Advertisement

ನೇಚರ್‌ ಬಜಾರ್‌

04:00 PM Jul 06, 2019 | Vishnu Das |

ದಸ್ತ್ಕರ್‌, ವತಿಯಿಂದ ನೇಚರ್‌ ಬಜಾರ್‌ನ 15ನೇ ಆವೃತ್ತಿ ನಗರದಲ್ಲಿ ನಡೆಯುತ್ತಲಿದೆ. 100ಕ್ಕೂ ಹೆಚ್ಚು ಕರಕುಶಲ ಗುಂಪುಗಳನ್ನು ಒಗ್ಗೂಡಿಸಿರುವ ದಸ್ತ್ಕರ್‌, ಈ ಬಾರಿಯ ಬಜಾರ್‌ನಲ್ಲಿ ಉದಯೋನ್ಮುಖ ಕರಕುಶಲ ಗುಂಪುಗಳು ಮತ್ತು ವಿನ್ಯಾಸಕರಿಗೆ ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶಿಸಲು ಅವಕಾಶ ನೀಡಿದೆ.

Advertisement

ಬಗೆಬಗೆಯ ಆ್ಯಕ್ಸೆಸರಿಗಳು, ಬೆಳ್ಳಿಯ ಆಭರಣ ಮತ್ತು ಅಲಂಕಾರಿಕ ವಸ್ತುಗಳು, ಲೋಹದ ಕರಕುಶಲ ಉತ್ಪನ್ನಗಳು, ಪಾಟರಿ ಮತ್ತು ಸೆರಾಮಿಕ್ಸ್‌, ಬ್ಯಾಸ್ಕೆಟ್ರಿ ಮತ್ತು ಫೈಬರ್‌ ಉತ್ಪನ್ನಗಳು, ಚರ್ಮದ ಉತ್ಪನ್ನಗಳು, ಸಾಂಪ್ರದಾಯಿಕ ಪೇಂಟಿಂಗ್‌ಗಳು, ಬ್ಲಾಕ್‌ ಪ್ರಿಂಟೆಡ್‌ ವಸ್ತ್ರಗಳು ಹೀಗೆ ದೇಶದ ಉದ್ದಗಲದ ಕರಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟ ವಸ್ತುಗಳು ಇಲ್ಲಿವೆ.

ಸಂತ್ರಸ್ತರಿಗೆ ನೆರವು
ಫ‌ನಿ ಚಂಡಮಾರುತದಿಂದ ಸಂತ್ರಸ್ತರಾದ ಕರಕುಶಲಕರ್ಮಿಗಳ ಮಳಿಗೆಗಳೂ ಬಜಾರ್‌ನಲ್ಲಿ ಇರುವುದು ಮತ್ತೂಂದು ವಿಶೇಷ. ಅವರ ನೆರವಿಗೆ ನಿಂತಿರುವ ದಸ್ತಕರ್‌, ಸಂತ್ರಸ್ತರಿಗಾಗಿ ಪ್ರತ್ಯೇಕ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಿದೆ. ಸಂಕಷ್ಟಕ್ಕೆ ಸಿಲುಕಿದ ಕರಕುಶಲಕರ್ಮಿಗಳಿಗೆ ಆರ್ಥಿಕವಾಗಿ ನೆರವಾಗುವುದು ಈ ಮಳಿಗೆಗಳ ಉದ್ದೇಶ.

ಎಲ್ಲಿ?: ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌, 1, ಜಯಮಹಲ್‌ರಸ್ತೆ, ಕಂಟೋನ್‌ಮೆಂಟ್‌ ರೈಲ್ವೆ ನಿಲ್ದಾಣದ ಹಿಂದೆ
ಯಾವಾಗ?: ಜು. 6-14, ಬೆಳಗ್ಗೆ 11-8

Advertisement

Udayavani is now on Telegram. Click here to join our channel and stay updated with the latest news.

Next