Advertisement

ಕೆಡ್ಡಸ ಹಬ್ಬದೊಂದಿಗೆ ಪ್ರಾಕೃತಿಕ ಮಹತ್ವ: ಸುಂದರ್‌ ಕೇನಾಜೆ‌

12:36 AM Feb 18, 2020 | sudhir |

ಮಡಿಕೇರಿ: ಕೆಡ್ಡಸ ಹಬ್ಬಕ್ಕೆ ತನ್ನದೇ ಆದ ಸಾಂಸ್ಕೃತಿಕ ಪರಂಪರೆ ಇದ್ದು, ಪ್ರಾಕೃತಿಕ ಮಹತ್ವವನ್ನು ಹೊಂದಿದೆ ಎಂದು ಜಾನಪದ ವಿದ್ವಾಂಸ ಸುಂದರ್‌ ಕೇನಾಜೆ ಅವರು ಬಣ್ಣಿಸಿದ್ದಾರೆ.

Advertisement

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಇವರ ವತಿಯಿಂದ, ಶ್ರೀ ಭಗವಾನ್‌ ಸಂಘ ಊರುಬೈಲು, ಸ್ವಾಮಿ ವಿವೇಕಾನಂದ ಯುವಕ ಮಂಡಲ ಇವರ ಸಹಯೋಗದಲ್ಲಿ ಚೆಂಬು ಗ್ರಾಮದ ಕೂಡಡ್ಕ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಅರೆಭಾಷೆ ಸಿರಿ ಸಂಸೃRತಿ ಮತ್ತೆ ಕೆಡ್ಡಸ ಗೌಜಿ ಸಾಂಸ್ಕೃತಿಕ ಜಂಬರ ಕಾರ್ಯಕ್ರಮದಲ್ಲಿ, ಜನಪದರ ಬೊಧ್ಕುಲಿ ಕೆಡ್ಡಸ ಹಬ್ಬ ವಿಷಯದ ಕುರಿತು ಮಾತನಾಡಿದರು.

ವರ್ಷವಿಡಿ ಫ‌ಲ ಕೊಡುವ ಭೂಮಿಗೆ ಪೂಜೆ ಸಲ್ಲಿಸುವುದೇ ಈ ಹಬ್ಬದ ಮುಖ್ಯ ಉದ್ದೇಶ. ಮನೆಯ ಹಿರಿಯ ಹೆಣ್ಣುಮಗಳು ಭೂಮಿಗೆ ತೆಂಗಿನ ಎಣ್ಣೆಯನ್ನು ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ಕೊಡಗು ಮಾತ್ರವಲ್ಲದೆ ಕರಾವಳಿ ಭಾಗದಲ್ಲೂ ಈ ರೀತಿಯ ಆಚರಣೆಗಳಿವೆ. 3 ದಿನಗಳು ನಡೆಯುವ ಈ ಹಬ್ಬ ವೈಷ್ಟ್ಯತೆಗಳಿಂದ ಕೂಡಿರುತ್ತದೆ ಎಂದರು. ಬಳಿಕ ಕೆಡ್ಡಸ ಹಬ್ಬದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಸ್ವಾಮಿ ವಿವೇಕಾನಂದ ಯುವಕ ಸಂಘದವರು ಪ್ರಸ್ತುತ ಪಡಿಸಿದರು.

ಅರೆಭಾಷಾ ಚಿಂತಕರು ಮತ್ತು ಕೃಷಿಕರಾದ ಹೊಸೂರು ಚಂದ್ರಶೇಖರ್‌ ಅವರು ಅರೆಭಾಷೆ ಸಂಸ್ಕೃತಿಲಿ ಮನೆ ಒಕ್ಕಲು ಜಂಬರ ಕುರಿತಾಗಿ ಉಪನ್ಯಾಸ ನೀಡಿದರು. ಲೀಲಾವತಿ ಕಲಾಯಿ ಮತ್ತು ಬಳಗದವರ ಮುಂದಾಳತ್ವದಲ್ಲಿ ಪಂಚಾನನ ಭಜನಾ ತಂಡದವ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.

ಅರೆಭಾಷೆ ಚಿಂತಕರು ಮತ್ತು ಅರಂತೋಡು ಕಿರಿಯ ಮಹಿಳಾ ಆರೋಗ್ಯ ಸಹಾಯಕರಾದ ಶೀಲಾವತಿ ಕೃಷ್ಣಪ್ಪ ಬಿಳಿಯಾರ್‌ ಅವರು, ಅರೆಭಾಷಾ ಸಂಸ್ಕೃತಿಲಿ ಕೂಸ್‌ ನ ತೊಟ್ಟಿಗಿಲ್‌ ಹಾಕುವ ಕ್ರಮದ ಬಗ್ಗೆ ಉಪನ್ಯಾಸ ನೀಡಿದರು. ರಮಾನಂದ ಬಾಳೆಕಜೆ ಮತ್ತು ಬಳಗದ ಮುಂದಾಳತ್ವದಲ್ಲಿ ತೊಡಿಕಾನ ಗೌಡ ಯುವ ಸೇವಾ ಸಂಘದವರು ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.

Advertisement

ಅರೆಭಾಷಾ ಸಂಸೃRತಿಲಿ ಮದುವೆ ಜಂಬರ ವಿಚಾರದ ಕುರಿತು ಸಂಸೃRತಿ ಮತ್ತು ಭಾಷಾ ಚಿಂತಕರು, ಲೇಖಕರು ಮತ್ತು ಅಧ್ಯಾಪಕರೂ ಆದ ದೊಡ್ಡಣ್ಣ ಬರೆಮೇಲು ಉಪನ್ಯಾಸ ನೀಡಿದರು.

ಗಣಪಯ್ಯ ಗುಂಡಿ ಮಜಲು ಮತ್ತು ತಂಡದವರ ನೇತೃತ್ವದಲ್ಲಿ ಚೆಂಬುವಿನ ಗೌಡ ಯುವ ಸೇವಾ ಸಂಘದವರು ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಜೊತೆಗೆ ವಿವಿಧ ಸಾಂಸೃRತಿಕ ಕಾರ್ಯಕ್ರಮಗಳು ಜರಗಿದವು.

Advertisement

Udayavani is now on Telegram. Click here to join our channel and stay updated with the latest news.

Next