Advertisement

ಭಕ್ತಿ,ಶ್ರದ್ಧೆಯಿಂದ “ನವರಾತ್ರಿ’ಆರಂಭ

10:52 PM Sep 29, 2019 | Sriram |

ಕಾಸರಗೋಡು: ನಾಡಹಬ್ಬ “ನವರಾತ್ರಿ’ ಮಹೋತ್ಸವ ನಾಡಿನಾದ್ಯಂತ ಭಕ್ತಿ, ಶ್ರದ್ಧೆಯಿಂದ ರವಿವಾರ ಆರಂಭಗೊಂಡಿತು. ಅ.8 ರ ವರೆಗೆ ಶಕ್ತಿಯ ಸಂಕೇತವಾಗಿ ದೈವೀ ಶಕ್ತಿಯನ್ನು ಆರಾಧಿಸುವ ದಿನ. ನಾಡಿನಾದ್ಯಂತ ದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ವಿವಿಧ ವಿಶೇಷ ಪೂಜೆ, ಪುನಸ್ಕಾರಗಳು ಆರಂಭಗೊಂಡಿತು. ಭಕ್ತಾದಿಗಳು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಹುತೇಕ ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೆ ಭಕ್ತರ ಸರದಿ ಕಂಡು ಬಂತು.

Advertisement

ಕಾಸರಗೋಡಿನ ಇತಿಹಾಸ ಪ್ರಸಿದ್ಧ ದೇವಸ್ಥಾನವಾದ ಕೊರಕೋಡು ಆರ್ಯ ಕಾತ್ಯಾಯಿನಿ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಆರಂಭಗೊಂಡಿತು. ಬೆಳಗ್ಗೆ ಭಂಡಾರ ಮನೆಯಿಂದ ಭಂಡಾರ ಆಗಮಿಸಿತು. ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಶುದ್ಧಿಕಲಶ, ಚಂಡಿಕಾ ಹೋಮ, ಮಹಾಪೂಜೆ, ದರ್ಶನ, ರಾತ್ರಿ ಪೂಜೆ ನಡೆಯಿತು.

ಕೂಡ್ಲು ಕುತ್ಯಾಳ ಗೋಪಾಲಕೃಷ್ಣ ದೇವಸ್ಥಾನದ ಅನ್ನಪೂರ್ಣೇಶ್ವರೀ ದೇವಿಯ ಸನ್ನಿಧಿ, ಮುಳಿಯಾರಿನ ಕುಂಜರಕಾನ ದುರ್ಗಾಪರಮೇಶ್ವರೀ ದೇವಸ್ಥಾನ, ನಗರದ ಶಾಂತದುರ್ಗಾಂಬಾ ರಸ್ತೆಯ ಅನ್ನಪೂರ್ಣೇಶ್ವರಿ ದೇವಸ್ಥಾನ, ತೆಕ್ಕಿಲ್‌ ತೈರೆ ದುರ್ಗಾ ಪರಮೇಶ್ವರೀ ದೇವಸ್ಥಾನ, ಬೇಡಡ್ಕ ಮೇಲೋತುಂಕಡವು ಅಡ್ಕತ್‌ ಭಗವತಿ ದೇವಸ್ಥಾನ, ಕುಂಡಂಗುಳಿ ಚೊಟ್ಟೆ ದುರ್ಗಾ ದೇವಿ ದೇವರಮನೆ, ಕಳನಾಡು ಕಟ್ಟೆಕಾಲು ದುರ್ಗಾಪರಮೇಶ್ವರೀ ಕಾಲಭೈರವ ದೇವಸ್ಥಾನ, ಕುಳೂರು ಸುಣ್ಣಾರ ಬೀಡು ಆದಿಶಕ್ತಿ ಗೋಪಾಲಕೃಷ್ಣ ದೇವಸ್ಥಾನ, ಚಿತ್ತಾರಿ ನಾಯಕರ ಹಿತ್ತಿಲು ಮಲ್ಲಿಕಾರ್ಜುನ ದೇವಸ್ಥಾನ, ಕಾಳ್ಯಂಗಾಡು ಜಗದಂಬಾ ದೇವಸ್ಥಾನ, ಬಾರಿಕ್ಕಾಡು ಮಲ್ಲಿಕಾರ್ಜುನ ದೇವಸ್ಥಾನ, ಮಧೂರು ಕಾಳೀ ಸಹಿತ ಭುವನೇಶ್ವರೀ ಕ್ಷೇತ್ರ, ಕರಾಮದಾಸನಗರದ ಚಾಮುಂಡೇಶ್ವರಿ ಕಾಲಭೈರವ ದೇವಸ್ಥಾನ, ಕೊಲ್ಲಂಗಾನ ಗಾಂಧಿನಗರದ ಶಾರದಾ ಭಜನಾ ಮಂದಿರ, ಬಾಯಾರು ಪಂಚಲಿಂಗೇಶ್ವರ ದೇವಸ್ಥಾನ, ಬೇಕಲ ಬಿಆರ್‌ಡಿಸಿ ರಸ್ತೆ ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನ, ಅಣಂಗೂರಿನ ಶಾರದಾಂಬಾ ಭಜನಾ ಮಂದಿರ, ಕೊರುವೈಲು ದುರ್ಗಾಪರಮೇಶ್ವರೀ ದೇವಸ್ಥಾನ, ಪಿಲಿಕುಂಜೆ ಜಗದಂಬಾ ದೇವಿ ಕ್ಷೇತ್ರ, ತೆರುವತ್‌ನ ಚೀರುಂಬಾ ಭಗವತೀ ಕ್ಷೇತ್ರ, ನಾರಾಯಣಮಂಗಲದ ಚೀರುಂಬಾ ಭಗವತೀ ಕ್ಷೇತ್ರ, ಕೂಡ್ಲು ರಾಮದಾಸನಗರದ ಕೆಳದಿ ರಾಜರ ಅಶ್ವಾರೂಢ ಪಾರ್ವತಿ ಸನ್ನಿಧಿ, ಕಾಳ್ಯಂಗಾಡು ಮೂಕಾಂಬಿಕಾ ದೇವಸ್ಥಾನ, ಮೀಪುಗುರಿ ದುರ್ಗಾಪರಮೇಶ್ವರೀ ದೇವಸ್ಥಾನ, ಕೊಲ್ಲಂಗಾನ ು ದುರ್ಗಾಪರಮೇಶ್ವರಿ ಸನ್ನಿಧಿ, ದೇಳಿ ತಾಯತೊಟ್ಟಿಯ ದುರ್ಗಾಪರಮೇಶ್ವರಿ ದೇವಸ್ಥಾನ, ಕಲ್ಲುಗದ್ದೆ ದುರ್ಗಾಂಬಿಕಾ ದೇವಸ್ಥಾನ, ಕೂಡ್ಲು ವಿಷ್ಣುಮಂಗಲ ದೇವಸ್ಥಾನ, ಮಲ್ಲ ದುರ್ಗಾಪರಮೇಶ್ವರಿ, ಅಗಲ್ಪಾಡಿ ದುರ್ಗಪರಮೇಶ್ವರಿ, ಅವಳ ದುರ್ಗಾಪರಮೇಶ್ವರಿ ದೇವಸ್ಥಾನ, ಪೇಟೆ ವೆಂಕಟರಮಣ ದೇವಸ್ಥಾನ, ಹೊನ್ನೆಮೂಲೆ ಮಹಮ್ಮಾಯಿ ದೇವಸ್ಥಾನ, ಪಾಂಗೋಡು ದುರ್ಗಾಪರಮೇಶ್ವರೀ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ನವರಾತ್ರಿ ಆರಂಭಗೊಂಡಿತು.

