Advertisement
ಕರಾವಳಿ ಭಾಗಗಳಲ್ಲಿ ನಾಟಿ ಕೋಳಿಗಳನ್ನು ಫಾರಂ ಹೊರತಾಗಿಯೂ ಹೆಚ್ಚಿನೆಲ್ಲ ಮನೆಗಳಲ್ಲೂ ಸಾಕುತ್ತಾರೆ. ಮನೆಯೊಂದರಲ್ಲಿ ಕನಿಷ್ಠ 30ರಿಂದ 40ರ ತನಕ ಕೋಳಿಗಳು ಇದ್ದೇ ಇರುತ್ತವೆ. ಈ ಕೋಳಿಗಳು ಈಗ ಕಾಯಿಲೆಯಿಂದ ಸಾಯುತ್ತಿದ್ದು, ಇದಕ್ಕೆ ಪರಿಹಾರ ಏನೆಂಬುದು ತೋಚುತ್ತಿಲ್ಲ. ರೋಗದ ಲಕ್ಷಣ ಕಂಡು ಬಂದ ಕೆಲ ದಿನದಲ್ಲೇ ಕೋಳಿಗಳು ಸಾಯುತ್ತವೆ. ಈ ರೋಗ ಪುತ್ತೂರು, ಸುಳ್ಯ, ಕಡಬ ತಾಲೂಕಿನ ವಿವಿಧೆಡೆಗಳಲ್ಲಿ ವ್ಯಾಪಿಸಿದೆ.
ಈ ರೋಗಕ್ಕೆ ತುತ್ತಾದ ಕೋಳಿ ಕೊಕ್ಕರೆಯ ರೀತಿ ಕೂಗಾಡುತ್ತದೆ. ತತ್‌ಕ್ಷಣದಿಂದ ಆಹಾರ ಸೇವನೆ ನಿಲ್ಲಿಸಿ ಹೆಚ್ಚಾಗಿ ನೀರನ್ನೇ ಸೇವಿಸುತ್ತದೆ. ತೂಕ ಇಳಿದು ನಿತ್ರಾಣಕ್ಕೊಳಗಾಗುತ್ತದೆ. ಬಿಳಿ ಬಣ್ಣದ ಮಲ ವಿಸರ್ಜಿಸುತ್ತದೆ. ಆಹಾರ ಸೇವನೆ ಬಿಟ್ಟು ನಿಃಶಕ್ತಿಯಿಂದ ಕೋಳಿ ನಡೆಯಲಾಗದೆ ರೆಕ್ಕೆ, ಕಾಲುಗಳನ್ನು ಅಗಲಿಸಿ ಕೊಕ್ಕರೆಯಂತೆ ಮುದುಡಿಕೊಳ್ಳುತ್ತದೆ. ಕೋಳಿಗಳ ತಲೆಯಲ್ಲಿ ಕಜ್ಜಿಯಾಗಿ ಬಾಯಲ್ಲಿ ರಕ್ತ ಬರುವ ಸಾಧ್ಯತೆಯೂ ಇರುತ್ತದೆ. ರೋಗಕ್ಕೆ ತುತ್ತಾದ ಕೋಳಿ ಒಂದೇ ವಾರದಲ್ಲಿ ಸಾಯುತ್ತದೆ.
Related Articles
ರೋಗ ಬಾರದಂತೆ ಮುಂಜಾಗ್ರತೆ ವಹಿಸಿಕೊಳ್ಳುವುದು ಉತ್ತಮ. ಪ್ರತೀ ಆರು ತಿಂಗಳಿಗೊಮ್ಮೆ ಕೋಳಿಗಳಿಗೆ ರೋಗ ನಿರೋಧಕ ಚುಚ್ಚು ಮದ್ದನ್ನು ನೀಡುವುದರಿಂದ ರೋಗ ಬಾರದಂತೆ ತಡೆಗಟ್ಟಬಹುದು. ಒಂದು ಕೋಳಿಯಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡರೆ ತತ್‌ಕ್ಷಣ ಆ ಕೋಳಿಯನ್ನು ಪ್ರತ್ಯೇಕಿಸಿ ಉಳಿದ ಕೋಳಿಗಳಿಗೆ ರೋಗ ನಿರೋಧಕ ಚುಚ್ಚುಮದ್ದು ನೀಡಬೇಕು.
ಲಸಿಕೆ ಹಾಕಿಸಿ
ಮೊಟ್ಟೆಯೊಡೆದ ಮರಿಗಳಿಗೆ ಲಸಿಕೆ ಹಾಕಿಸಬೇಕು. ಬಳಿಕ 4 ವಾರದ ಬಳಿಕವೂ ಲಸಿಕೆ ಹಾಕಿಸಿದರೆ ರೋಗ ಬಾರದಂತೆ ತಡೆಗಟ್ಟಬಹುದು. ಬಳಿತ ಕೋಳಿಗಳಿಗೆ ್ಕ2ಆ ಲಸಿಕೆ ನೀಡುವುದರಿಂದಲೂ ರೋಗ ಬಾರದಂತೆ ಕಡೆಗಟ್ಟಬಹುದು. ಪ್ರತಿ ತಿಂಗಳ ಶನಿವಾರ ಪುತ್ತೂರು ಪಶು ವೈದ್ಯಕೇಂದ್ರದಲ್ಲಿ ಲಸಿಕೆ ನೀಡಲಾಗುತ್ತದೆ.
ಮೊಟ್ಟೆಯೊಡೆದ ಮರಿಗಳಿಗೆ ಲಸಿಕೆ ಹಾಕಿಸಬೇಕು. ಬಳಿಕ 4 ವಾರದ ಬಳಿಕವೂ ಲಸಿಕೆ ಹಾಕಿಸಿದರೆ ರೋಗ ಬಾರದಂತೆ ತಡೆಗಟ್ಟಬಹುದು. ಬಳಿತ ಕೋಳಿಗಳಿಗೆ ್ಕ2ಆ ಲಸಿಕೆ ನೀಡುವುದರಿಂದಲೂ ರೋಗ ಬಾರದಂತೆ ಕಡೆಗಟ್ಟಬಹುದು. ಪ್ರತಿ ತಿಂಗಳ ಶನಿವಾರ ಪುತ್ತೂರು ಪಶು ವೈದ್ಯಕೇಂದ್ರದಲ್ಲಿ ಲಸಿಕೆ ನೀಡಲಾಗುತ್ತದೆ.
– ಡಾ| ಧರ್ಮಪಾಲ ಕೆ. ಎ.ಡಿ., ಪಶು ಸಂಗೋಪನಾ ಇಲಾಖೆ ಪುತ್ತೂರು
ಎಲ್ಲ ಕೋಳಿಗಳೂ ಸತ್ತಿವೆ
ತಾನು ಮನೆಯಲ್ಲಿ ಹಲವು ವರ್ಷಗಳಿಂದ ನಾಟಿಕೋಳಿ ಸಾಕುತ್ತಿದ್ದು, ಈ ಬಾರಿ ಕೋಳಿಗಳಿಗೆ ರೋಗ ಬಂದು ಎಲ್ಲ ಕೋಳಿಗಳು ಸತ್ತು ಹೋಗಿವೆ. ಕಾರಣ ಏನೆಂದು ತಿಳಿದಿಲ್ಲ.
– ಶಿವರಾಮ, ಪಾಲ್ತಾಡಿ
– ಶಿವರಾಮ, ಪಾಲ್ತಾಡಿ
Advertisement