Advertisement

Navage Fire Incident; ಮೃತ ಯುವಕನ ಅವಶೇಷವನ್ನು ಮಡಿಕೆಯಲ್ಲೇ ನೀಡಿದ್ದಾರೆ; ಸ್ಪಷ್ಟನೆ

03:34 PM Aug 08, 2024 | Team Udayavani |

ಬೆಳಗಾವಿ: ನಾವಗೆ ಗ್ರಾಮದ ಅಗ್ನಿ ದುರಂತ ಪ್ರಕರಣ ಮೃತ‌ ಕಾರ್ಮಿಕನ‌ ದೇಹದ ಅವಶೇಷ ಮಣ್ಣಿನ ಮಡಕೆಯಲ್ಲಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಲಾಗಿದೆ.

Advertisement

ಬೆಳಗಾವಿ ತಾಲ್ಲೂಕಿನ ನಾವಗೆ ಗ್ರಾಮದಲ್ಲಿ ಸಂಭವಿಸಿದ ಅಗ್ನಿ‌ ದುರಂತದಲ್ಲಿ ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ ದೇಹವು ಸಂಪೂರ್ಣ ಸುಟ್ಟು‌ ಬೂದಿಯಾಗಿತ್ತು.

ಈ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ತಂಡವು ಹಿರಿಯ ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲಿ ಮೃತ ಕಾರ್ಮಿಕ ಯಲ್ಲಪ್ಪನ ದೇಹದ ಅವಶೇಷಗಳನ್ನು ಮುಂದಿನ ಕ್ರಿಯಾಕರ್ಮಗಳಿಗೆ ಅನುಕೂಲವಾಗುವಂತೆ ಸಂಪ್ರದಾಯದಂತೆ ಮಣ್ಣಿನ‌ ಮಡಿಕೆಯಲ್ಲಿ ಹಾಕಿ ತಂದೆಯವರಿಗೆ ಹಸ್ತಾಂತರಿಸಲಾಗಿತ್ತು.

ಮಣ್ಣಿನ ಮಡಕೆಯಲ್ಲಿ ನೀಡಲಾಗಿದ್ದರೂ ಮಳೆ ಬರಬಹುದು ಎಂಬ ಕಾರಣಕ್ಕೆ ಮಡಕೆಯನ್ನು ಪ್ಲ್ಯಾಸ್ಟಿಕ್ ಚೀಲದಲ್ಲಿಟ್ಟುಕೊಂಡು ತರಲಾಯಿತು ಎಂದು ಮೃತ ಕಾರ್ಮಿಕ ಯಲ್ಲಪ್ಪನವರ ತಂದೆ ಸ್ವತಃ ತಿಳಿಸಿದ್ದಾರೆ. ಬೆಳಿಗ್ಗೆ 6 ಗಂಟೆಗೆ ಕುಟುಂಬದ ಸದಸ್ಯರು ಘಟನಾ ಸ್ಥಳಕ್ಕೆ ಆಗಮಿಸಿದ್ದರು.

ರಕ್ಷಣಾ ಕಾರ್ಯಾಚರಣೆ ನಡೆಸಿದ ತಂಡವು ಬೆಳಿಗ್ಗೆ 10 ಗಂಟೆಯ ವೇಳೆಗೆ ಸುಟ್ಟು ಹೋಗಿದ್ದ ಕಾರ್ಮಿಕನ ದೇಹದ ಅವಶೇಷಗಳನ್ನು ಪತ್ತೆ ಮಾಡಿತು.

Advertisement

ಇದಾದ ಬಳಿಕ ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ಕೈಗೊಂಡು ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನ 12.30 ಗಂಟೆಗೆ ಡಿಸಿಪಿ ಅವರು ಸೇರಿದಂತೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿಯೇ ದೇಹದ ಅವಶೇಷಗಳನ್ನು ಮಣ್ಣಿನ ಮಡಕೆಯಲ್ಲಿ ನೀಡಲಾಗಿದೆ ಎಂದು ಮೃತ ಕಾರ್ಮಿಕನ ತಂದೆ ಸ್ವತಃ ಸ್ಪಷ್ಟನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next