ಜೇವರ್ಗಿ: ಮಾನವನ ದುರಾಸೆಯಿಂದ ಅರಣ್ಯ ನಾಶವಾಗಿ ಜಗತ್ತಿನ ಪರಿಸರ ವಿನಾಶದ ಅಂಚಿಗೆ ತಲುಪಿದೆ. ಪ್ರಕೃತಿಯ ಸುಂದರ ಪರಿಸರ ಹತ್ತಾರು ರೋಗಗಳನ್ನು ನಿವಾರಣೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ತಹಶೀಲ್ದಾರ್ ವಿನಯ ಕುಮಾರ ಪಾಟೀಲ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯ ಗುರುಕುಲ ಶಾಲೆಯ ಆವರಣದಲ್ಲಿ ರೆಡ್ ಕ್ರಾಸ್ ಸಂಸ್ಥೆ, ಪತಂಜಲಿ ಯೋಗ ಸಮಿತಿ, ಬಸವಕೇಂದ್ರ ಮಹಿಳಾ ಘಟಕದ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಮಾಲಿನ್ಯವನ್ನು ಪರಿಣಾಮಕಾರಿ ಯಾಗಿ ತಡೆಗಟ್ಟಿ ಪ್ರಕೃತಿ ಕಾಪಾಡಬೇಕು. ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅಮೂಲ್ಯವಾದ ಜೀವ ವೈವಿಧ್ಯತೆ ಉಳಿಸಬೇಕು. ರೋಗ ಬರದಂತೆ ದೂರವಿರಲು ಪ್ರಕೃತಿಗೆ ಹತ್ತಿರವಾಗಿ ಬದುಕಬೇಕು ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರಾದ ಧರ್ಮು ಚಿನ್ನಿ ರಾಠೊಡ, ಶ್ರೀನಿವಾಸ ವಕೀಲ ಅವರು ಕೊರೊನಾ ಸೋಂಕು ನಿವಾರಣೆಗೆ ಕನ್ನೇರಿ ಮಠದಲ್ಲಿ ತಯಾರಿಸಿದ ಆಯುರ್ವೇದಿಕ ಔಷಧ ವಿತರಿಸಿದರು. ಪುರಸಭೆ ಮುಖ್ಯಾಧಿ ಕಾರಿ ಶರಣಯ್ಯಸ್ವಾಮಿ, ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಡಾ| ಪಿ.ಎಂ.ಮಠ, ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಅನೀಲ ರಾಂಪುರ, ಮಹಿಳಾ ಘಟಕದ ಅಧ್ಯಕ್ಷೆ ಸಂಗೀತಾ ಘಂಟಿಮಠ, ಬಸವಕೇಂದ್ರ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಪಾಟೀಲ, ಮಲ್ಲಣಗೌಡ ಕನ್ಯಾಕೋಳೂರ, ಜಗನ್ನಾಥ ಉಕನಾಳ, ಐ.ಎಸ್. ಹಿರೇಮಠ, ಡಾ| ಮಹಾಂತೇಶ ಹಿರೇಮಠ, ನಾನಾಗೌಡ ಹರನಾಳ, ವಿಜಯಕುಮಾರ ಪಾಟೀಲ ಸೇಡಂ, ಪ್ರಕಾಶ್ಚಂದ್ರ ಕೂಡಿ, ವಿಶ್ವನಾಥ ಶೆಟ್ಟರ್, ಸೂಗುರೇಶ ಜಾಕಾ, ಮಹಾನಂದ ಹಿರೇಗೌಡ, ನಾಗಮ್ಮ ಬೀಳವಾರ, ಸಾವಿತ್ರಿ ಹಳ್ಳಿ, ಮಹಾನಂದ ಮಾಲಿಪಾಟೀಲ, ಪ್ರೇಮಾ ಕಲ್ಲಾ, ಬಸಮ್ಮ ಕೂಡಿ, ಸವಿತಾ ಪಾಟೀಲ, ಪ್ರೇಮಾ ನರಿಬೋಳ, ರಾಜೇಶ್ವರಿ ಹಿರೇಗೌಡ, ವಿಜಯಲಕ್ಷ್ಮಿ ಪೊಲೀಸ್ ಪಾಟೀಲ, ಲಕ್ಷಿ¾à ಬಂಟನೂರ ಇದ್ದರು.