Advertisement
ಬಳಸಿ ಎಸೆದ ಪ್ಲಾಸ್ಟಿಕ್, ಪೇಪರ್, ಲೋಹದಂತಹ ತ್ಯಾಜ್ಯಗಳು ಪರಿಸರ ನಾಶಕ್ಕೆ ಮಾತ್ರವಲ್ಲದೆ ಪ್ರಾಣಿಗಳ ಜೀವಕ್ಕೆ ಕುತ್ತಾಗಿ ಬದಲಾಗುತ್ತಿದೆ. ಪರಿಸರ ಕಾಳಜಿ ಕುರಿತಂತೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದರೂ ನಿತ್ಯ ಪ್ರತಿ ಮನೆಯಿಂದ ಮರುಬಳಕೆ ಮಾಡಬಹುದಾದ ಒಣ ತ್ಯಾಜ್ಯಗಳು ಡಂಪಿಂಗ್ ಯಾರ್ಡ್ ಸೇರುತ್ತಿದೆ. ಪ್ರಾರಂಭಿಕ ಹಂತದಲ್ಲಿ ಡಂಪಿಂಗ್ ಯಾರ್ಡ್‌ಗಳಲ್ಲಿ ಮಣ್ಣು ತೆಗೆದು ಮುಚ್ಚಲಾಗುತ್ತಿತ್ತು. ಈಗ ಹಸಿ ಕಸ , ಒಣ ಕಸ ಪ್ರತ್ಯೇಕಿಸಿ ಸಂಸ್ಕರಣೆ ಮಾಡುತ್ತಾರೆ. ಆದರೆ ಹಸಿ ಕಸ ಒಣ ಕಸ ಪ್ರತ್ಯೇಕಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಎಷ್ಟೇ ಹೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್, ವೇಸ್ಟ್ ಪೇಪರ್, ಇ- ವೇಸ್ಟ್‌ಗಳಂತಹ ತ್ಯಾಜ್ಯಗಳನ್ನು ಪರಿಸರ ಸ್ನೇಹಿಯಾಗಿ ಮರು ಸಂಸ್ಕರಣೆ ಮಾಡುವ ಜವಾಬ್ದಾರಿಯುತ ಕೆಲಸವನ್ನು ನೇಚರ್ ಫ್ರೆಂಡ್ಲಿ ರಿ ಸೈಕಲ್ ಇಂಡ ಸ್ಟ್ರೀಸ್ ಆ್ಯಂಡ್ ವೇಸ್ಟ್ ಮ್ಯಾನೇಜ್ ಮೆಂಟ್ ಮಾಡುತ್ತಿದೆ. ಒಣ ತ್ಯಾಜ್ಯ ನಿರ್ವಹಣೆಯಲ್ಲಿ ಸಮಗ್ರ ಸೇವೆಯಾಗಿದೆ. ಈ ಸೇವೆಯಲ್ಲಿ 1989ರಿಂದ ಸಂಸ್ಥೆ ತೊಡಗಿಕೊಂಡಿದ್ದು, ಇದಕ್ಕಾಗಿ ಅತಿ ಹೆಚ್ಚು ಪರಿಣತಿ ಹೊಂದಿರುವ ತಂಡವನ್ನು ರಚಿಸಿದೆ. ಪ್ರಾರಂಭಿಕ ಹಂತದಲ್ಲಿ ಪಚ್ಚನಾಡಿ ಡಂಪಿಂಗ್ ಯಾರ್ಡ್ ಸಮೀಪ ಒಣ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪಿಸಿದ ಸಂಸ್ಥೆ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬೈಕಂಪಾಡಿ ಕೈಗಾರಿಕಾ ವಲಯ ಹಾಗೂ ಕುಳೂರಿನಲ್ಲಿ ತಮ್ಮ ಉದ್ದಿಮೆ ಆರಂಭಿಸಿತು. ಮುಂದಿನ ಜನಾಂಗಕ್ಕೆ ಉತ್ತಮ ಪರಿಸರ ನೀಡುವ ಉದ್ದೇಶದಿಂದ ಸಂಸ್ಥೆ ನಿಷ್ಠೆಯಿಂದ ಕಾರ್ಯಚರಿಸುತ್ತಿದೆ.
