ಹುಬ್ಬಳ್ಳಿ : ಕರ್ತವ್ಯ ನಿರ್ವಹಣೆಗೆ ಕೆಲವರಿಂದ ತೊಂದರೆಯಾಗುತ್ತಿದೆ ಎಂದು ನಮ್ಮನ್ನು ಈ ಠಾಣೆಯಿಂದ ವರ್ಗಾವಣೆ ಮಾಡಿ ಎಂದು ಸಿಬ್ಬಂದಿಗಳೇ ಠಾಣೆಯ ಎಂದು ನಿಂತು ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದ ಘಟನೆ ನವನಗರ- ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ನಡೆದಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಇತಿಹಾಸದಲ್ಲಿ ಇಂತಹದೊಂದು ಘಟನೆ ಮೊದಲ ಬಾರಿಗೆ ನಡೆದಿದೆ. ಠಾಣೆಯ ಎಲ್ಲಾ ಸಿಬ್ಬಂದಿಗಳು ವರ್ಗಾವಣೆ ಪತ್ರ ಹಿಡಿದುಕೊಂಡು ಠಾಣೆಯ ಮುಂದೆ ಜಮಾಯಿಸಿದರು.
ಗುರುವಾರ ರಾತ್ರಿ ಬಂಧನಕ್ಕೊಳಗಾಗಿರುವ ರೌಡಿಶೀಟರ್ ಪ್ರವೀಣ ಪೂಜಾರಿ, ಕಾಂಗ್ರೆಸ್ ಮುಖಂಡ ಮಲ್ಲಯ್ಯ ಹಿರೇಮಠ ಹಾಗೂ ವಕೀಲ ವಿನೋದ ಪಾಟೀಲ ಅವರನ್ನು ಬಂಧನ ಮಾಡಲಾಗಿದ್ದು, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಇದನ್ನೂ ಓದಿ:ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡ ಮಹಿಳೆ; ಬಲೆ ಹೆಣೆದು ಬಂಧಿಸಿದ ಪೊಲೀಸರು
ಇದೇ ಮೂವರು ವ್ಯಕ್ತಿಗಳಿಂದ ನವನಗರದಲ್ಲಿ ಹಲವು ದಾಂಧಲೆಗಳು ನಡೆಯುತ್ತಿದ್ದು, ಮೂವರು ಪ್ರಭಾವಿಗಳಾಗಿದ್ದಾರೆ. ಪದೇ ಪದೇ ಇವರಿಂದಲೇ ಸಮಸ್ಯೆ ಉದ್ಭವಿಸುತ್ತಿದ್ದು, ವಾತಾವರಣವೇ ಹದಗೆಟ್ಟು ಹೋಗಿದೆ. ಇದೇ ಕಾರಣಕ್ಕೆ ಪಿಎಸ್ ಐ, ಎಎಸ್ಐ, ಹವಾಲ್ದಾರಗಳು ಹಾಗೂ ಸಿಬ್ಬಂದಿಯು ವರ್ಗಾವಣೆ ನೀಡಿ, ನಮ್ಮನ್ನು ಉಳಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಸುಮಾರು 53 ಪೊಲೀಸರು ವರ್ಗಾವಣೆ ಮಾಡಿ ಎಂದು ಪಾತ್ರದ ಮೂಲಕ ಹಿರಿಯ ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದಾರೆ.