Advertisement
ಪಲಿಮಾರು ಮಠದ ಟ್ರಸ್ಟಿ ಸಚ್ಚಿದಾನಂದ ರಾವ್ ಅವರು ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಪಲಿಮಾರು ಮಠದ ಶ್ರೀ ವಿದ್ಯಾ ಧೀಶ ತೀರ್ಥ ಸ್ವಾಮೀಜಿ ಅವರ ಸಲಹೆ-ನಿರ್ದೇಶನದಂತೆ, ಕೋವಿಡ್ 19ರ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸರಕಾರದ ಮಾರ್ಗ ಸೂಚಿಯಂತೆ ಮಠದ ಪ್ರತಿಯೊಂದು ಧಾರ್ಮಿಕ, ಆಧ್ಯಾತ್ಮಿಕ ಆಚರಣೆ ಸರಳವಾಗಿ ನಡೆಯಲಿದೆ. ನವರಾತ್ರಿ ಪ್ರಯುಕ್ತ ಪ್ರತಿದಿನ ಬೆಳಗ್ಗೆ ಶ್ರೀ ಚಂಡಿಕಾಯಾಗ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 5 ರಿಂದ ಭಜನೆ, ರಾತ್ರಿ 7ರಿಂದ ವಿದ್ವಾನ್ ರಾಮರಾಜ್ ಅವರಿಂದ ರಾಮ ಕಥಾ ಪ್ರವಚನವನ್ನು ಆಯೋಜಿಸಲಾಗಿದೆ. ವಿಜಯದಶಮಿಯ ದಿನದಂದು ಮಧ್ವಜಯಂತಿ, ಬ್ರಹ್ಮೋತ್ಸವದ ಪೂರ್ವಭಾವಿಯಾಗಿ ಬೆಳಗ್ಗೆ ಕಲಶ ಪ್ರತಿಷ್ಠೆ, ಪ್ರಧಾನ ಹವನ ಮಹಾಪೂಜೆ, ಅಪರಾಹ್ನ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ರಿಂದ ಶ್ರೀ ಬಾಲಾಜಿ ಸನ್ನಿಧಿಯ ಮಹಿಳಾ ಸದಸ್ಯೆಯರಿಂದ ಭಜನೆ, ಸಾಂಕೇತಿಕ ರಥೋತ್ಸವ, ಶ್ರೀನಿವಾಸ ದೇವರಿಗೆ ರಂಗಪೂಜೆ ಮತ್ತು ಪರಿವಾರ ದೇವರಾದ ಶ್ರೀ ಗಣಪತಿ, ಹಿಮಾಲಯದ ಸ್ವಾಮಿಗಳಿಂದ ಪೂಜಿತ ಓಂಕಾರ ಇರುವ ಮಾಣಿಕ್ಯ ಲಿಂಗ ಶ್ರೀ ಮುಂಗೇಶಿ ಮಹಾ ಮೃತ್ಯುಂಜಯ ರುದ್ರ ದೇವರು, ಶ್ರೀ ಪದ್ಮಾಂಬಿಕೆ, ಶ್ರೀ ಆಂಜನೇಯ, ಶ್ರೀ ನಾಗದೇವರು, ನವಗ್ರಹ ದೇವರಿಗೆ ವಿಶೇಷ ಪೂಜೆಗಳು ನಡೆಯಲಿವೆ ಎಂದು ಪೂಜಾ ವಿವರ ನೀಡಿದ ಅವರು ಶ್ರೀ ಚಂಡಿಕಾ ಯಾಗದ ಸಂಕಲ್ಪ ಕೈಗೊಂಡರು.
Related Articles
Advertisement
ಚಿತ್ರ-ವರದಿ : ರಮೇಶ ಅಮೀನ್.