Related Articles
Advertisement
ವೇಸ್ಟ್ ಪೇಪರ್ಮರುಬಳಕೆ ಮಾಡಬಹುದಾದ ತ್ಯಾಜ್ಯಗಳನ್ನು ಡಸ್ಟ್‌ಬೀನ್‌ಗಳಿಗೆ ಹಾಕುವ ಬದಲಾಗಿ ಸಂಗ್ರಹಿಸಿ ದೊಡ್ಡ ಮಟ್ಟದಲ್ಲಿ ಸಂಸ್ಥೆಗೆ ನೀಡಿದರೆ ಅದನ್ನು ಮರುಬಳಕೆ ಮಾಡುವಂತೆ ತಯಾರು ಮಾಡಲಾಗುತ್ತದೆ. ಮೆಟಲ್, ಗ್ಲಾಸ್ ವೇಸ್ಟ್‌ಗಳು
ಎಲ್ಲ ತರಹದ ಲೋಹ ವಸ್ತುಗಳು ಹಾಗೂ ಗ್ಲಾಸ್‌ಗಳನ್ನೂ ಮರುಬಳಕೆ ಮಾಡಬಹುದಾಗಿದೆ. ಇದನ್ನು ಒಂದು ಬಾರಿ ಮಾತ್ರವಲ್ಲದೇ ಹಲವು ಬಾರಿ ಮರುಬಳಕೆ ಮಾಡಬಹುದಾಗಿದೆ. ಅದರಂತೆ ರಬ್ಬರ್, ತೆಂಗಿನ ಚಿಪ್ಪು, ಟಯರ್, ಎಲೆಕ್ಟ್ರಾನಿಕ್ ವೇಸ್ಟ್‌ಗಳಾದ ಬ್ಯಾಟರಿ, ವಯರ್ ಹಾಗೂ ಕಂಪ್ಯೂಟರ್ ವೇಸ್ಟ್‌ಗಳನ್ನು ಸಂಸ್ಥೆಗೆ ನೀಡಿದರೆ ಮರು ಸಂಸ್ಕರಣೆ ಮಾಡಲಾಗುತ್ತದೆ. ಸಂಸ್ಥೆ ಪರಿಸರ ಕಾಳಜಿಯೊಂದಿಗೆ ಮುಂದಿನ ಜನಾಂಗಕ್ಕೆ ಉತ್ತಮ ಪರಿಸರವನ್ನು ಬಳುವಳಿಯಾಗಿ ಕೊಡುವ ನಿಟ್ಟಿನಲ್ಲಿ ಕಾರ್ಯಚರಿಸುತ್ತಿದೆ. ಸದ್ಯ ಡಂಪಿಂಗ್ ಯಾರ್ಡ್‌ಗಳಿಂದ ಒಣ ಕಸಗಳನ್ನು ಸಂಗ್ರಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮನೆಗಳಿಂದಲೇ ಕಸ ಸಂಗ್ರಹಿಸುವ ಬಗ್ಗೆ ಯೋಜನೆ ರೂಪಿಸಲಾಗುತ್ತದೆ ಎಂದು ಸಂಸ್ಥೆಯ ಹಾರೀಸ್ ಮೊಹಮ್ಮದ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ www.naturefriendlyrecycle.in ಹಾಗೂ naturefriendlyrecycle@gmail.com ಸಂಪರ್ಕಿಸಬಹುದು. ಪ್ಲಾಸ್ಟಿಕ್ ಪರಿಸರಕ್ಕೆ ಮಾರಕ
ಜಗತ್ತಿನ ಎಲ್ಲ ಭಾಗಗಳಲ್ಲೂ ಅತಿ ಹೆಚ್ಚು ಬಳಕೆಯಾಗುವ ವಸ್ತುಗಳಲ್ಲಿ ಪ್ಲಾಸ್ಟಿಕ್ ಕೂಡ ಒಂದು. ಬಳಸಿ ಎಲ್ಲೆಂದರಲ್ಲಿ ಎಸೆಯುವುದರಿಂದ ಇದು ಮಾನವ ಸಂಕುಲದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅದಕ್ಕಾಗಿ ಸಂಸ್ಥೆ ಇದನ್ನು ಪರಿಸರ ಸ್ನೇಹಿಯಾಗಿ ಸಂಸ್ಕರಣೆ ಮಾಡಲು ಮುತುವರ್ಜಿ ವಹಿ ಸುತ್ತಿದೆ. ನಿತ್ಯ ಹಲವು ಟನ್ ಪ್ಲಾಸ್ಟಿಕ್‌ಗಳನ್ನು ಮರು ಸಂಸ್ಕರಣೆ ಮಾಡುತ್ತಿದೆ.