Advertisement

2ನೇ ವರ್ಷಕ್ಕೆ ನವರಸ ನಟನಾ ಅಕಾಡೆಮಿ

05:49 AM Jan 02, 2019 | |

ಕಳೆದ ವರ್ಷ ಆರಂಭವಾಗಿದ್ದ “ನವರಸ ನಟನ ಅಕಾಡೆಮಿ’ ತನ್ನ ಮೊದಲನೇ ಶೈಕ್ಷಣಿಕ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದು, ಇದೀಗ ಎರಡನೇ ವರ್ಷಕ್ಕೆ ಕಾಲಿರಿಸಿದೆ. ಮೊದಲ ವರ್ಷದಲ್ಲಿ ಒಟ್ಟು ಮೂರ್‌ ಬ್ಯಾಚ್‌ಗಳ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ನಟನೆ, ನಿರ್ದೇಶನ, ಸ್ವಿಮಿಂಗ್‌, ಡ್ಯಾನ್ಸಿಂಗ್‌, ಫೈಟಿಂಗ್‌ ಮತ್ತು ಚಿತ್ರೀಕರಣದ ಅನುಭವಗಳ ತರಬೇತಿ ನೀಡಲಾಗಿದೆ. 

Advertisement

ನಟನೆ ಮತ್ತು ನಿರ್ದೇಶನದ ಬಗ್ಗೆ ತರಬೇತಿ ಪಡೆದುಕೊಳ್ಳಲು ಆಸಕ್ತ ವಿದ್ಯಾರ್ಥಿಗಳನ್ನು ಆಡಿಷನ್‌ ಮೂಲಕ ಈ ಸಂಸ್ಥೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಕೇವಲ ಪುಸ್ತಕದಲ್ಲಿರುವ ಥಿಯೇರಿ ವಿಷಯಗಳನ್ನು ಮಾತ್ರ ಬೋಧಿಸದೇ, ಚಿತ್ರದ ಪ್ರೀ-ಪ್ರೊಡಕ್ಷನ್‌, ಪ್ರೊಡಕ್ಷನ್‌ ಮತ್ತು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೂ ವಿದ್ಯಾರ್ಥಿಗಳನ್ನು ಭಾಗಿಗಳನ್ನಾಗಿಸುವ ಮೂಲಕ ಅವರಿಗೆ ಪ್ರಾತ್ಯಕ್ಷಿಕ ತರಬೇತಿಯನ್ನು ನೀಡಲಾಗುತ್ತಿದೆ.

ಈ ವರ್ಷದಿಂದ ಮೇಕಪ್‌, ಎಡಿಟಿಂಗ್‌ ಹಾಗೂ ಕಲಾ ವಿಭಾಗದ ಬಗ್ಗೆಯೂ ತರಬೇತಿ ನೀಡಲಾಗುತ್ತಿದೆ. ನೃತ್ಯ ನಿರ್ದೇಶಕ ಮಾಲೂರು ಶ್ರೀನಿವಾಸ್‌ ಸ್ಥಾಪಿಸಿರುವ “ನವರಸ ನಟನ ಅಕಾಡೆಮಿ’ಗೆ ಹಿರಿಯ ನಿರ್ದೇಶಕ ಎಸ್‌.ನಾರಾಯಣ್‌ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರರಂಗದ ಹಲವು ಅನುಭವಿ ನಿರ್ದೇಶಕರು, ತಂತ್ರಜ್ಞರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಮುಂಬರುವ ಫೆ. 10ರಿಂದ “ನವರಸ ನಟನ ಅಕಾಡೆಮಿ’ಯ ಎರಡನೇ ವರ್ಷದ ಮೊದಲ ಬ್ಯಾಚ್‌ ಶುರುವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next