ಕೊರಕೋಡು ದುರ್ಗಾಪರಮೇಶ್ವರಿ ಕಾಶೀಕಾಲ ಭೈರವ, ಕೂಡ್ಲು ಮಹಾಕಾಳಿ, ಕಂಬಾರು ದುರ್ಗಾಪರಮೇಶ್ವರಿ, ಐಲ ದುರ್ಗಾಪರಮೇಶ್ವರಿ, ಉಬ್ರಂಗಳ – ಕುಧ್ಕುಳಿ ದುರ್ಗಾಪರಮೇಶ್ವರಿ, ಕಾರಡ್ಕದ ಮುಂಡೋಳು ದುರ್ಗಾಪರಮೇಶ್ವರಿ, ಗೋಸಾಡ‌ ಮಹಿಷಮರ್ಧಿನಿ, ಅರಿಕ್ಕಾಡಿ ದುರ್ಗಾಪರಮೇಶ್ವರಿ, ಕುಂಬಳೆ ಬ್ರಹ್ಮಚಾರಿಕಟ್ಟೆ ಕಲ್ಪವೃಕ್ಷ ಮಹಾಮಾಯಿ, ಬಂಗ್ರಮಂಜೇಶ್ವರ ಕಾಳಿಕಾಪರಮೇಶ್ವರಿ, ಕಾರ್ಲೆ ಕಾಳಿಕಾಂಬ, ಶ್ರಾವಣಕೆರೆ ದುರ್ಗಾ ಪರಮೇಶ್ವರಿ, ಕುಡಾಲು – ಮೇರ್ಕಳ ದುರ್ಗಾಪರಮೇಶ್ವರಿ, ಮಾಯಿಪ್ಪಾಡಿ ರಾಜರಾಜೇಶ್ವರಿ, ಆರಂತೋಡು ಅಜ್ಜಾವರ ಮಹಿಷ ಮರ್ಧಿನಿ, ಸಾಯ ದುರ್ಗಾಪರಮೇಶ್ವರಿ, ಮೊಗೇರು ದುರ್ಗಾ ಪರಮೇಶ್ವರಿ, ಅಡೂರು ವನದುರ್ಗೆ, ಎಡನೀರು ಮಾಚಿಪುರ ಮಹಾಲಕ್ಷಿ$¾, ಕೂಡ್ಲು ಮಹಾಕಾಳಿ, ನೆಕ್ರಾಜೆ ದುರ್ಗಾಪರಮೇಶ್ವರಿ, ಕಾರಡ್ಕದ ಅಂಬಿಕಾ, ಕಡಪ್ಪುರ ಭಗವತಿ, ಪೆರ್ಣೆ ಮುಚ್ಚಿಲೋಟ್‌ ಭಗವತಿ ಕ್ಷೇತ್ರಗಳಲ್ಲಿ ನವರಾತ್ರಿ ಮಹೋತ್ಸವ ಆರಂಭಗೊಂಡಿತು.

ವಿಶೇಷತೆ
ದೇವಸ್ಥಾನ ಗಳಲ್ಲಿ, ಮಂದಿರಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಕೀರ್ತನೆ, ಭಜನೆ, ಸತ್ಸಂಗ, ಧಾರ್ಮಿಕ ಸಭೆಗಳು, ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ದೇವಸ್ಥಾನಗಳಲ್ಲಿ ಛದ್ಮವೇಷ ಸ್ಪರ್ಧೆಗಳು ನಡೆಯಲಿದೆ. ವಿವಿಧ ವೇಷಗಳು ರಂಜಿಸಲಿದೆ. ನವರಾತ್ರಿಯ ಉತ್ಸವದ ದಿನಗಳಲ್ಲಿ ಹುಲಿ ವೇಷ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next