ತೀರ್ಥಹಳ್ಳಿ ಮತ್ತು ಕೋಣಂದೂರು ಮಧ್ಯೆ ಇರುವ ಮಂಗಳ ಹಳ್ಳಿಯಲ್ಲಿ “ಮಂಗಳ ನಾಟಿ ಔಷಧ’ ಚಿಕಿತ್ಸಾಲಯವಿದೆ. ಕಾಲು ಮುರಿದವರು, ಮಂಡಿ ಚಿಪ್ಪಿನ ಸಮಸ್ಯೆ, ಮಂಡಿ ನೋವು, ಸೊಂಟ ನೋವು ಹೀಗೆ ಮೂಳೆ ಸಂಬಂಧಿ ಕಾಯಿಲೆಗಳಿಂದ ಪರಿತಪಿಸುವವರಿಗೆ ಇಲ್ಲಿದೆ ನೋವಿಗೆ ಮುಕ್ತಿ. ವೈದ್ಯ ಶಿವಣ್ಣಗೌಡರು ಹಾಗೂ ಅವರ ಮಗ ಶ್ರೀಕಾಂತ ಈ ಚಿಕಿತ್ಸಾಲಯದ ರೂವಾರಿಗಳು. ಶಿವಣ್ಣರ ತಂದೆ ದನುಮಯ್ಯ ಗೌಡ್ರು 108 ವರ್ಷಗಳ ಕಾಲ ಇದೇ ಕೆಲಸ ಮಾಡುತ್ತಿದ್ದರು. ಮೂರನೇ ತಲೆಮಾರು ಕೂಡ ಇದೇ ಕೆಲಸ ಮುಂದುವರಿಸಿಕೊಂಡು ಹೋಗುತ್ತಿದೆ.
ನಾಟಿ ಔಷಧ ಅಂದರೆ ಸೊಪ್ಪು, ತೈಲ ಮತ್ತು ಒಂದಷ್ಟು ಸೊಪ್ಪಿನ ಪುಡಿ ಕೊಡಲಾಗುತ್ತದೆ. ಇದೆಲ್ಲವೂ ಮೂಳೆ, ಎಲುಬಿಗೆ ಶಕ್ತಿ ತುಂಬುತ್ತದೆ ಎನ್ನುತ್ತಾರೆ ಶ್ರೀಕಾಂತ್.
ವಿಶೇಷ ಎಂದರೆ ಆ ಕಾಲದಲ್ಲಿ ದನುಮಯ್ಯ ಗೌಡರು ಮೈಸೂರು ರಾಜವೈದ್ಯರಿಂದ ತರಬೇತಿ ಪಡೆದುಕೊಂಡು ಬಂದು ತೀರ್ಥಹಳ್ಳಿಯ ಸುತ್ತಮುತ್ತ ಔಷಧ ನೀಡುತ್ತಿದ್ದರಂತೆ.
ಚಿಕಿತ್ಸೆ ದಿನ- ಶನಿವಾರ -ಮಂಗಳವಾರ,
ಮಾಹಿತಿಗೆ – 9449782773