Advertisement

ನವಲಗುಂದದಲ್ಲಿ ಮಳೆಯ ಆವಾಂತರ : ಭೋಗಾನೂರ ಗ್ರಾಮದ 40 ಮನೆಗಳು ಜಲಾವೃತ

09:09 AM Sep 06, 2022 | Team Udayavani |

ನವಲಗುಂದ : ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಗ್ರಾಮಗಳಲ್ಲಿಯೂ ತುಂಬಿ ಹರಿಯುತ್ತೇವೆ. ಧಾರವಾಡ ಜಿಲ್ಲಾ ನವಲಗುಂದ ತಾಲೂಕಿನ ಭೋಗಾನೂರ ಗ್ರಾಮದಲ್ಲಿ ದೊಡ್ಡ ಹಂದಿಗನಹಳ್ಳವು ತುಂಬಿ ಹರಿದು ಸುಮಾರು 40 ಮನೆಗಳು ಜಲವೃತಗೊಂಡಿವೆ

Advertisement

ಮಳೆಯ ಅಬ್ಬರಕ್ಕೆ ರಾತ್ರೋರಾತ್ರಿ ಹಂದಿಗನಹಳ್ಳ ತುಂಬಿ ಬಂದಿರುವುದರಿಂದ 40 ಮನೆಯಲ್ಲಿದ್ದ ಜನರು ತಮ್ಮ ರಕ್ಷಣೆಗಾಗಿ ಮನೆಯಲ್ಲಿರುವ ಸಾಮಗ್ರಿಗಳನ್ನು ಬಿಟ್ಟು ಹೊರಗೆ ಬಂದಿದ್ದಾರೆ. ನೀರಿನ ಹರಿವು ಇನ್ನು ಹೆಚ್ಚಾಗುತ್ತಿರುವುದರಿಂದ ರೈತರು ತಮ್ಮ ಜಾನುವಾರಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಭೋಗಾನೂರ ಗ್ರಾಮದ 40 ಕುಟುಂಬಗಳು ನಿರಾಶ್ರಿತರಾಗಿರುತ್ತಾರೆ.

ಇಷ್ಟೊಂದು ನೀರು ಯಾವತ್ತು ಬಂದಿರುವುದಿಲ್ಲ ಈ ಭಾಗದ ಕುಟುಂಬಸ್ಥರು ನಿರಾಶ್ರಿತರಾಗಿದ್ದಾರೆಂದು ಗ್ರಾಮದ ರೈತರಾದ ಬಸನಗೌಡ ಪಾಟೀಲ ಪತ್ರಿಕೆಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಯಲ್ಲಾಪುರ ತಾಲೂಕಿನಾದ್ಯಂತ ಭಾರಿ ಮಳೆ : ತೋಟಗಳಿಗೆ ನುಗ್ಗಿದ ನೀರು, ಅಪಾರ ನಷ್ಟ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next