Advertisement
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ವಿಶ್ವನಾಥ್ ಅಯ್ಯರ್ ಗುರುಸ್ವಾಮಿ, ಕಣ್ಣನ್ ನಾಯರ್ ಗುರುಸ್ವಾಮಿ ಬಾಂದ್ರಾ, ಗಣೇಶ್ ಗುರುಸ್ವಾಮಿ ಘಾಟ್‌ಕೋಪರ್, ಶ್ರೀ ಧರ್ಮಶಾಸ್ತ ಭಕ್ತವೃಂದ ಬಾಂದ್ರಾ ಅಧ್ಯಕ್ಷ ರಾಮಣ್ಣ ಗುರುಸ್ವಾಮಿ, ಶ್ರೀ ನವದುರ್ಗಾ ಅಯ್ಯಪ್ಪ ಸೇವಾ ಸಂಘದ ಗೌರವಾಧ್ಯಕ್ಷ ಸುರೇಂದ್ರ ಗುರುಸ್ವಾಮಿ ಬೆಳಗಾವಿ, ಅಧ್ಯಕ್ಷ ಸುಧಾಕರ ಎನ್. ಶೆಟ್ಟಿ ಬಿಯಾಳಿ ಮಂದಾರ್ತಿ, ಕಾರ್ಯದರ್ಶಿ ಮೋಹನ್ ರೈ ಗುರುಸ್ವಾಮಿ ಉಪ್ಪಳ, ಕೋಶಾಧಿಕಾರಿ ಗಣೇಶ್ ಶೆಟ್ಟಿ ಕುಂಬ್ಳೆ, ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿ, ಪ್ರಧಾನ ಅರ್ಚಕ ಸಾಂತಿಂಜ ಜನಾರ್ದನ ಭಟ್ ಅವರ ಪೌರೋಹಿತ್ಯದಲ್ಲಿ ಗಣಹೋಮ, ಅಯ್ಯಪ್ಪ ಪ್ರತಿಷ್ಠೆ, ಸಹಸ್ರ ನಾಮ ಅರ್ಚನೆ ಹಾಗೂ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿತು.
Related Articles
Advertisement
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ ಶ್ರೀ ಗುರುನಾರಾಯಣ ಯಕ್ಷಗಾನ ಕಲಾಮಂಡಳಿ ಸಾಂತಾಕ್ರೂಜ್ ಕಲಾವಿದರಿಂದ ಬ್ರಹ್ಮ ಬಲಾಂಡಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ದಿನಪೂರ್ತಿ ನಡೆದ ಧಾರ್ಮಿಕ ಉತ್ಸವದಲ್ಲಿ ಸ್ಥಳೀಯ ನಗರ ಸೇವಕರು, ಪೊಲೀಸ್ ಅಧಿಕಾರಿಗಳು, ದಾನಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ವಿವಿಧ ಸಮಾಜದ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ
ಸ್ವೀಕರಿಸಿದರು.