Advertisement
ಕರಾವಳಿಯ ಪ್ರಮುಖ ದೇವಸ್ಥಾನಗಳಲ್ಲಿ 9 ದಿನಗಳ ಕಾಲ ನವರಾತ್ರಿ ಅಂಗವಾಗಿ ವಿಶೇಷ ಪೂಜೆ, ಹತ್ತನೇ ದಿನ ವಿಜಯದಶಮಿ ಕಾರ್ಯಕ್ರಮ ನೆರವೇರಲಿದೆ. ಹೆಚ್ಚಿನ ದೇಗುಲಗಳು ವಿದ್ಯುತ್ ದೀಪ, ಹೂವುಗಳಿಂದ ಶೃಂಗಾರಗೊಂಡಿವೆ.
ಕೋವಿಡ್ ಆತಂಕ ಹಿನ್ನೆಲೆಯಲ್ಲಿ ನವರಾತ್ರಿ, ದಸರಾ ಆಚರಣೆಯನ್ನು ಸರಳವಾಗಿ ಆಚರಿಸುವ ಬಗ್ಗೆ ಉಡುಪಿ, ದ.ಕ. ಜಿಲ್ಲಾಡಳಿತ ಈಗಾಗಲೇ ಮಾರ್ಗಸೂಚಿ ಹೊರಡಿಸಿದೆ. ಭಕ್ತರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣಪತ್ರ ಇದ್ದರೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಬೇಕು. ಭಕ್ತರು ಲಸಿಕೆ ಪಡೆಯದಿದ್ದಲ್ಲಿ ಅಂಥವರಿಗೆ ದೇವಾಲಯದ ಆವರಣದಲ್ಲಿ ಲಸಿಕಾ ಕೇಂದ್ರ ತೆರೆಯಬೇಕು.
Related Articles
Advertisement
ಸಾಂಸ್ಕೃತಿಕ ಕಾರ್ಯಕ್ರಮಗಳು ಶೇ. 50 ಜನರಿಗೆ ಮಿತಿಗೊಳಿಸಿ ನಡೆಸಬೇಕು. ಹುಲಿ ವೇಷಧಾರಿಗಳು ದೇವಸ್ಥಾನದ ಆವರಣದೊಳಗೆ, ಸಾರ್ವಜನಿಕ ಪ್ರದೇಶಗಳಲ್ಲಿ ಪ್ರದರ್ಶನ ನೀಡುವಾಗ ಜನಸಂದಣಿ ಯಾಗದಂತೆ ನೋಡಿಕೊಳ್ಳುವುದು, ಮಾಸ್ಕ್ ಧರಿಸದೆ ಸೇರುವ ಸಾರ್ವಜನಿಕರ ವಿರುದ್ಧ ನಿಯಮಾನುಸಾರ ದಂಡ ವಿಧಿಸಲು ಕ್ರಮ ಕೈಗೊಳ್ಳಬೇಕು ಎಂದು ಉಭಯ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.