣಿ/ದೇವಜಾತಾ ದುರ್ಗಿ

11:56 PM Oct 07, 2021 | Team Udayavani |

ರೂಪ: ಈ ದೇವಿ ಬಿಳಿ ವರ್ಣದವಳಾಗಿದ್ದು ಹಂಸ ವಾಹನಳಾಗಿರುತ್ತಾಳೆ.

Advertisement

ಬಿಳಿ ಹೂವಿನ ಮಾಲೆ ಧರಿಸುವ ದೇವಿ ನಾಲ್ಕು ಕೈ ಉಳ್ಳವಳು. ಒಂದು

ಕೈಯಲ್ಲಿ ಸಟ್ಟುಗ, ಇನ್ನೊಂದರಲ್ಲಿ ಸೌಟು ಹಿಡಿದಿದ್ದರೆ, ಮತ್ತೆರೆಡು ಕೈಗಳಲ್ಲಿ ಕಮಂಡಲ ಮತ್ತು ಜಪಸರ ಹಿಡಿದಿರುತ್ತಾಳೆ.

ಬಣ್ಣ: ಬಿಳಿ ವರ್ಣ

ಅಲಂಕಾರ: ಬಿಳಿ ಬಣ್ಣದ ಸೀರೆಯಿಂದ ಅಲಂಕರಿಸಬೇಕು.

Advertisement

ಪೂಜಾಫ‌ಲ: ಬ್ರಹ್ಮಚಾರಿಣಿಯನ್ನು ಪೂಜಿಸುವುದರಿಂದ ಸಾತ್ವಿಕ ಶಕ್ತಿಯು ಜಾಗೃತವಾಗಿ, ತಾಮಸ ಶಕ್ತಿಯನ್ನು ನಿಷ್ಕ್ರಿಯಗೊಳಿಸುತ್ತದೆ, ಆತೊ¾àನ್ನತಿಯಾಗುತ್ತದೆ (ಅಂತಃಶಕ್ತಿ ಜಾಗೃತಿ). ಪ್ರಕೃತಿಯನ್ನು ಆರಾಧಿಸಿದಂತಾಗುತ್ತದೆ.

ಪೂಜಾ ವಿಧಾನ: ದೇವಿಯನ್ನು ಯಥಾಕ್ರಮದಲ್ಲಿ ಆವಾಹಿಸಿ, ಷೋಡ ಶೋಪಚಾರ ಪೂಜೆ ಮಾಡಬೇಕು. ಪತ್ರ, ಪುಷ್ಪ, ಅಂಗ, ಆವರಣ, ಅಷ್ಟೋತ್ತರ ಶತನಾಮ, ಸಹಸ್ರನಾಮ, ಇತ್ಯಾದಿಗಳಿಂದ ಪೂಜೆ ಸಲ್ಲಿಸಬೇಕು.

ಜಪ: ದೇವಜಾತಾ ದುರ್ಗಾಯೈ ನಮಃ

ನೈವೇದ್ಯ: ಹಣ್ಣುಕಾಯಿ, ಅನ್ನ, ಹಾಲು, ಮೊಸರು,

ಕಜ್ಜಾಯವನ್ನು ನೈವೇದ್ಯವಾಗಿ ಅರ್ಪಿಸಬೇಕು.

ಪುಷ್ಟಗಳ ಅರ್ಪಣೆ: ಸೇವಂತಿಗೆ, ಮಲ್ಲಿಗೆ, ಕಮಲ, ಕೇದಿಗೆ, ಸಿಂಗಾರ, ಇತ್ಯಾದಿಗಳನ್ನು ಬಳಸಬೇಕು.

 

-ಪ್ರಕಾಶ್‌ ಭಟ್ಟ, ವೇದಬ್ರಹ್ಮ, ಆಯನೂರು, ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next