Advertisement
ದಕ್ಷಿಣ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ ಉತ್ಸವ ಆರಂಭವಾಗಿದೆ.
Related Articles
Advertisement
ಮಂಗಳೂರು : ನಗರದ ರಥಬೀದಿಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಶತಮಾನೋತ್ಸವದ ಪರ್ವ ಕಾಲದಲ್ಲಿ ಸೋಮವಾರ ಶ್ರೀ ಕಾಶೀ ಮಠಾಧಿಪತಿ ಶ್ರೀಮತ್ ಸಂಯಮೀಂದ್ರತೀರ್ಥ ಶ್ರೀಪಾದರು ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ನೆರವೇರಿಸಿದರು. ಸ್ವರ್ಣ ನವಿಲು, ಸ್ವರ್ಣ ವೀಣೆ, ಸ್ವರ್ಣ ಕೈಬಳೆ ಅಲ್ಲದೆ ಇತರ ಸ್ವರ್ಣಾಭರಣಗಳೊಂದಿಗೆ ಸರ್ವಾಲಂಕಾರ ಭೂಷಿತಳಾದ ಶ್ರೀ ಶಾರದಾ ಮಾತೆಗೆ ಆರತಿ ಬೆಳಗಲಾಯಿತು.
ಪ್ರಧಾನ ಅರ್ಚಕ ಜೆ. ಭಾಸ್ಕರ ಭಟ್, ವೈದಿಕರಾದ ಪಂಡಿತ ಎಂ. ನರಸಿಂಹ ಆಚಾರ್ಯ, ಪಂಡಿತ ಕಾಶೀನಾಥ ಆಚಾರ್ಯ, ವೇ|ಮೂ| ವೈಕುಂಠ ಭಟ್, ಸಮಿತಿಯ ಅಧ್ಯಕ್ಷ ಡಾ| ಉಮಾನಂದ ಮಲ್ಯ, ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ, ಕೋಶಾಧಿಕಾರಿ ವಿಠಲ ಆಚಾರ್ಯ, ಅಲಂಕಾರ ತಂಡದ ರಘುರಾಮ ಕಾಮತ್ ಮೊದಲ ಉಪಸ್ಥಿತರಿದ್ದರು. ಪ್ರತೀ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಸೆ. 27ರಂದು ಸಹಸ್ರ ಚಂಡಿಕಾ ಯಾಗ ಆರಂಭಗೊಳ್ಳಲಿದ್ದು, ಅ. 2ರಂದು ಬೆಳಗ್ಗೆ ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿ ಮಹಾ ಪೂರ್ಣಾ ಹುತಿ ನೆರವೇರಿಸುವರು. ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ.