Advertisement
ನಗರದ ಪ್ರಮುಖ ಬೀದಿಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಿ 9 ದಿನಗಳ ಕಾಲ ಪೂಜೆ ಮಾಡಿ ದೇವಿಯನ್ನು ಆರಾಧಿಸಲಾಗುತ್ತದೆ. 9 ದಿನಗಳ ಕಾಲ ದೇವತೆಯ ವಿವಿಧ ರೂಪಗಳ ಹೆಸರಿನಲ್ಲಿ ದೇವಿಯನ್ನು ಆರಾಧಿಸಿ ಪೂಜಿಸುವ ಕಾರ್ಯಕ್ರಮ ನಡೆಸಲಾಗುತ್ತದೆ.
Related Articles
Advertisement
ಬಾದಾಮಿ: ನಗರದ ಪುರಾತನ ಶ್ರೀ ವೆಂಕಟೇಶ್ವರ ದೇವರ ನವರಾತ್ರಿ ಉತ್ಸವ ಸೆ.26ರಿಂದ ಆರಂಭವಾಗಿ ಅ.6 ರವರೆಗೆ ನಡೆಯಲಿವೆ. ಸೆ.26ರಂದು ಸೋಮವಾರ ಬೆಳಿಗ್ಗೆ ಸುಪ್ರಭಾತದೊಂದಿಗೆ ನವರಾತ್ರಿ ಉತ್ಸವ ಆರಂಭವಾಗಲಿದೆ. ಬೆಳಿಗ್ಗೆ 11 ಗಂಟೆಗೆ ಘಟಸ್ಥಾಪನೆ, ಪ್ರತಿದಿನ ಹೋಮ ಹವನ, ಶ್ರೀ ವೆಂಕಟೇಶ್ವರ ಪುರಾಣ, ರಾತ್ರಿ 7 ಗಂಟೆಗೆ ಪಲ್ಲಕ್ಕಿ ಸೇವೆ ರಾತ್ರಿ 7.30 ಗಂಟೆಗೆ ವಾಹನೋತ್ಸವ ನಡೆಯಲಿದೆ.
ಸೆ.28 ರಂದು ಬುಧವಾರ ಸಪ್ತ ರಾತ್ರೋತ್ಸವ 7 ದಿನಗಳ ಕಾಲ ದೀಪ ಹಾಕುವುದು. ಸೆ.30 ರಂದು ಶುಕ್ರವಾರ ಗರುಡ ಪಂಚಮಿ, 5 ದಿನಗಳ ಕಾಲ ದೀಪ ಹಾಕುವುದು. ಅ.2 ರಂದು ರವಿವಾರ ತ್ರಿರಾತ್ರೋತ್ಸವ/ಸರಸ್ವತಿ ಆಹ್ವಾನ-3 ದಿವಸ ದೀಪ ಹಾಕುವುದು.
ಅ.3ರಂದು ಸೋಮವಾರ ಏಕರಾತ್ರೋತ್ಸವ, ದುರ್ಗಾಷ್ಟಮಿ, ಸರಸ್ವತಿ ಪೂಜೆ ನಡೆಯಲಿದೆ. ಅ.4ರಂದು ಮಂಗಳವಾರ ಮಹಾನವಮಿ, ಆಯುಧಪೂಜೆ, ಅ.5ರಂದು ಬುಧವಾರ ವಿಜಯದಶಮಿ, ಬೆಳಿಗ್ಗೆ 8 ಗಂಟೆಗೆ ಶ್ರೀ ವೆಂಕಟೇಶ್ವರ ಪುರಾಣ ಮಂಗಲ, ಬೆಳಿಗ್ಗೆ 9 ಗಂಟೆಗೆ ರಥಾಂಗ ಹೋಮ, ಮಧ್ಯಾಹ್ನ 12 ಗಂಟೆಗೆ ರಥೋತ್ಸವ ಜರುಗಲಿದೆ. ಸಂಜೆ 6.30 ಗಂಟೆಗೆ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶಮೀಪೂಜೆ ಬನ್ನಿ ಮುಡಿಯುವ ಕಾರ್ಯಕ್ರಮ, ಅ.6ರಂದು ಗುರುವಾರ ಬೆಳಿಗ್ಗೆ 9 ಗಂಟೆಗೆ ಅವಭೃತ ಸ್ನಾನ(ಚಕ್ರಸ್ನಾನ) ನಡೆಯಲಿದೆ. ಅ.9ರಂದು ರವಿವಾರ ಕಳಸ ಇಳಿಯುವುದು ಕಾರಣ ಎಲ್ಲ ಭಕ್ತಾದಿಗಳು ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೋರಲಾಗಿದೆ.
ಲೋಕಾಪುರ
ಲೋಕಾಪುರ: ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ಸೆ.26ರಂದು ಘಟಸ್ಥಾಪನೆಯೊಂದಿಗೆ ನವರಾತ್ರಿ ಉತ್ಸವ ಆರಂಭವಾಗಲಿದೆ. ನವರಾತ್ರಿ ಉತ್ಸವ ಅಂಗವಾಗಿ ಪ್ರತಿದಿವಸ ಕಾಕಡಾರತಿ, ಚಿಂತನ, ಪಂಚಾಮೃತ ಅಭಿಷೇಕ, ಮಹಾಪೂಜೆ, ಅಲಂಕಾರ, ಮಹಾಮಂಗಳಾರತಿ, ಮಂತ್ರಪುಷ್ಟ ಹಾಗೂ ಸಂಜೆ 5 ಗಂಟೆಗೆ ಬಾಗಲಕೋಟೆಯ ಸಂದರ್ಶ ಆಚಾರ್ಯ ಕಂಚಿ ಇವರಿಂದ ವೆಂಕಟೇಶ್ವರ ಮಹಾತ್ಮೆ ಪುರಾಣ, ನಂತರ ವಾಹನೋತ್ಸವ, ಸರ್ವಸೇವಾ, ಸ್ವಸ್ತಿವಾಚನ, ತಾರತಮ್ಯ ಭಜನೆ, ಸಂಗೀತ ಕಾರ್ಯಕ್ರಮಗಳು ಸಾಂಗವಾಗಿ ಜರುಗಲಿವೆ. 30ರಂದು ಗರುಡ ಪಂಚಮಿ, 3ರಂದು ದುರ್ಗಾಷ್ಟಮಿ, ರಂಗವಲ್ಲಿ ಸ್ಪರ್ಧೆ, 4ರಂದು ಖಂಡೆ ನವಮಿ, ಆಯುಧ ಪೂಜೆ, 5ರಂದು ರಥೋತ್ಸವ ಜರುಗಲಿದೆ ಎಂದು ಅರ್ಚಕ ಬಿ.ಎಲ್.ಬಬಲಾದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.