Advertisement
“ಇದು ಹೊಸ ಭಾರತ ಎನ್ನುವುದು ಈಗ ನಮ್ಮ ಶತ್ರುಗಳಿಗೂ ಗೊತ್ತಾಗಿದೆ’ ಎಂದರು. ಪುಲ್ವಾಮಾ ದಾಳಿಯ ಬಳಿಕ ಪಾಕ್‌ಗೆ ನುಗ್ಗಿ ಸರ್ಜಿಕಲ್ ದಾಳಿ ನಡೆಸಿ, ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿದ್ದನ್ನು ಪ್ರಸ್ತಾವಿಸಿದರು.“ಕಾಂಗ್ರೆಸ್ ಅವಧಿಯಲ್ಲಿ ಹಗರಣಗಳು, ಲೂಟಿಯಿಂದ ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿತ್ತು. 2014ರಲ್ಲಿ ಮತದಾರರು ನಂಬಿಕೆಯಿತ್ತು ಬಿಜೆಪಿ ಕೈಹಿಡಿದರು. ಈಗ ಅಭಿವೃದ್ಧಿಯತ್ತ ಭಾರತ ಮುನ್ನುಗ್ಗುತ್ತಿದೆ’ ಎಂದರು.
ಪಾಕಿಸ್ಥಾನದೊಳಕ್ಕೆ ನುಗ್ಗಿ ದಾಳಿ ಖಚಿತ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪಾಕ್ ನೆಲಕ್ಕೆ ನುಗ್ಗಿ 20 ಮಂದಿ ಉಗ್ರರನ್ನು ಭಾರತ ಕೊಂದಿದೆ ಎಂಬ ಆರೋಪಗಳ ನಡುವೆಯೇ ಈ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಸಂದರ್ಶನವೊಂದ ರಲ್ಲಿ ಮಾತನಾಡಿದ ಅವರು, ಭಾರತವನ್ನು ಪದೇಪದೆ ಗುರಿ ಯಾಗಿಸಿಕೊಂಡು ದಾಳಿ ನಡೆಸಿದರೆ ಸುಮ್ಮನೆ ಇರಲು ಸಾಧ್ಯವಾಗದು ಎಂದು ಗುಡುಗಿದ್ದಾರೆ.