ಮಹಾನಗರ: ಬಜ್ಜೋಡಿಯ ಇನ್ಫೆಂಟ್ ಮೇರಿ ಚರ್ಚ್ ವತಿಯಿಂದ ‘ಲಾವ್ದಾತೊ ಸಿ’ ಅನ್ನು ರವಿವಾರ ಆಚರಿಸಲಾಯಿತು.
ಚರ್ಚ್ ಗುರುಗಳಾದ ಫಾ| ಐವನ್ ಡಿ’ಸೋಜಾ ಮತ್ತು ಫಾ| ಪ್ಯಾಟ್ರಿಕ್ ಲೋಬೊ ಅವರು ಚರ್ಚ್ ಆವರಣದಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಛಾಟಿಸಿದರು.
ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಪ್ರಕೃತಿಯ ರಕ್ಷಣೆಗೆ ನಾವು ಶ್ರಮಪಟ್ಟರೆ ಮುಂದಿನ ಪೀಳಿಗೆಯ ಜನರು ಅದರ ಫಲವನ್ನು ಪಡೆಯಲು ಸಾಧ್ಯ. ಪ್ರಕೃತಿ ಉಳಿದರೇ ಮಾತ್ರ ನಾವು ಉಳಿಯಲು ಸಾಧ್ಯ ಎಂದು ಅವರು ಹೇಳಿದರು.
ಬ್ರ| ರೋಶನ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೋಸೆಫ್ ಮಸ್ಕರೇನ್ಹಸ್, ಕಾರ್ಯದರ್ಶಿ ಐರಿನ್ ಪಿಂಟೊ ಅವರು ಉಪಸ್ಥಿತರಿದ್ದರು.
ಯುವಜನರು, ಮಕ್ಕಳು ಅಧಿಕ ಸಂಖ್ಯೆಯಲ್ಲಿ ಗಿಡ ನೆಡುವ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು.
ಐಸಿವೈಎಂ ಬಜ್ಜೋಡಿ ಘಟಕದ ಸದಸ್ಯರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.