Advertisement

ಪುರಂದರ ಮಂಟಪದಲ್ಲಿ ನವರಾತ್ರೋತ್ಸವ ಆರಂಭ

10:17 AM Sep 30, 2019 | Suhan S |

ಧಾರವಾಡ: ಯಾಲಕ್ಕಿ ಶೆಟ್ಟರ ಕಾಲೋನಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಶಾಖಾಮಠದಲ್ಲಿರುವ ಪುರಂದರ ಮಂಟಪದಲ್ಲಿ ನವರಾತ್ರಿ ನಿಮಿತ್ತ ಅಕ್ಟೋಬರ್‌ 8ರವರೆಗೆ ನವರಾತ್ರೋತ್ಸವ ಕಾರ್ಯಕ್ರಮಗಳು ನಡೆಯಲಿವೆ.

Advertisement

ತಿರುಮಲ ತಿರುಪತಿ ದೇವಸ್ಥಾನದಿಂದ ನೀಡಿದ ಶ್ರೀದೇವಿ, ಭೂದೇವಿ ಹಾಗೂ ಶ್ರೀನಿವಾಸದೇವರ ಉತ್ಸವ ಮೂರ್ತಿಗಳಿಗೆ ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥರ ಆಜ್ಞಾನುಸಾರ ಪೂಜೆ-ಪುನಸ್ಕಾರಗಳು ನಡೆಯಲಿವೆ. ನಿತ್ಯ ಬೆಳಗ್ಗೆ ಅಭಿಷೇಕ, ಅರ್ಚನೆ, ಅಲಂಕಾರ, ತೈಲ ಹಾಗೂ ಘೃತ ದೀಪ ಸಂಯೋಜನೆ, ಪೂಜಾವಿ ಧಿವಿಧಾನಗಳು ನಡೆಯಲಿವೆ.

ಪ್ರತಿದಿನ ಸಂಜೆ 4 ಗಂಟೆಯಿಂದ ನಿತ್ಯ ಸ್ವರ್ಣಕಮಲ ಹರಿಪ್ರಿಯ, ಅಂಜನಾ, ಲಕ್ಷ್ಮೀ ವೆಂಕಟೇಶ್ವರ, ಸೌಭಾಗ್ಯ, ಆಶೀರ್ವಾದ, ಲಕ್ಷ್ಮೀಶ, ಚಂದ್ರಿಕಾ, ಮಧ್ವಕೃಷ್ಣ, ಭಾಗ್ಯಶ್ರೀ, ವಿಶ್ವ ಮಧ್ವಪಾರಾಯಣ, ಭಜನೆ ನಡೆಯಲಿದೆ. ಪ್ರತಿದಿನ ಸಂಜೆ 5:30ಕ್ಕೆ ಪುರಂದರ ಅಷ್ಟೋತ್ತರ ಮಂಡಳಿ, ಭಕ್ತಾದಿಗಳಿಂದ ಶ್ರೀನಿವಾಸದೇವರ ಸ್ತೋತ್ರ ಪಾರಾಯಣ, ಸಂಜೆ 6 ಗಂಟೆಗೆ ವಿದ್ವಾನ್‌ ಗೋವಿಂದ ನವಲಗುಂದ ಅವರಿಂದ ವೆಂಕಟೇಶ ಮಹಾತ್ಮ ಪಾರಾಯಣ, ನೈವೇದ್ಯ ಮತ್ತು ಮಹಾ ಮಂಗಳಾರತಿ ಜರುಗಲಿದೆ. ಅಕ್ಟೋಬರ್‌ 8 ವಿಜಯದಶಮಿ ದಿನದಂದು ಮಧ್ಯಾಹ್ನ 4 ಗಂಟೆಗೆ ರಥೋತ್ಸವ, ಬನ್ನಿ ಮುಡಿಯುವುದು, ಸಾಮೂಹಿಕ ಶ್ರೀನಿವಾಸ ಕಲ್ಯಾಣ ಉತ್ಸವ ಜರುಗುವುದು ಎಂದು ಧರ್ಮದರ್ಶಿ ಸಿ. ನಾಗರಾಜ ತಿಳಿಸಿದ್ದಾರೆ.

ವಿವರಗಳಿಗೆ ಮಠದ ಶಾಖಾಧಿ ಕಾರಿ ಮೊ. ಸಂ.9448221821, ಅರ್ಚಕರು: 8197941685 ಇವರನ್ನು ಸಂಪರ್ಕಿಸಬಹುದು

Advertisement

Udayavani is now on Telegram. Click here to join our channel and stay updated with the latest news.

Next