Advertisement

ಕೋಳೂರ ತಾಂಡಾದಲ್ಲಿ ನವರಾತ್ರಿ ಪೂಜೆ

04:09 PM Oct 27, 2020 | Suhan S |

ಮುದ್ದೇಬಿಹಾಳ: ಬಂಜಾರಾ (ಲಂಬಾಣಿ) ಸಮಾಜ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಹೊಂದಿದ್ದು ಇವರ ಉಡುಗೆ, ತೊಡುಗೆ, ಆಚರಣೆಯಲ್ಲಿ ಹಿಂದೂ ಸಂಸ್ಕೃತಿಎದ್ದು ಕಾಣುತ್ತದೆ ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ಕೋಳೂರು ತಾಂಡಾದಲ್ಲಿ ಮುದ್ದೇಬಿಹಾಳದ ಎಸ್‌ ಎಸ್‌ವಿ ಸಂಘದ ಅಡಿಯಲ್ಲಿ ಏರ್ಪಡಿಸಿದ್ದ ನವರಾತ್ರಿ ಪೂಜಾ ಸಮಾರಂಭದಲ್ಲಿ ಗ್ರಾಮಸ್ಥರಿಂದ ಸನ್ಮಾನಸ್ವೀಕರಿಸಿ ಅವರು ಮಾತನಾಡಿದರು.

ಬಂಜಾರ ಸಮಾಜದ ಜನ ಶ್ರಮಜೀವಿಗಳು. ಬೇರೆಯವರ ತಂಟೆಗೆ ಹೋಗುವುದಿಲ್ಲ. ಈ ಸಮಾಜದವರಿಗೆ ಭೂಮಿ ಕಡಿಮೆ ಇರುವುದರಿಂದ ವರ್ಷದ ಆರು ತಿಂಗಳು ದುಡಿಯಲು ವಲಸೆಹೋಗುತ್ತಾರೆ. ಆದರೆ ಕೊರೊನಾದಿಂದಾಗಿ ಈ ವರ್ಷ ಬಹಳ ಕಷ್ಟ ಅನುಭವಿಸಿದ್ದಾರೆ. ಕೊರೊನಾ, ಪ್ರಕೃತಿ ವಿಕೋಪದ ಹೊಡೆತದ ನಡುವೆಯೂ ಬದುಕನ್ನು ಸವಾಲಾಗಿ ಸ್ವೀಕರಿಸಿ ಜೀವಿಸುತ್ತಿದ್ದಾರೆ ಎಂದರು.

ಈ ಮತಕ್ಷೇತ್ರದಲ್ಲಿ ಮುಂದಿನ 10 ವರ್ಷ ದಲಿತ, ಬಂಜಾರಾ ಸೇರಿ ಹಿಂದುಳಿದ ಸಮುದಾಯದ ಯುವಕರಿಗೆ ಈ ತಾಲೂಕಲ್ಲೇ ಉದ್ಯೋಗ ಸೃಷ್ಟಿಸುವುದುನನ್ನ ಕನಸು. ಹಂತ ಹಂತವಾಗಿ ಉದ್ಯೋಗ ಸೃಷ್ಟಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಸರ್ಕಾರದಲ್ಲಿ ಬಹಳಷ್ಟು ಯೋಜನೆಗಳಿವೆ. ಅವುಗಳ ಸದುಪಯೋಗ ಆಗಬೇಕು ಎಂದರು.

ಜಿಪಂ ಮಾಜಿ ಸದಸ್ಯ ಚಿದಾನಂದ ಸೀತಿಮನಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಸ್‌ವಿ ಸಂಘದ ಕಾರ್ಯದರ್ಶಿ ರವಿ ನಾಯಕ, ತಾಪಂ ಸದಸ್ಯ ಪ್ರೇಮಸಿಂಗ್‌ ಚವ್ಹಾಣ, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ, ದಿ ಕರ್ನಾಟಕ ಕೋ ಆಪ್‌ ಬ್ಯಾಂಕ್‌ ನಿರ್ದೇಶಕ ಶರಣು ಬೂದಿಹಾಳಮಠ, ಆರ್‌ಟಿಒ ಜಯರಾಮ ನಾಯಕ, ಡಿಎಸ್ಸೆಸ್‌ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ. ಮುದೂರ, ಬಿಜೆಪಿ ಧುರೀಣ ತುಳಜಾರಾಮ ಚವ್ಹಾಣ ವೇದಿಕೆಯಲ್ಲಿದ್ದರು.

Advertisement

ಪಿಎಸೈ ಮಲ್ಲಪ್ಪ ಮಡ್ಡಿ, ಪ್ರಮುಖರಾದ ಅಶೋಕ ಇರಕಲ್‌, ಸುಭಾಷ್‌ ಚವ್ಹಾಣ, ಸಿ.ಕೆ. ಚವ್ಹಾಣ, ಭೀಮಸಿಂಗ್‌ ಚವ್ಹಾಣ, ಸಂತೋಷ ಚವ್ಹಾಣ, ಪ್ರವೀಣ ಸೀತಿಮನಿ, ಸತೀಶ ರಾಠೊಡ, ಸಂತೋಷ ಸೀತಿಮನಿ, ಪ್ರತಾಪ ಸೀತಿಮನಿ, ಅನಿಲ ಜಾಧವ, ಅನಿಲ ರಾಠೊಡ, ರಾಮಸ್ವಾಮಿ ಮೇಲಿನಮನಿ, ವಿಜಯ ಮೇಲಿನಮನಿ, ಪ್ರಕಾಶ ಚವ್ಹಾಣ, ವಿಕಾಸ್‌ ಚವ್ಹಾಣ, ಜಗದೀಶ ಚವ್ಹಾಣ, ದಿಲೀಪ ರಾಠೊಡ, ಆಕಾಶ ಚವ್ಹಾಣ, ಸಚಿನರಾಠೊಡ, ಪ್ರಶಾಂತ ರಾಠೊಡ, ಬಾಲಾಜಿ ನಾಯಕ, ಬಲಭೀಮ ನಾಯಕಮಕ್ಕಳ ಇದ್ದರು.

ಎಸ್‌ಎಸ್‌ ಪಿಯು ಕಾಲೇಜು ಪ್ರಾಂಶುಪಾಲ ಬಿ.ಜಿ. ಬಿರಾದಾರ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಶಾಸಕರನ್ನು ಆರತಿ ಬೆಳಗುವ ಮೂಲಕ ಸ್ವಾಗತಿಸಿ ತಿಲಕ ಇರಿಸಲಾಯಿತು. ಶಾಸಕರು ದುರ್ಗಾದೇವಿ ಹಾಗೂ ಸೇವಾಲಾಲ್‌ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪೂಜಾರಿಗಳಾದ ರಮೇಶ ಮಹಾರಾಜರು, ಸುಭಾಷ್‌ ಪೂಜೆ ನಡೆಸಿಕೊಟ್ಟರು. ಕಾರ್ಯಕ್ರಮದ ನಂತರ ಕಿರುತೆರೆ ಕಲಾವಿದರಾದ ಗೋಪಾಲ ಹೂಗಾರ, ಗೋಪಾಲ ಇಂಚಗೇರಿ ನೇತೃತ್ವದ ಕಲಾ ಸಿಂಚನಾ ಬಳಗದಿಂದ ಕೋವಿಡ್ ಜಾಗೃತಿ ಸಂಗೀತ ರಸಮಂಜರಿ ನಡೆಯಿತು.

ತಾಲೂಕಿನಲ್ಲಿರುವ ಸವುಳು ಜವುಳು ಸಮಸ್ಯೆಗೆ ಅಂತ್ಯ ಹಾಡಲು ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆ ಜಾರಿಗೆ ಸಿದ್ಧತೆ ನಡೆಸಿದ್ದೇನೆ. ಈ ಯೋಜನೆ ಅಡಿ ಒಂದು ಎಕರೆಯಲ್ಲಿ ಮೀನುಗಾರಿಕೆಯಿಂದ ವರ್ಷಕ್ಕೆ 4 ಲಕ್ಷ ರೂ. ಆದಾಯ ತೆಗೆಯಬಹುದು. ನಿರುದ್ಯೋಗಿಗಳಿಗೆ ಇದು ವರದಾನವಾಗಿದೆ. -ಎ.ಎಸ್‌. ಪಾಟೀಲ ನಡಹಳ್ಳಿ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next