Advertisement
ಅತಿ ವೇಗದಲ್ಲಿ ಬೆಳೆಯುತ್ತಿರುವ ಜಿಲ್ಲೆಯ ಎಲ್ಲ ಪೇಟೆಗಳಿಗೆ ಇ-ಆಟೋಗಳು ಅನುಯೋಜ್ಯ ವಾಗಿವೆ. ಶೀಘ್ರದಲ್ಲೇ ಈ ಕಡೆಗಳಲ್ಲಿ ಇ-ಆಟೋಗಳು ಆಗಮಿಸಿ, ಸಂಚಾರ ನಡೆಸಲಿವೆ. ಪ್ರತಿದಿನ ಇಂಧನ ಬಳಸುವ ವಾಹನಗಳು ನೀಡುವ ಪರಿಸರ ಮಾಲಿನ್ಯದ ಅಡ್ಡಪರಿಣಾಮದ ಪರಿಹಾರಕ್ಕೆ ಶಾಶ್ವತ ಪರಿಹಾರ ಎಂಬಂತೆ ಪ್ರಕೃತಿ ಸ್ನೇಹಿ ವಾಹನವಾಗಿರುವ ಇ-ಆಟೋವನ್ನು ಎಲ್ಲರೂ ಎರಡೂ ಕೈಗಳಿಂದ ಸ್ವಾಗತಿಸುತ್ತಿದ್ದಾರೆ.
ರಾಜ್ಯ ಸರಕಾರದ ಇ-ವಾಹನ ನೀತಿಯ ಹಿನ್ನೆಲೆಯಲ್ಲಿ ಇ-ಆಟೋದ ನಿರ್ಮಾಣ ನಡೆದಿದೆ. ರಾಜ್ಯ ಸಾರ್ವಜನಿಕ ಸಂಸ್ಥೆ ಕೇರಳ ಅಟೋಮೊಬೈಲ್ಸ್ ನಿಗಮ (ಕೆ.ಎ.ಎಲ್.)ಇ-ಆಟೋವನ್ನು ನಿರ್ಮಿಸುತ್ತಿದೆ. ದೇಶದಲ್ಲೇ ಪ್ರಥಮ ಬಾರಿಗೆ ಸಾರ್ವಜನಿಕ ಸಂಸ್ಥೆಯೊಂದು ಇ-ಆಟೋದಂತಹ ವಾಹನ ನಿರ್ಮಾಣಕ್ಕೆ ಪರವಾನಗಿ ಪಡೆದಿದೆ ಎಂಬುದೂ ಗಮನಾರ್ಹ ವಿಚಾರ. ಈ ವಾಹನದ ಎಲ್ಲ ಬಿಡಿ ಭಾಗಗಳೂ ದೇಶದಲ್ಲೇ ನಿರ್ಮಾಣಗೊಳ್ಳುತ್ತಿವೆ. ನೇರನೋಟಕ್ಕೆ ಇತರ ಆಟೋರಿಕ್ಷಾಗಳಂತೆಯೇ ಕಾಣುವ ರೀತಿ ಇ-ಆಟೋಗಳನ್ನು ತಯಾರಿಸಲಾಗಿದೆ. ಶಬ್ದ ಕಡಿಮೆ ಮತ್ತು ಸುರಕ್ಷಿತ ಚಾಲನೆಯ ವ್ಯವಸ್ಥೆಯೂ ಈ ವಾಹನದ ವಿಶೇಷವಾಗಿದೆ. ಚಾಲಕನಲ್ಲದೆ, ಏಕಕಾಲಕ್ಕೆ ಮೂವರು ಪ್ರಯಾಣಿಕರು ಸಂಚರಿಸಬಹುದಾಗಿದೆ. ಈ ವಾಹನದ ಬೆಲೆ 2.8 ಲಕ್ಷ ರೂ.ಇದೆ. ಆರಂಭದಲ್ಲಿ ನೀಂ ಜೀಂ ಆಟೋಗಳು ಕೆ.ಎ.ಎಲ್. ಸಂಸ್ಥೆಯ ಮೂಲಕ ನೇರವಾಗಿ ಮಾರಾಟಗೊಳ್ಳುತ್ತವೆ. ಮುಂದಿನ ಹಂತ ದಲ್ಲಿ ಉಳಿದ ಜಿಲ್ಲೆಗಳಲ್ಲಿ ಡೀಲರ್ ಶಿಪ್ ನೀಡಲಾಗುವುದು. ಇ-ಆಟೋಗೆ ರಾಜ್ಯ ಸರಕಾರದ ಸಬ್ಸಿಡಿ ಸೌಲಭ್ಯ ಲಭ್ಯ ವಾದರೆ ಬೆಲೆ ಯಲ್ಲಿ 30 ಸಾವಿರ ರೂ. ಕಡಿಮೆಯಾಗಲಿದೆ.
Related Articles
ಇ-ಆಟೋವನ್ನು ನಾವೆಲ್ಲರೂ ಬೆಂಬಲಿಸ ಬೇಕು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಆಗ್ರಹಿಸಿದ್ದಾರೆ. ವಿದ್ಯುನ್ಮಾನ ವಾಹನಗಳ ಬಗ್ಗೆ ನಾವು ತೋರುವ ಆಸಕ್ತಿಯ ಬಲುದೊಡ್ಡ ಹೆಜ್ಜೆಗಾರಿಕೆ ಇ-ಆಟೋಗಳಾಗಿವೆ. ಜಿಲ್ಲೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚುತ್ತಿರುವಂತೆಯೇ ಪರಿಸರ ಮಾಲಿನ್ಯವೂ ನಿಯಂತ್ರಣಾತೀತವಾಗಿ ವರ್ಧಿಸುತ್ತಿದೆ. ಸೌರಶಕ್ತಿ ಮೂಲಕದ ವಿದ್ಯುತ್ ಬಳಕೆಗೆ ಆದ್ಯತೆ ನೀಡುತ್ತಿರುವ ನಮ್ಮ ಮಟ್ಟಿಗೆ ಇ-ಆಟೋ ಮಹತ್ವ ಪಡೆಯುತ್ತದೆ. ಹೆಚ್ಚುವರಿ ಆಟೋಚಾಲಕರು ಇ-ಆಟೋಗಳ ಕಡೆಗೆ ವರ್ಗಾವಣೆ ಗೊಳ್ಳಬೇಕು ಎಂದವರು ಆಗ್ರಹಿಸಿದರು.
Advertisement