ಚಿಕ್ಕೋಡಿ: ನಿಸರ್ಗ ರಕ್ಷಣೆ ದೇಶದ ಆರೋಗ್ಯದ ಅಡಿಪಾಯ. ಹೀಗಾಗಿ ಎಲ್ಲರೂ ನಿಸರ್ಗವನ್ನು ಪ್ರೀತಿಸಿ ಉಳಿಸಬೇಕೆಂದು ಖ್ಯಾತ ವೈಧ್ಯರು ಮತ್ತು ಸಾಹಿತಿ ಡಾ.ದಯಾನಂದ ನೂಲಿ ಹೇಳಿದರು.
ಚಿಕ್ಕೋಡಿ ನಗರದ ಹಂಜಿ ತೋಟದ ಮನೆಯಲ್ಲಿ ಉಪನ್ಯಾಸಕ ಅಜೀತ ಕರಿಗಾರ ರಚಿಸಿದ ಟೈಮ್ಸ್ ಟೂ ಎಕ್ಸಪ್ಲೋರ್ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು.
ನೈಸರ್ಗಿಕ ಲೋಕದ ಮೇಲಿನ ಪ್ರೀತಿಯನ್ನು ಮುಖ್ಯವಾಗಿ ಬನ್ನಿಸುವ ಟೈಮ್ ಟೂ ಎಕ್ಸಪ್ಲೋರ್ ರಚನೆ ಇಂದಿನ ಸಮಾಜಕ್ಕೆ ಅತ್ಯಾವಶ್ಯಕ ವಾಗಿತ್ತು. ಸತ್ತಕ್ಕೆ ಅತಿ ಸಮೀಪವಾದ ವಿಷಯ ಈ ಕವನದಲ್ಲಿ ಅಡಕವಾಗಿದೆ.ಭಾರತಿಯ ಸಂಸ್ಕೃತಿಯನ್ನು ಬಿಂಬಿಸುತ್ತಿದೆ ಎಂದರು.
ಎಲ್ಲರು ವಿವಿಧ ತೆರನಾಗಿ ಅರಿವು ಮೂಡಿಸುವ ನಿಸರ್ಗ ರಕ್ಷಣೆ ಕವನ ಮೂಲಕ ಜನರಿಗೆ ಮನವರಿಕೆ ಮಾಡುವ ಕೆಲಸ ನಡೆಯಬೇಕಿದೆ ಎಂದರು.
ಹಿರಿಯ ಸಾಹಿತಿ ಹಾಗು ಜಾಗತಿಕ ಲಿಂಗಾಯತ ಮಹಾಸಭಾ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಪ್ರೋ. ಎಸ್ ವಾಯ್ ಹಂಜಿ ಮಾತನಾಡಿ. ಸಾಂಸ್ಕೃತಿಕ ಸಾಹಿತಿಕ ಸಮಾರಂಭದ ಇತ್ತಿಚಿನ ದಿನಗಳಲ್ಲಿ ಕೊರತೆಯಾಗಿದೆ. ಇದಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಯುವ ಕವಿ ಅಜೀತ ಅವರ ಕಾರ್ಯ ಶ್ಲಾಘನೀಯ. ಇಂದಿನ ತಂತ್ರಜ್ಞಾನ ಯುಗದಲ್ಲಿ ಕವಿ ಕೊರತೆ ಇದೆ. ಕವಿಯಾಗುವುದು ಆ ನೆಲದ ಪುಣ್ಯ ಕಾವ್ಯಕ್ಕೆ ಮಾತ್ರ ಭುಮಿಮೇಲೆ ಶಾಶ್ವತ ನೆಲೆ ಇದೆ. ಯುವ ಪೀಳಿಗೆಗೆ ಈ ಗ್ರಂಥ ಪ್ರೋತ್ಸಾಹ ನೀಡುವ ಗ್ರಂಥ ಇದಾಗಿದೆ.
ಉಪನ್ಯಾಸಕ ಅಜಿತ ಕರಿಗಾರ ಮಾತನಾಡಿ,ನನ್ನ ದಿನದ ಕಾರ್ಯದ ಸಮಯದಲ್ಲಿ ನಾನು ಕಂಡ ನಿಸರ್ಗದ ಉಲ್ಲೇಖ ಈ ಪುಸ್ತಕದಲ್ಲಿದೆ. ಯಾವದೇ ಪ್ರಾಣಿ, ಪಕ್ಕಿಗಳ ಬಂಧನದ ನಂತರದ ಬಿಡುವು ಅವುಗಳ ಸ್ವಾತಂತ್ರ್ಯ ನಮ್ಮ ಮನದುಂಬಿಸುತ್ತದೆ.ಮನುಷ್ಯ ನಿಸರ್ಗ ಪ್ರಿತಿಯಿಂದ ಕಾನುವದರೊಂದಿಗೆ ಅದರ ರಕ್ಷಣೆ ಹಾಗು ಸ್ವಚ್ಛತೆ ಅತ್ಯವಶ್ಯಕ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಶಿವಮೂರ್ತಿ ಪಡ್ಲಾಳೆ ವಹಿಸಿ ಮಾತನಾಡಿದರು, ಲಕ್ಷ್ಮಿ ಹಂಜಿ ಪ್ರಾರ್ಥನಾ ಗೀತೆ ಹಾಡಿದರು.
ಈ ಸಂಧರ್ಭದಲ್ಲಿ ರವಿ ಹಂಪನ್ನವರ, ದೈವಿಕ ಅಡಕೆ,ಲಕ್ಷ್ಮಿ ಕರಿಗಾರ, ನಂದಿನಿ ಬಾವಚೆ,ತುಕಾರಾಮ ಕೋಳಿ, ರುದ್ರಪ್ಪ ಸಂಗಪ್ಪಗೋಳ ಸೇರಿ ಹಲವಾರು ಇದ್ದರು.
ಸಿದ್ದು ಪಾಟೀಲ ನಿರೂಪಿಸಿದರು, ಸ್ವಾಗತಿಸಿದರು.